ಇಂದಿನಿಂದ ನಂದಿಬೆಟ್ಟ ಅನ್‌ಲಾಕ್, ಆದ್ರೆ ಪ್ರವಾಸಿಗರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ

ಚಿಕ್ಕಬಳ್ಳಾಪುರ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬರೋಬ್ಬರಿ ಐದೂವರೆ ತಿಂಗಳಿಂದ ಕಂಪ್ಲೀಟ್​ ಲಾಕ್‌ ಆಗಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮ ಇಂದಿನಿಂದ (ಸೆ.7) ಅನ್​ಲಾಕ್ ಆಗಿದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಾ.14ರಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶಿಸಿತ್ತು. ಹೀಗಾಗಿ ಸರಿಸುಮಾರು ಐದೂವರೆ ತಿಂಗಳ ಬಳಿಕ ನಂದಿಬೆಟ್ಟ ಪ್ರವೇಶಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ನಂದಿಗಿರಿಧಾಮದ ಚೆಕ್‌ಪೋಸ್ಟ್ ತೆಗೆದಿದ್ದೇ ತಡ ಮುಂಜಾನೆಯಿಂದಲೇ ಕಾತುರದಿಂದ ಕಾಯುತ್ತಿದ್ದ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಟ್ಟರು. ಆದರೆ, … Continue reading ಇಂದಿನಿಂದ ನಂದಿಬೆಟ್ಟ ಅನ್‌ಲಾಕ್, ಆದ್ರೆ ಪ್ರವಾಸಿಗರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ