More

  ರಾಮನಗರದ ಈ ಪಟ್ಟಣಕ್ಕೂ ನಮ್ಮ ಮೆಟ್ರೋ, ಕೈಗಾರಿಕಾ ಕೇಂದ್ರಕ್ಕೆ ನಮ್ಮ ಮೆಟ್ರೋ ಸೇವೆಗಳ ವಿಸ್ತರಣೆಯಾಗಲಿದ್ಯಾ?

  ಪ್ರತಿದಿನ ಸಾವಿರಾರು ಪ್ರಯಾಣಿಕರ ಪ್ರಯಾಣದ ಒಡನಾಡಿಯಾದ ಬೆಂಗಳೂರು ಮೆಟ್ರೋ ಕುರಿತು ಮಹತ್ವದ ಸುದ್ದಿಯೊಂದಿದೆ.
  ರೋಹಳ್ಳಿ ಕೈಗಾರಿಕಾ ಕೇಂದ್ರಕ್ಕೆ ನಮ್ಮ ಮೆಟ್ರೋ ಸೇವೆಗಳ ವಿಸ್ತರಣೆ ಆಗಬೇಕಿದೆ. ಹಾರೋಹಳ್ಳಿಯವರೆಗೂ ನಮ್ಮ ಮೆಟ್ರೋ ವಿಸ್ತರಣೆಯಾಗಲಿದೆ ಎಂಬ ಚರ್ಚೆ ಶುರುವಾಗಿದೆ.
  ಸದ್ಯ ಈ ಮಹತ್ವದ ಹೇಳಿಕೆಯನ್ನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆಯಾದ ಡಾ. ಸಿ ಎನ್ ಮಂಜುನಾಥ್ ನೀಡಿದ್ದಾರೆ.

  ಹಾರೋಹಳ್ಳಿ ಕೈಗಾರಿಕಾ ಕೇಂದ್ರಕ್ಕೆ ನಮ್ಮ ಮೆಟ್ರೋ ಸೇವೆಗಳ ವಿಸ್ತರಣೆ ಆಗಬೇಕಿದೆ. ಹಾರೋಹಳ್ಳಿಯವರೆಗೂ ನಮ್ಮ ಮೆಟ್ರೋ ವಿಸ್ತರಣೆ ಮಾಡುವಂತೆ ನಾನು ಬಲವಾಗಿ ಒತ್ತಾಯಿಸುತ್ತಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

  ಅಲ್ಲದೇ ಹಾರೋಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡುವುದು ಈ ಪ್ರದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಒಂದೇ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

  ಸಂದರ್ಶನವೊಂದರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆಯಾದ ಡಾ. ಸಿ ಎನ್ ಮಂಜುನಾಥ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ, ಈ ಮೂಲಕ ಹಾರೋಹಳ್ಳಿ ಪ್ರದೇಶಕ್ಕೆ ನಮ್ಮ ಮೆಟ್ರೋ ವಿಸ್ತರಣೆ ಆಗುವ ನಿರೀಕ್ಷೆ ಹುಟ್ಟಿಕೊಂಡಿದೆ.

  See also  ಪ್ರತಿದಿನ 1.5 ಕಿಮೀ ಹೆದ್ದಾರಿ ಅಭಿವೃದ್ಧಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts