ಫೈಟರ್ ವಿನೋದ್!

ಸಾಲು ಸಾಲು ಆಕ್ಷನ್ ಮಾಸ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ನಟ ವಿನೋದ್ ಪ್ರಭಾಕರ್ ಖಾತೆಗೆ ಮತ್ತೊಂದು ಅಂಥದ್ದೇ ಆಕ್ಷನ್ ಚಿತ್ರ ಸೇರ್ಪಡೆ ಯಾಗುತ್ತಿದೆ. ಚಿತ್ರದ ಶೀರ್ಷಿಕೆ ‘ಫೈಟರ್’. ಕೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನೂತನ್ ಉಮೇಶ್ ನಿರ್ದೇಶನದ ಮಾಡುತ್ತಿದ್ದಾರೆ. ಈ ಹಿಂದೆ ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ಯಂಥ ಪಕ್ಕಾ ಫ್ಯಾಮಿಲಿ ಸಿನಿಮಾ ಮಾಡಿದ್ದ ಉಮೇಶ್, ಆನಂತರ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. 2016ರಲ್ಲಿ ಅವರ ನಿರ್ದೇಶನದ ‘ಅಸ್ತಿತ್ವ’ ತೆರೆಕಂಡಿತ್ತು. ‘ಫೈಟರ್’ ಮೂಲಕ ಈ ಬಾರಿ ಪಕ್ಕಾ ಆಕ್ಷನ್ ಸಿನಿಮಾ ಮಾಡುವ ಸೂಚನೆ ಕೊಟ್ಟಿದ್ದಾರೆ ಉಮೇಶ್. ಈಗಾಗಲೇ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಗೊಂಡಿದ್ದು, ಕುತೂಹಲ ಮೂಡಿಸಿದೆ. ಜುಲೈ 5ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ‘ಫೈಟರ್’ಗೆ ಉಮೇಶ್ ಅವರೇ ಕಥೆ, ಚಿತ್ರಕಥೆ ಬರೆದಿದ್ದರೆ, ಛಾಯಾಗ್ರಹಣದ ಹೊಣೆ ಶೇಖರ್ ಚಂದ್ರ, ರಾಕೇಶ್ ಅವರದ್ದು. ಸಂಕಲನಕಾರರಾಗಿ ಕೆ. ಎಂ. ಪ್ರಕಾಶ್ ಕೆಲಸ ಮಾಡುತ್ತಿದ್ದಾರೆ.