22.8 C
Bengaluru
Saturday, January 18, 2020

ರವಿ ಬೆಳಗೆರೆ ಅಂಕಣ: ಓದಿದ ಕಣ್ಣು, ಕೇಳಿದ ಸಂಗೀತ ಮರೆಯುವುದುಂಟೆ?

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಅದು ಶ್ರದ್ಧೆ.

ಈ ಮಾತನ್ನು ಹಿಂದೆಯೂ ಬರೆದಿದ್ದೇನೆ. ‘ನಿಮಗೆ ಅಷ್ಟೆಲ್ಲ ವಿಷಯ, ವಿವರಗಳು ಹೇಗೆ ನೆನಪಿರುತ್ತವೆ?’ ಅಂತ ಯಾರಾದರೂ ಕೇಳಿದಾಗ ನನಗೆ ನೆನಪಾಗುವವರೇ ಸೀತಮ್ಮನವರು.

ಅವರು ನನ್ನ ಗುರುಗಳಾದ ಶಾಮರಾಯರ ಪತ್ನಿ. ಹಿಂದೆ 1992-93ರ ಸುಮಾರಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದವನು ರಾಜಾಜಿನಗರದಲ್ಲಿರುವ ಶಾಮರಾಯರ ಮನೆಗೆ ಹೋದೆ. ‘ರವಿ ಬಂದಾನೆ ನೋಡು, ಕಾಫಿ ಕೊಡು’ ಅಂದರು ರಾಯರು. ಹಿಂದೆಯೇ ನಾನು ‘ಅಮ್ಮಾ ನನಗೆ ಸಕ್ಕರೆ ಬೇಡ’ ಅಂದೆ. ಆಗಷ್ಟೆ ಶುರುವಾಗಿತ್ತು ಮಧುಮೇಹ ಸ್ನೇಹ.

ಅದೊಂದೇ ನಾನು ಅವರಿಗೆ ಕೊಟ್ಟ hint. ಮುಂದೆ ಸುಮಾರು ಹತ್ತು ವರ್ಷಗಳ ನಂತರ ಅವರ ಮನೆಗೆ ಹೋದಾಗ ಅದೇ ಸೀತಮ್ಮನವರು ಕಾಫಿ ತಂದು ಕೈಗಿಟ್ಟವರು ‘ನಿಂಗೆ ಸಕ್ಕರೆ ಹಾಕಿಲ್ಲ ನೋಡು’ ಅಂದರು. ಆಶ್ಚರ್ಯವಾಯಿತು. ಅಷ್ಟು ಹಿರಿಯರು ಅವರು. ನಾನು ಅವರ ಯಜಮಾನರ ಸಂಸ್ಥೆಯ ನೂರಾರು ನೌಕರರ ಪೈಕಿ ಒಬ್ಬ. ಎಷ್ಟೋ ವರ್ಷಗಳ ಹಿಂದಿನ ಮಾತು. ಹೇಗೆ ನೆನಪಿಗುಳಿದಿರಲು ಸಾಧ್ಯ?

‘ಅದೆಲ್ಲ ಶ್ರದ್ಧೆನಪ್ಪಾ. ನಮಗೆ ಶ್ರದ್ಧೆ ಇದ್ದರೆ ಪ್ರತಿ ಚಿಕ್ಕ ವಿಷಯವೂ ನೆನಪಿರುತ್ತೆ…’ ಅಂದು ನಕ್ಕಿದ್ದರು ಆ ತಾಯಿ.

ನೆನಪಿನ ಶಕ್ತಿಯ ವಿಷಯದಲ್ಲಿ ನನ್ನ ಗೂಗಲ್ ಸರ್ಚ್ ಇವತ್ತಿಗೂ ಅದ್ಭುತ. ಅಲ್ಲಿ ಸರ್ವರ್ ಡೌನ್ ಆದದ್ದು ತುಂಬ ಅಪರೂಪ. ಇಷ್ಟು ಅದ್ಭುತ ನೆನಪಿನ ಶಕ್ತಿಯುಳ್ಳ ನಾನು ನಿಜಕ್ಕೂ ಒಳ್ಳೆಯ ವಿದ್ಯಾರ್ಥಿಯಾಗಬೇಕಾಗಿತ್ತು, ಅಲ್ಲವೆ? I was not. ನಾನು ಎಂ.ಎ. ವ್ಯಾಸಂಗಕ್ಕೆ ತೊಡಗುವ ತನಕ ತುಂಬ ಸಾಮಾನ್ಯ ವಿದ್ಯಾರ್ಥಿ.

ಗಣಿತದಲ್ಲಿ ಫೇಲು. ಮಗ್ಗಿ ಇವತ್ತಿಗೂ ಬಾರವು. ಟೆಲಿಫೋನ್ ನಂಬರುಗಳು ತುಂಬ ನೆನಪಿರುವುದಿಲ್ಲ. ನನ್ನ ಕಾರಿನ ನಂಬರು ಗೊತ್ತಿಲ್ಲ. ಅಂಕಿ ಸಂಖ್ಯೆಗಳ ಜಗತ್ತು ನನ್ನನ್ನು ಆಕರ್ಷಿಸುವುದೇ ಇಲ್ಲ. ಹೀಗಾಗಿ ಪರೀಕ್ಷೆಯ ಹೊತ್ತಿಗೆ ಮೂರು ಮೊಳ ನೇಯ್ದು ಹೇಗೋ ಪಾರಾಗಿ ಬಿಡುತ್ತಿದ್ದೆ. ಆದರೆ ಎಂದೋ ಓದಿದ ಕವಿತೆಯ ಸಾಲು, ಕಿವಿಗೆ ಬಿದ್ದ ಗಜಲು, ಓಡಾಡಿದ ರಸ್ತೆ, ಒಂದು ಘಮ, ಕಿವಿಗೆ ಬಿದ್ದ ರಾಗ, ಆದ ರೋಮಾಂಚನ, ಆಡಿದ ಪಿಸುಮಾತು-ಮರೆಯುವುದೇ ಇಲ್ಲ. ಇಂಥ ಮಾತನಾಡಿದಾಗ, ಇಂಥ ಬಟ್ಟೆ ತೊಟ್ಟು, ಇದೇ ಜಾಗದಲ್ಲಿ, ಹೀಗೇ ಕೂತಿದ್ದೆ ಅಂತ ಕೂಡ ಹೇಳಬಲ್ಲಷ್ಟು ನಿಖರ. ಇದೆಲ್ಲ ಹೇಗೆ ಸಾಧ್ಯ?

ನನಗೆ ಖಚಿತವಾಗಿ ಗೊತ್ತಿಲ್ಲ. ನಿನ್ನೆ ಏನು ಬರೆದೆ ಅಂತ ಕೇಳಿದರೆ ಹೇಳಲು ವಿಫಲನಾಗುತ್ತೇನೆ. ನನ್ನ ಕತೆಯ-ಕಾದಂಬರಿಯ ಪಾತ್ರಗಳು ಅನೇಕ ಸಲ (at least, ಆ ಪಾತ್ರಗಳ ಹೆಸರುಗಳು) ಮರೆತು ಹೋಗುತ್ತವೆ. ತುಂಬ ಬರೆಯುವುದರಿಂದ ಹೀಗಾಗುತ್ತಿರಬಹುದು. ಆದರೆ ಓದಿದ್ದೆಲ್ಲ ನೆನಪಿರುತ್ತದಲ್ಲ? ಹೇಗೆ? ತುಂಬ ಓದುತ್ತೇನೆ ಎಂಬುದೂ ಸುಳ್ಳಲ್ಲ. ಮನಸ್ಸಿನ ವ್ಯಾಪಾರವೇ ಕೆಲವೊಮ್ಮೆ ವಿಚಿತ್ರ ಅನ್ನಿಸಿಬಿಡುತ್ತದೆ.

ನನ್ನ ಕೆಲವು ಗೆಳೆಯರೊಂದಿಗೆ ಮಾತನಾಡುವಾಗ ಫಕ್ಕನೆ ಯಾವುದೋ ಮಾತು ಆಕರ್ಷಕವೆನ್ನಿಸಿ ಅಲ್ಲೇ ಒಂದು ಚೀಟಿಯಲ್ಲಿ ಬರೆದು ಇಟ್ಟುಕೊಳ್ಳುತ್ತೇನೆ. ಈ ಕೆಲಸಕ್ಕೆ ನಾನು ರೆಕಾರ್ಡರ್ ಬಳಸಿದ್ದಿಲ್ಲ. ನಂದೊಂದು ನಂಬಿಕೆಯೆಂದರೆ-ಬರೆಯುವಾಗ ನನ್ನ ಬೆರಳು, ಬೆರಳ ತುದಿ, ಮನಸು, ಮಿದುಳು-ಇವೆಲ್ಲವೂ ಏಕತ್ರಗೊಂಡಿರುತ್ತವೆ. ಮಿದುಳಿನಲ್ಲಿ ಯಾವ ಎನ್​ಜೈಮ್ ಯಾವ ಹಾಮೋನು ಕೆರಳಿ, ಜಿನುಗಿ, ಹೇಗೆ ಕೆಲಸ ಮಾಡುತ್ತದೋ ಗೊತ್ತಿಲ್ಲ. ಬರೆಯಲು ಕೂಡಬೇಕಷ್ಟೆ: ಉಳಿದೆಲ್ಲ ಸರಾಗ ಸರಾಗ.

ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಗೆ ರಾತ್ರಿ ಸರಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಕವಿತೆಯ ಮೊದಲ ಸಾಲು ಸ್ಪುರಿಸಿ ಬಿಡುತ್ತಿತ್ತಂತೆ. ಉಳಿದ ಸಾಲುಗಳು ಅದರ ಹಿಂದೆ ಹಿಂದೆಯೇ ಸಾಲುಗಟ್ಟುತ್ತಿದ್ದವು. ಆ ನಂತರ ಗಂಟೆಗಟ್ಟಲೆ ದಿನಗಟ್ಟಲೆ ಅವುಗಳನ್ನು ತೀಡಿ-ತಿದ್ದಿ… ಅದೆಲ್ಲ ಇದ್ದದ್ದೇ. ಆದರೆ ತಿದ್ದುತ್ತಿದ್ದುದು ಕಾಗದದ ಮೇಲಲ್ಲ: ಮನಸ್ಸಿನಲ್ಲಿ ಅನ್ನುತ್ತಿದ್ದರು ನರಸಿಂಹಸ್ವಾಮಿ. ಅಂದರೆ ಮನಸು ನಿರಂತರವಾಗಿ ಅದೇ ಸಂಗತಿಯನ್ನು ಗಂಟೆಗಟ್ಟಲೆ-ದಿನಗಟ್ಟಲೆ ಧೇನಿಸುತ್ತಿರಬೇಕು ಎಂದಲ್ಲವೆ ಅದರ ಅರ್ಥ. ಹೆಚ್ಚಿನ ಉರ್ದು ಕವಿಗಳು ತಮ್ಮ ಇಡೀ ಗಜಲನ್ನು ತುಂಡು ಕಾಗದದ ನೆರವೂ ಇಲ್ಲದೆ ಹೇಳುತ್ತ ಹೋಗುತ್ತಾರೆ. ಗೆಳೆಯ ಅಶೋಕ ಶೆಟ್ಟರನಿಗೆ ಈ ಚೈತನ್ಯವಿದೆ.

In fact, ನಮ್ಮ ಪಂಚೇಂದ್ರಿಯಗಳೂ ಸಂಲಗ್ನವಾಗಿ- ಏಕತ್ರಗೊಂಡಂತೆ (at a time ಅಂತೀವಲ್ಲ, ಹಾಗೆ) ಪಾಲ್ಗೊಳ್ಳುವುದು ಬಹುಶಃ ದೈಹಿಕ ಸಾಂಗತ್ಯದಲ್ಲೇ. ಅಲ್ಲಿ ನೋಟ, ಘಮ, ಸ್ಪರ್ಶ, ರುಚಿ, ಶಬ್ದ-ಎಲ್ಲವೂ ತೊಡಗಿಕೊಂಡು ಬಿಡುತ್ತವೆ. ಇಂಥ ದೇಹ ಸಹಜ, ಪ್ರಕೃತಿ ಸಹಜ ಕ್ರಿಯೆಯಲ್ಲಿ ಸುಖ ಕಾಣದವನು, ರುಚಿ ಕಳೆದುಕೊಂಡವನು, ನಿರಾಸಕ್ತನಾದವನು ಬೇರೆಲ್ಲೋ ಮೈಮರೆಯ ಬಯಸುತ್ತಾನೆ.

ಕುಡಿತ, ಗಾಂಜಾ, ಅಧ್ಯಾತ್ಮ-ಹೀಗೆ ಏನೂ ಆಗಬಹುದು. ಇಂಥ ದಿವ್ಯ ಆನಂದಕ್ಕೆ ಸಮಸಮೀಪದ ಅನುಭವವನ್ನೇ ನಾನು ಓದಿನಲ್ಲಿ, ಬರವಣಿಗೆಯಲ್ಲಿ, ಸಂಗೀತದಲ್ಲಿ, ಇದ್ಯಾವುದೂ ಅಲ್ಲದ ಏಕಾಂತ (solitude)ದಲ್ಲಿ ಅನುಭವಿಸಿದ್ದಿದೆ. ಈಗ ಪರೀಕ್ಷಿಸಿಕೊಂಡರೆ, ನನ್ನಲ್ಲಿ ಹಾಗೆ ಗೆರೆ ಕೊರೆದಂತೆ-ಹಸೀ ಗೋಡೆಗೆ ಹರಳು ಒಗೆದಂತೆ ನೆನಪಿಗಿರುವುದೆಲ್ಲ ಈ ಮೇಲಿನ ಸಂಗತಿಗಳಿಗೆ ಸಂಬಂಧಿಸಿದಂತಹವೇ.

ಕಾಮಕ್ಕೆ, ಓದಿಗೆ, ಸಂಗೀತಕ್ಕೆ, ರುಚಿಗೆ ಸಂಬಂಧಿಸಿದಂತಹವೇ. ಅವುಗಳಲ್ಲಿ ಪಂಚೇಂದ್ರಿಯಗಳೂ ತೊಡಗಿಕೊಂಡಿದ್ದರಿಂದಲೇ ಹಾಗೆ ಅವೆಲ್ಲ ನೆನಪಿಗಿವೆ. ಓದಿದ ಕಣ್ಣು, ಕೇಳಿದ ಸಂಗೀತ, ತಿಂದ ಆಹಾರ, ಅಪ್ಪಿಕೊಂಡಾಗಿನ ಮೃದು ಬಿಸುಪು ಮುಂತಾದವು ಮರೆಯುತ್ತವಾದರೂ ಹೇಗೆ ಹೇಳಿ?

ಓದುವ, ಕೇಳುವ, ನೋಡುವ ವಿಷಯಗಳಲ್ಲೂ ನಾವು ಪಂಚೇಂದ್ರಿಯಗಳನ್ನು ತೊಡಗಿಸಿಕೊಳ್ಳುವ ವಿದ್ಯೆ ಪಳಗಿಸಿಕೊಳ್ಳಬೇಕು. ಅದೂ ಸಾಧನೆಯೇ. ನೆನಪಿಡಿ, ನಾವು ತುಂಬ ತಲ್ಲೀನರಾಗದ ಹೊರತು, ಹರ್ಷಿತರಾಗದ ಹೊರತು, ದುಃಖಿತರಾಗದ ಹೊರತು, ಅಚ್ಚರಿಗೊಳಗಾಗದ ಹೊರತು, ರೋಮಾಂಚಿತರಾಗದ ಹೊರತು, ತನ್ಮಯರಾಗದ ಹೊರತು ಯಾವುದೂ ಅಷ್ಟು ಕರಾರುವಾಕ್ಕಾಗಿ ನೆನಪಿಗಿರುವುದಿಲ್ಲ.

ಅನಾಸಕ್ತ ಸಂಗತಿಗಳನ್ನು ಮನಸೆಂಬ ಕಂಪ್ಯೂಟರು ಅಳಿಸಿ ಹಾಕಿಬಿಡುತ್ತದೆ-ಜಸ್ಟ್ ಡಿಲೀಟ್! ಕಾಲವೆಂಬುದು ನೆನಪುಗಳ ಪಾಲಿನ ಮಿತ್ರನೂ ಹೌದು, ಶತ್ರುವೂ ಹೌದು. ಅಡಿಗರು ತಮ್ಮ ಬದುಕಿನ ಕುರಿತು ಬರೆಯುತ್ತ ಅದೆಷ್ಟು ಒದ್ಡಾಡಿರಬಹುದು ಎಂಬುದನ್ನು ಅರಿಯಬೇಕಾದರೆ ಅವರ ‘ನೆನಪಿನ ಗಣಿ’ ಓದಬೇಕು.

ಕೊಂಚ ವಯಸ್ಸಾದ ಮೇಲೆ ಅನಿರೀಕ್ಷಿತವಾಗಿ ಛಕ್ಕನೆ ಎದ್ದರೆ, ಬಗ್ಗಿದರೆ, ಓಡಿದರೆ ಎಲ್ಲೋ ಮೀನಖಂಡದಲ್ಲಿ ಉಳುಕಿದಂತೆ, ಹಿಡಕೊಂಡಂತೆ ಆಗಿ ಪ್ರಾಣವೇ ಬಾಯಿಗೆ ಬಂದ ಅನುಭವವಾಗುತ್ತದೆ ನೋಡಿ? ಅಂಥ ಪರಿ ಸಕ್ರಿಯವಾಗಿದ್ದ ದೇಹ ಇದೇನಾ ಅನ್ನಿಸಿ ಆಶ್ಚರ್ಯವಾಗುತ್ತದೆ. ನೆನಪುಗಳ ಸಂಗತಿಯಾದರೂ ಅಷ್ಟೇ. ಶ್ರದ್ಧೆ ಕಡಿಮೆಯಾಯಿತೆಂದರೆ ಎಂತೆಂಥ ನೆನಪು ಕೂಡ ಲಟಕ್ಕನೆ ಪುಸುಗಿ ತಪ್ಪಿಸಿಕೊಂಡು ಬಿಡುತ್ತವೆ. ಹಾಗಾಗಲಿಕ್ಕೆ ಅಡಿಗರಿಗೆ ಪಾರ್ಶ್ವವಾಯು ಹೊಡೆದದ್ದೂ ಕಾರಣವಿರಬಹುದು. ಆ ರೋಗ ಮಿದುಳಿನ ದೊಡ್ಡ ಭಾಗವನ್ನು ಕೊಂದುಬಿಡುತ್ತದೆ.

ಆದರೆ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ನೆನಪು ಗೆರೆ ಕೊರೆದಂತೆ ಸ್ಪಷ್ಟವಿತ್ತು. ಒಂದು ವಿಷಯವನ್ನು ಎಷ್ಟು ಸಾವಿರ ಸಲ ಹೇಳಿದರೂ, ಒಂದೇ ಒಂದು ಅಕ್ಷರ-ಸಂಗತಿ ಏರುಪೇರಾಗುತ್ತಿರಲಿಲ್ಲ. ಇದರ ಹಿಂದಿನ ಗುಟ್ಟು ಇಷ್ಟೆ: ಅವರು ಆ ಕುರಿತು ಮತ್ತೆ ಮತ್ತೆ ಧೇನಿಸುತ್ತಿದ್ದರು. ಅವರ ಪಾಲಿಗೆ ನೆನಪಿನ ಶಕ್ತಿಯೇ ಬಹುದೊಡ್ಡ ಮಿತ್ರ. ಮರೆತುಬಿಡಬೇಕಾದುದನ್ನು ಅವರು ಎಂದೋ ಮರೆತಿದ್ದರು. ಅವರು ಮೆಲುಕು ಹಾಕುತ್ತಿರಲಿಲ್ಲ. ಅದೂ ಜಾಣತನವೇ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...