20.4 C
Bengaluru
Sunday, January 19, 2020

ಉಪ ಚುನಾವಣೆ ಸಮರ: ಸೋಲು-ಗೆಲುವಿನ ಬೆಟ್ಟಿಂಗ್ ಅಬ್ಬರ ಶುರು

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಶಿವರಾಜ ಎಂ.ಬೆಂಗಳೂರು: ಉಪ ಚುನಾವಣೆ ಸಮರದ 15 ಕ್ಷೇತ್ರಗಳ ಪೈಕಿ ಶೇ.90.44 ಮತದಾನವಾಗಿ ದಾಖಲೆ ನಿರ್ಮಿಸಿದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗ ಸೋಲು-ಗೆಲುವಿನ ಬೆಟ್ಟಿಂಗ್ ಅಬ್ಬರ ಶುರುವಾಗಿದೆ.

ತಾಲೂಕಿನ ಪ್ರತಿ ಗ್ರಾಮದ ಜಗುಲಿಕಟ್ಟೆಗಳಲ್ಲೂ ಇದೇ ಚರ್ಚೆ. ಚುನಾವಣೆ ೋಷಣೆಯಾದ ದಿನದಿಂದಲೇ ಆರಂಭಗೊಂಡಿದ್ದ ಬೆಟ್ಟಿಂಗ್ ಚುನಾವಣೆ ಬಳಿಕ ರಂಗುಪಡೆದಿದೆ. ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಸೋಲು-ಗೆಲುವಿನ ಪುಗಸಟ್ಟ್ಟೆ ಬೆಟ್ಟಿಂಗ್ ದೊಡ್ಡ ಸದ್ದು ಮಾಡುತ್ತಿದೆ.

ಯಾವ ಅಭ್ಯರ್ಥಿ ಅಧಿಕಾರ ಗದ್ದುಗೆ ಹಿಡಿಯುತ್ತಾನೆ ಎನ್ನುವ ಚರ್ಚೆ ಒಂದೆಡೆಯಾದರೆ ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾನೆ ಎಂಬ ಬಗ್ಗೆ ಬೆಟ್ಟಿಂಗ್ ಸದ್ದು ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಇರುತ್ತದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು.

ಆದರೆ ಉಪಚುನಾವಣೆಯಲ್ಲಿ ಮತದಾರರು ಹೆಚ್ಚು ಮತದಾನದ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬೆಟ್ಟಿಂಗ್‌ನಲ್ಲೂ ಕ್ಷೇತ್ರ ಹೈವೋಲ್ಟೇಜ್ ಎನಿಸಿದೆ. ದೇಶದಲ್ಲೇ ಹೈಪ್ ಸೃಷ್ಟಿಸಿದ್ದ ಮಂಡ್ಯ ಲೋಕಸಭಾ ಚುನಾವಣೆ ಸಮರದಲ್ಲಿ ಮನೆ, ತೋಟ, ಕಾರು, ಬೈಕ್‌ಗಳ ಬೆಟ್ಟಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಅದಕ್ಕೂ ಒಂದು ಕೈ ಹೆಚ್ಚೇ ಎನ್ನುವಂತೆ ಹೊಸಕೋಟೆಯಲ್ಲಿಯೂ ಬೆಟ್ಟಿಂಗ್ ಜೋರಾಗಿಯೇ ಇದ್ದರೂ ಎಲ್ಲಿಯೂ ಅಧಿಕೃತವಾಗಿಲ್ಲ. ಬಾಯಿ ಮಾತಿನ ಬೆಟ್ಟಿಂಗ್‌ಗೆ ಕೊರತೆಯಿಲ್ಲ.

ಬುಲೆಟ್ ಬೈಕ್ ಸದ್ದು…: ಮತಪ್ರಚಾರದ ವೇಳೆ ಅಭ್ಯರ್ಥಿಗಳ ಪರ ಹಗಲಿರುಳು ದುಡಿದ ಪಕ್ಷದ ಮುಖಂಡರಿಗೆ ಲಿತಾಂಶದ ಬಳಿಕ ಬುಲೆಟ್ ಬೈಕ್‌ಗಳು ಉಡುಗೊರೆಯಾಗಿ ಬರಲಿವೆ ಎಂಬ ಮಾತು ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಚಾರದ ವೇಳೆ ಜನರನ್ನು ಕರೆತರುವುದು, ರ‌್ಯಾಲಿ, ರೋಡ್‌ಶೋಗಳಲ್ಲಿ ಜನರನ್ನು ಜಮಾವಣೆಗೊಳಿಸುವುದು, ಅವರಿಗೆ ಊಟೋಪಚಾರ, ಖರ್ಚಿಗೆ ದುಡ್ಡು, ಸಾರಿಗೆ ಸೌಲಭ್ಯ ಒದಗಿಸಲು ಸಾಕಷ್ಟು ಕಸರತ್ತು ನಡೆಸಿದ್ದ ಮುಖಂಡರಿಗೆ ಪ್ರತ್ಯುಪಕಾರವಾಗಿ ಉಡುಗೊರೆ ನೀಡುವ ಬಗ್ಗೆ ಅಭ್ಯರ್ಥಿಗಳು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪ್ರತಿಷ್ಠೆಯ ಸಂಕೇತ ಎನಿಸಿರುವ ಬುಲೆಟ್ ಬೈಕ್‌ಗಳನ್ನೇ ಮುಖಂಡರಿಗೆ ಉಡುಗೊರೆ ನೀಡಲು ಸಿದ್ಧತೆ ನಡೆದಿದೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಚಿನ್ನದ ಉಂಗುರ ಬರಲೇ ಇಲ್ಲ: ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಚಿನ್ನದ ಉಂಗುರ ಉಡುಗೊರೆ ವದಂತಿ ಸದ್ದಿಲ್ಲದಂತಾಗಿದೆ. ಚಿನ್ನದ ಉಂಗುರ ಆಗ ಬರುತ್ತದೆ, ಈಗ ಬರುತ್ತದೆ. ತೆಲಂಗಾಣದಲ್ಲಿ ತಯಾರಾಗುತ್ತಿದೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಂದು ಜೋರಾಗಿಯೇ ಹಾರಾಡಿತ್ತು.

ಇದರೊಂದಿಗೆ ಬೆಳ್ಳಿ ನಾಣ್ಯದ ಉಡುಗೊರೆಯೂ ಸದ್ದು ಮಾಡಿತ್ತು. ಆದರೆ ಇದ್ಯಾವುದೇ ಉಡುಗೊರೆಗಳು ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಚುನಾವಣೆ ಬಳಿಕ ಇದೇ ಸುದ್ದಿಗಳಿಗೆ ಮತ್ತೆ ರೆಕ್ಕೆಪುಕ್ಕ ಹುಟ್ಟುಕೊಳ್ಳುತ್ತಿದ್ದು, ಲಿತಾಂಶದ ಬಳಿಕ ತಡೆಹಿಡಿದಿರುವ ಚಿನ್ನದ ಉಂಗುರ, ಬೆಳ್ಳಿ ನಾಣ್ಯಗಳು ಮತದಾರರ ಮನೆಬಾಗಿಲಿಗೇ ತಲುಪಲಿದೆಯಂತೆ ಎಂಬ ಮಾತು ರಿಂಗಣಿಸುತ್ತಿದೆ.

ಅಭ್ಯರ್ಥಿಗಳಲ್ಲಿ ಢವಢವ: ಮತದಾರರು ಬೆಟ್ಟಿಂಗ್ ಕಡೆ ಬಿಜಿಯಾಗಿದ್ದರೆ, ಇತ್ತ ಕಡೆ ಅಭ್ಯರ್ಥಿಗಳಲ್ಲಿ ಢವಢವ ಶುರುವಾಗಿದೆ. ಮತದಾನೋತ್ತರ ಸಮೀಕ್ಷೆ, ಜನರಲ್ಲಿ ನಡೆಯುತ್ತಿರುವ ಚರ್ಚೆ ಇವೆಲ್ಲವೂ ಅಭ್ಯರ್ಥಿಗಳ ತಲೆಕೊರೆಯುತ್ತಿವೆ. ಎಲ್ಲಿ ಎಷ್ಟು ಮತದಾನವಾಗಿದೆ. ಎಲ್ಲಿ ಮತದಾರರನ್ನು ಕರೆತರಲು ಮುಖಂಡರು ವಿಲವಾಗಿದ್ದಾರೆ. ಚುನಾವಣೆಯಲ್ಲಿ ಏನೆಲ್ಲ ವರ್ಕ್‌ಔಟ್ ಆಗಿದೆ ಎಂಬುದರ ತುಲನೆಯಲ್ಲಿ ಅಭ್ಯರ್ಥಿಗಳು ತಲೆಕೆಡಿಸಿಕೊಂಡಿದ್ದಾರೆ.

ಸಮೀಕ್ಷೆಗಳಿಗೆ ಕಟ್ಟುಬಿದ್ದ ಬೆಟ್ಟಿಂಗ್: ಚುನಾವಣೆ ಬಳಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಮತದಾನೋತ್ತರ ಸಮೀಕ್ಷೆ ಆಧರಿಸಿ ಬೆಟ್ಟಿಂಗ್ ಕಟ್ಟುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಸೋಲು- ಗೆಲುವಿನ ಪೋಸ್ಟರ್‌ಗಳು ಹರಿದಾಡುತ್ತಿವೆ. ಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ ಇದೆ.

ಲಕ್ಷಕ್ಕೆ 10 ಲಕ್ಷ ರೂ.!: ಮದ್ಯದಂಗಡಿ, ಗೂಡಂಗಡಿ, ಪೆಟ್ಟಿ ಅಂಗಡಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ರೂಪಾಯಿ ಬಾಯಿ ಮಾತಿನ ಬೆಟ್ಟಿಂಗ್ ನಡೆಯುತ್ತಿದೆ. ನಮ್ಮ ಪರ ಅಭ್ಯರ್ಥಿ ಗೆಲುವು ನಿಶ್ಚಿತ. 10 ಲಕ್ಷ ಬೆಟ್ಟಿಂಗ್ ಆದರೂ ಓಕೆ, ಲಕ್ಷಕ್ಕೆ 10 ಲಕ್ಷ ರೂ. ಬೆಟ್ಟಿಂಗ್ ಆದರೂ ಸರಿ ಎಂಬ ಪುಗಸಟ್ಟೆ ಬೆಟ್ಟಿಂಗ್‌ಗಳಿಗೇನೂ ಕೊರತೆ ಇಲ್ಲ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...