ವಿಜಯವಾಣಿ ಸುದ್ದಿಜಾಲ ಧಾರವಾಡ
ನಂದಿಕೃಷಿ ಪುನರುತ್ಥಾನದ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರಿನಿಂದ ಕಪ್ಪತಗುಡ್ಡದವರೆಗೆ ಜ. 26ರಿಂದ 28ರವರೆಗೆ ನಂದಿಭೂಷಿತ ಕಪ್ಪತಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಶ್ರೀ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 26ರಂದು ಸಂಜೆ 4 ಗಂಟೆಗೆ ಕಿತ್ತೂರ ಬಳಿಯ ನಿಚ್ಚಣಿಕಿ ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಜ. 27ರಂದು ಬೆಳಗ್ಗೆ 9 ಗಂಟೆಗೆ ನಂದಿಪೂಜೆ ಹಾಗೂ ದೀಪ ಪ್ರಜ್ವಲನ, 9.15ಕ್ಕೆ ಚನ್ನಮ್ಮನ ಕೋಟೆ ಬಳಿಯಿಂದ ಯಾತ್ರೆ ಆರಂಭವಾಗಲಿದೆ. ಬೆಳಗ್ಗೆ 10.40ಕ್ಕೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ ಆಗಮಿಸಿ ನಂದಿಕೊಟ್ಟಿಗೆಯಲ್ಲಿ ನಂದಿ ಪೂಜೆ ನೆರವೇರಿಸಲಾಗುವುದು. 11.30ಕ್ಕೆ ನಂದಿಕೃಷಿ ಸಂಕಲ್ಪ ವೇದಿಕೆ ಕಾರ್ಯಕ್ರಮವು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿದೆ. ಮಧ್ಯಾಹ್ನ 2.30 ರಿಂದ 4ರವರೆಗೆ ಧಾರವಾಡ ಪ್ರದಕ್ಷಿಣೆ ನಡೆಸಿ ನವನಗರಕ್ಕೆ ಪ್ರಯಾಣ ಬೆಳೆಸಲಿದೆ ಎಂದರು.
ಸಂಜೆ 4.30ರಿಂದ 5.30ರವರೆಗೆ ನವನಗರ ಪ್ರದಕ್ಷಿಣೆ, ಸಂಜೆ 6 ಗಂಟೆಗೆ ಈಶ್ವರ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜ. 28ರಂದು ಬೆಳಗ್ಗೆ 9 ಗಂಟೆಯಿಂದ 10ರವರೆಗೆ ಹುಬ್ಬಳ್ಳಿ ನಗರ ಪ್ರದಕ್ಷಿಣೆ ನಡೆಸಿ ಗದಗ ನಗರದತ್ತ ಪ್ರಯಾಣ ಬೆಳೆಸಲಿದೆ ಎಂದರು.
ಬೆಳಗ್ಗೆ 11 ಗಂಟೆಗೆ ಗದಗ ಡಂಬಳ ನಾಕಾದಲ್ಲಿನ ಶ್ರೀ ನಂದಿವೇರಿ ಸಂಸ್ಥಾನ ಮಠದಲ್ಲಿ ಪೂಜೆ, 11.15ರಿಂದ ಗದಗ ನಗರ ಪ್ರದಕ್ಷಿಣೆ, ಮಧ್ಯಾಹ್ನ 12.45ಕ್ಕೆ ಡೋಣಿ ಗ್ರಾಮ ಪ್ರದಕ್ಷಿಣೆ ನಡೆಸಿ ಮಧ್ಯಾಹ್ನ 1.15ಕ್ಕೆ ಕಪ್ಪತಗುಡ್ಡದ ಬಳಿಯ ಶ್ರೀ ನಂದಿವೇರಿ ಸಂಸ್ಥಾನ ಮಠಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.15ಕ್ಕೆ ಬಂಗಾರಕೊಳದ ತೀಥೋರ್ದ್ಭವದ ಪುಣ್ಯತಿರ್ಥ ಪ್ರೋಕ್ಷಣೆ, ನಂದಿವೇರಿ ಬಸವಣ್ಣನ ದರ್ಶನ ಹಾಗೂ ಪ್ರಸಾದ ಸೇವನೆ, 2.30ರಿಂದ ನಂದಿಪೂಜೆ, ನಂದಿ ಕೃಷಿ ಸಂಕಲ್ಪ ಹಾಗೂ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಸಮಾರಂಭದಲ್ಲಿ ಸಚಿವ ಎಚ್.ಕೆ. ಪಾಟೀಲ ಹಾಗೂ ಸ್ಥಳಿಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಶಂಕರ ಕುಂಬಿ, ಬಾಲಚಂದ್ರ ಜಾಬಶೆಟ್ಟಿ, ಡಾ. ವಿಲಾಸ ಕುಲಕರ್ಣಿ, ವೀರಣ್ಣ ಒಡ್ಡೀನ, ಕೆ.ಎಚ್. ನಾಯಕ, ಇತರರು ಇದ್ದರು.
ನಂದಿಭೂಷಿತ ಕಪ್ಪತಜ್ಯೋತಿ ಯಾತ್ರೆ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…