21.5 C
Bangalore
Wednesday, December 11, 2019

ಟೋಲ್‌ಗೇಟ್ ಒಡೆಸುವೆನೆಂದ ನಳಿನ್

Latest News

ಒಡವೆ ಹರಾಜಿಗೆ ರೈತರ ಆಕ್ಷೇಪ

ಚಳ್ಳಕೆರೆ: ನಲವತ್ತು ರೈತರ ಒಡವೆಗಳ ಹರಾಜಿಗೆ ಮುಂದಾಗಿದ್ದ ತಾಲೂಕಿನ ಮೀರಸಾಬಿಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಬುಧವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು...

16 ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿ ಅಭಿಯಾನ

ಮೈಸೂರು: ಮೈಸೂರು ತಾಲೂಕಿನಲ್ಲಿ ಒತ್ತುವರಿಯಾಗಿರುವ ಹಾಗೂ ಮೂಲ ಸೌಕರ್ಯವಿಲ್ಲದೆ ಪಾಳುಬಿದ್ದಿರುವ ಸ್ಮಶಾನಗಳನ್ನು ಅಭಿವೃದ್ಧಿಗೊಳಿಸಿ ಹದ್ದುಬಸ್ತಿನಲ್ಲಿಡುವ ಆಂದೋಲನಕ್ಕೆ ಜಯಪುರದಲ್ಲಿ ಬುಧವಾರ ಚಾಲನೆ ನೀಡಲಾಯಿತು. ತಾಲೂಕಿನ 16...

ಆಲೋಚನೆ ದಾರಿ ತಪ್ಪಿದರೆ ಅನಾರೋಗ್ಯ

ಹೊಸದುರ್ಗ: ಜನರ ಆಲೋಚನೆ ಹಾಗೂ ನಡವಳಿಕೆಗಳು ದಾರಿ ತಪ್ಪಿರುವ ಕಾರಣ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುತ್ತಿದೆ ಎಂದು ಕುಂಚಿಟಿಗ ಮಠದ ಶ್ರೀ...

ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ವಿಫಲ

ಮೈಸೂರು: ಶಿಕ್ಷಣ ಕೊಡಿಸುವ ಭರದಲ್ಲಿ ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ನಾವು ಸೋಲುತ್ತಿದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಷಾದಿಸಿದರು. ಧರ್ಮಪ್ರಕಾಶ ಡಿ.ಬನುಮಯ್ಯ...

ಸಂವಿಧಾನದ ಇತಿಹಾಸದಲ್ಲಿಂದು ಕರಾಳ ದಿನ: ಪೌರತ್ವ ಮಸೂದೆಗೆ ಸೋನಿಯಾ ಗಾಂಧಿ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ. ಇಂದು(ಬುಧವಾರ) ಭಾರತ...

<ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕುರಿತು ಸಂಸದರ ಆಕ್ರೋಶ
* ದ.ಕ ಜಿಲ್ಲಾ ಅಭಿವೃದ್ಧಿ, ಸಮನ್ವಯ ಸಮಿತಿ>

ಮಂಗಳೂರು: ಹೆದ್ದಾರಿ ಸಮಸ್ಯೆ ಕುರಿತಂತೆ ಕೇಂದ್ರ ಭೂಸಾರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿಯವರು ಸಭೆ ನಡೆಸಲಿದ್ದು, ಅದಕ್ಕೆ ಮೊದಲು ಪಂಪ್‌ವೆಲ್ ಮೇಲ್ಸೇತುವೆಯ ಕೆಲವು ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ಟೋಲ್‌ಗೇಟ್ ಒಡೆದು ಹಾಕುವುದಾಗಿ ಸಂಸದ ನಳಿನ್ ಕುಮಾರ್ ಎಚ್ಚರಿಕೆ ನೀಡಿದರು.

ಸೋಮವಾರ ದ.ಕ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಅವರು, ಪಂಪ್‌ವೆಲ್ ಫ್ಲೈಓವರ್ ಮುಗಿಯುವವರೆಗೂ ಜಂಕ್ಷನ್‌ನಲ್ಲಿ ಸಂಚಾರ ಸುಗಮವಾಗುವಂತೆ ಕೆಲವೊಂದು ರಸ್ತೆ ಸರಿಪಡಿಸಿಕೊಡಬೇಕು, ಇಲ್ಲವಾದರೆ ಗುತ್ತಿಗೆದಾರರಿಗೆ ಆದಾಯ ತರುವ ಟೋಲ್‌ಗೇಟ್ ಒಡೆಸುತ್ತೇನೆ. ಒಂದೋ ಗುತ್ತಿಗೆದಾರರು, ಇಲ್ಲ ನಾನು ಜೈಲಿಗೆ ಹೋಗಬೇಕಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಪ್‌ವೆಲ್‌ನಲ್ಲಿ ಫ್ಲೈಓವರ್ ಕೆಲಸ ಮುಗಿದಿದೆ. ಆದರೆ ತಡೆಗೋಡೆಯ ಪ್ಯಾನೆಲ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. 700 ಮೀಟರ್ ಸರ್ವಿಸ್ ರಸ್ತೆ ಮುಗಿದಿದ್ದು, ಇನ್ನೂ ಬಾಕಿ ಉಳಿದಿದೆ. ತೊಕ್ಕೊಟ್ಟಿನಲ್ಲೂ ಫ್ಲೈಓವರ್ ಕೆಲಸ ಮುಗಿದು ತಡೆಗೋಡೆ ಕೆಲಸ ನಡೆಯುತ್ತಿದೆ. ಗುತ್ತಿಗೆದಾರರು ಹಣವಿಲ್ಲದೆ ಪರದಾಡುತ್ತಿದ್ದಾರೆ. ಬಿಒಟಿ ಮಾದರಿಯ ಗುತ್ತಿಗೆಯಾದ್ದರಿಂದ ಏನೂ ಮಾಡಲಾಗುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯಕುಮಾರ್ ಕೈಚೆಲ್ಲಿದರು.

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿ.ಪಂ ಸಿಇಒ ಆರ್.ಸೆಲ್ವಮಣಿ ಹಾಜರಿದ್ದರು.

ಮಳೆಗಾಲ ಬಳಿಕ ಬಿ.ಸಿ.ರೋಡ್ ಚತುಷ್ಪಥ: ಬಿ.ಸಿ.ರೋಡ್-ಅಡ್ಡಹೊಳೆ ಕಾಂಕ್ರೀಟ್ ಚತುಷ್ಪಥ ಕಾಮಗಾರಿಯನ್ನು ಮತ್ತೆ ಪ್ರಾರಂಭಿಸುವುದಾಗಿ ಎಲ್‌ಆಂಡ್‌ಟಿ ಕಂಪನಿ ಹೇಳಿದ್ದರೂ, ಕೆಲವು ಕಿರುಸೇತುವೆ ಕೆಲಸವನ್ನಷ್ಟೇ ಕೈಗೊಂಡಿದೆ. ಸಮರ್ಪಕವಾಗಿ ಭೂಸ್ವಾಧೀನ ನಡೆಯದ ಕಾರಣ ಮಳೆಗಾಲದ ಬಳಿಕವಷ್ಟೇ ಹೆದ್ದಾರಿ ಕೆಲಸ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

41 ಹೆಕ್ಟೇರ್‌ನಷ್ಟು ಹೆಚ್ಚುವರಿ ಭೂಸ್ವಾಧೀನ ಆಗಬೇಕಿದೆ. ಇಲ್ಲವಾದರೆ ನಿರಂತರವಾಗಿ ಕೆಲಸ ಮಾಡಲಾಗದು. ಅಲ್ಲಲ್ಲಿ ಭಾಗಶಃ ಕೆಲಸವನ್ನಷ್ಟೇ ಮಾಡಬಹುದು. ಮಳೆಗಾಲದ ಮೊದಲು ಭೂಸ್ವಾಧೀನ ಮಾಡಿಕೊಡಲಿ. ಅಲ್ಲಿವರೆಗೆ 24 ಕಿರುಸೇತುವೆಗಳು ಹಾಗೂ 2 ಮಧ್ಯಮ ಸೇತುವೆಗಳ ಕೆಲಸ ಮಾಡಿ ಮುಗಿಸುತ್ತೇವೆ. ಮಳೆಗಾಲದ ನಂತರ ಹೆದ್ದಾರಿ ಕೆಲಸ ಮಾಡಲಾಗುವುದು ಎಂದು ಎಲ್‌ಆಂಡ್‌ಟಿ ಕಂಪನಿ ಪ್ರತಿನಿಧಿ ವಿವರಿಸಿದರು.

ಶಿರಾಡಿ ಘಾಟ್ ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ: ಶಿರಾಡಿ ಘಾಟ್‌ನಲ್ಲಿ ಕಳೆದ ವರ್ಷ ಮಳೆಯಿಂದ ಹಾನಿಯಾದ ಕಡೆ ಐಐಎಸ್ಸಿ ತಜ್ಞರು ಈಗಾಗಲೇ ಅಧ್ಯಯನ ನಡೆಸಿ, ಸಲ್ಲಿಸಿದ ವರದಿ ಆಧಾರದಲ್ಲಿ ಶಾಶ್ವತ ಪರಿಹಾರಕ್ಕೆ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸುಬ್ಬರಾಮ ಹೊಳ್ಳ ಸಭೆಗೆ ತಿಳಿಸಿದರು.
ಸಾಯಿಲ್ ನೈಲಿಂಗ್ ಮತ್ತು ಮೈಕ್ರೋ ಪೈಲಿಂಗ್ ಅಳವಡಿಸಲು ನಿವೃತ್ತ ಐಐಎಸ್ಸಿ ತಜ್ಞ ಡಿ.ಆರ್.ಶ್ರೀನಿವಾಸ್ ಅವರು ಸಲಹೆ ಮಾಡಿದ್ದಾರೆ. ಬಿ.ಸಿ.ರೋಡ್-ಪೂಂಜಾಲಕಟ್ಟೆ ವರೆಗೆ ದ್ವಿಪಥ ರಸ್ತೆ ಅಭಿವೃದ್ಧಿಗೆ ಮರ ಕಡಿಯುವುದಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದ್ದು ಕೆಲಸ ಚುರುಕುಗೊಳ್ಳಲಿದೆ. ಕುಲಶೇಖರ-ಮೂಡುಬಿದಿರೆ ಹೆದ್ದಾರಿ ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ಪೂರ್ಣಪ್ರಮಾಣದಲ್ಲಿ ಡಾಂಬರು ಹಾಕುವುದಕ್ಕೆ 12 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

ಕೂಳೂರು 6 ಲೇನ್‌ನ ಹೊಸ ಸೇತುವೆ: ಸದ್ಯ ಸುರತ್ಕಲ್-ಬಿ.ಸಿ ರೋಡ್ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಪೂರ್ಣಗೊಂಡಿದೆ, ಮತ್ತೆ 25 ಕಿ.ಮೀ ಡಾಂಬರೀಕರಣ ನಡೆಸಲಾಗುವುದು. ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಿಯಾಗಿ 6 ಲೇನ್‌ನ ಹೊಸ ಸೇತುವೆ ನಿರ್ಮಾಣ ಹಾಗೂ ಹಳೆಯ ಸೇತುವೆಯನ್ನು ತೆಗೆದು, ಅಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡುವ ಕಾಮಗಾರಿಗೆ ಏಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಸದ್ಯ ಡಿಪಿಆರ್ ತಯಾರಿಸಲಾಗುತ್ತಿದೆ. ಹಾಲಿ ಕೂಳೂರು ಸೇತುವೆ ಘನವಾಹನ ಸಂಚಾರಕ್ಕೆ ಅನರ್ಹವಾದ್ದರಿಂದ ಅದನ್ನು ಬಂದ್ ಮಾಡುವ ಕುರಿತು ಜಿಲ್ಲಾಡಳಿತದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.

ವರ್ತುಲ ರಸ್ತೆ ಡಿಪಿಆರ್ ಪ್ರಗತಿ: ಮೂಲ್ಕಿ-ಬಿ.ಸಿ.ರೋಡ್ ವರ್ತುಲ ರಸ್ತೆ ಕಾಮಗಾರಿಗಾಗಿ ಡಿಪಿಆರ್ ಪ್ರಗತಿಯಲ್ಲಿದೆ, ಒಟ್ಟಾರೆ 91 ಗ್ರಾಮಗಳಲ್ಲಿ ಇದು ಹಾದು ಹೋಗಲಿದ್ದು, ಭೂಸ್ವಾಧೀನಕ್ಕೆ ಶೀಘ್ರ ನೋಟಿಸ್ ನೀಡಲಾಗುವುದು. ಭಾರತ್‌ಮಾಲ ಯೋಜನೆಯಡಿ ಸುರತ್ಕಲ್-ಬಿ.ಸಿ.ರೋಡ್ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೂ ಡಿಪಿಆರ್ ಪ್ರಗತಿಯಲ್ಲಿದೆ. ಅಲ್ಲದೆ ಕುದುರೆಮುಖ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು..

Stay connected

278,748FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...