ಸನ್ನಿ ಲಿಯೋನ್ ಮತ್ತೊಬ್ಬ ಪತಿ ಪ್ರತ್ಯಕ್ಷ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನ ಕುರಿತ ಬಯೋಪಿಕ್ ಬಿಡುಗಡೆಗೆ ಸಿದ್ಧವಾಗಿದೆ. ನೀಲಿ ಜಗತ್ತು ಮತ್ತು ಬಣ್ಣದ ಲೋಕದ ಕಥೆಯನ್ನು ‘ಕರಂಜೀತ್ ಕೌರ್; ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಎಂಬ ವೆಬ್ ಸರಣಿ ಮೂಲಕ ಹೇಳಲು ಸನ್ನಿ ಬರುತ್ತಿದ್ದಾರೆ. ವೆಬ್​ಸರಣಿಯ ಟೀಸರ್ ಸಹ ರಿಲೀಸ್ ಆಗಿದ್ದು, ಸನ್ನಿ ಅವರ ಬಾಲ್ಯ ಮತ್ತು ಯೌವನದ ದಿನಗಳ ಕೆಲ ಫೋಟೋಗಳನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ನೀಲಿ ಚಿತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡ ಸನ್ನಿ ಲಿಯೋನ್ ಆ ಇಂಡಸ್ಟ್ರಿಗೆ ಕಾಲಿಟ್ಟಿದ್ದು ಹೇಗೆ? ಏನೂ ತಿಳಿಯದ ವಯಸ್ಸಿನಲ್ಲೇ ಪೋರ್ನ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ? ಅದಕ್ಕೂ ಮೊದಲು ಅವರೇನು ಮಾಡುತ್ತಿದ್ದರು? ಹೀಗೆ ಹತ್ತಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆಯಂತೆ.

ಸನ್ನಿ ಜೀವನದಲ್ಲಿ ಪತಿ ಡೆನಿಯಲ್ ವೆಬರ್ ಪಾತ್ರವೂ ಪ್ರಮುಖವಾದದ್ದು. ಹಾಗಾಗಿ, ವೆಬ್ ಸರಣಿಯಲ್ಲಿ ಅವರ ಪಾತ್ರವೂ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ಹಾಗಂತ ಡೆನಿಯಲ್ ಅವರೇ ಪಾತ್ರಕ್ಕೆ ಬಣ್ಣ ಹಚ್ಚುತ್ತಿಲ್ಲ. ಬದಲಿಗೆ ಸನ್ನಿ ಪತಿಯ ಪಾತ್ರವನ್ನು ಆಫ್ರಿಕನ್ ನಟ ಮಾರ್ಕ್ ಬಕ್ನರ್ ನಿಭಾಯಿಸಲಿದ್ದಾರೆ. ಬಯೋಪಿಕ್ ಅಂದಮೇಲೆ ಅಲ್ಲಿ ನೈಜತೆಗೆ ಹೆಚ್ಚಿನ ಪ್ರಾಶಸ್ಱ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಪಾತ್ರಕ್ಕೆ ಹೊಂದಾಣಿಕೆ ಆಗುವಂತಹ ಕಲಾವಿದರನ್ನೇ ಆಯ್ದುಕೊಂಡಿದ್ದಾರೆ ನಿರ್ದೇಶಕರು. ಜುಲೈ 16ಕ್ಕೆ ಬಿಡುಗಡೆಯಾಗಲಿದೆಯಂತೆ.-ಏಜೆನ್ಸೀಸ್