ಬಕ್ರೀದ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ

ನಂಜನಗೂಡು: ಬಕ್ರೀದ್ ಅಂಗವಾಗಿ ನಗರದ ಈದ್ಗಾ ಮೈದಾನದಲ್ಲಿ ಬುಧವಾರ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಬೆಳಗ್ಗೆಯಿಂದಲೇ ಮಸೀದಿ ಆವರಣಕ್ಕೆ ಶ್ವೇತವಸ್ತ್ರಧಾರಿಗಳಾಗಿ ಆಗಮಿಸುತ್ತಿದ್ದ ಮುಸ್ಲಿಮರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಮಸೀದಿಯ ಧರ್ಮಗುರು ಹಸರತ್ ಮಹಮದ್ ಮುಜಾಫಿರ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು.

ಇದಕ್ಕೂ ಮುನ್ನ ಮುಸ್ಲಿಮರು ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಅಲ್ಲಾನನ್ನು ಜಪಿಸುತ್ತಾ ಸಾಗುವ ಮೂಲಕ ಗಮನ ಸೆಳೆದರು. ನೀಲಕಂಠನಗರ, ಚಾಮಲಾಪುರ ಬೀದಿ ಹಾಗೂ ಸಿನಿಮಾ ರಸ್ತೆಯಲ್ಲಿರುವ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ತಾಲೂಕಿನ ನಗರ್ಲೆ, ಹುಲ್ಲಹಳ್ಳಿ, ದೊಡ್ಡಕವಲಂದೆ ಮಸೀದಿಗಳಲ್ಲಿ ಬಕ್ರೀದ್ ಸಡಗರ ಮನೆ ಮಾಡಿತ್ತು.

ಸಂಸದ ಆರ್.ಧ್ರುವನಾರಾಯಣ, ಶಾಸಕ ಬಿ.ಹರ್ಷವರ್ಧನ್, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ನಗರಸಭಾಧ್ಯಕ್ಷೆ ಪಿ.ಪುಷ್ಪಲತಾ ಸೇರಿದಂತೆ ಹಲವರು ಶುಭಾಶಯ ಕೋರಿದರು.

 

Leave a Reply

Your email address will not be published. Required fields are marked *