ಗೋಡ್ಸೆ ಬಗ್ಗೆ ವಿವಾದಾತ್ಮಕ ಟ್ವೀಟ್​ ಮಾಡಿ ಕ್ಷಮೆ ಕೇಳಿದ ಸಂಸದ ನಳಿನ್​ ಕುಮಾರ್​ ಕಟೀಲ್​

ಬೆಂಗಳೂರು: ಮಹಾತ್ಮ ಗಾಂಧಿ ಅವರ ಹಂತಕ ನಾಥುರಾವ್​ ಗೋಡ್ಸೆ ಕುರಿತು ವಿವಾದಾತ್ಮಕ ಟ್ವೀಟ್​ ಮಾಡಿದ್ದ ದಕ್ಷಿಣ ಕನ್ನಡದ ಸಂಸದ ನಳಿನ್​ ಕುಮಾರ್​ ಕಟೀಲ್​ ಕ್ಷಮೆ ಕೇಳಿದ್ದಾರೆ.

ಇಂದು ಬೆಳಗ್ಗೆ ನಳಿನ್​ ಕುಮಾರ್​ ಕಟೀಲ್​ ಅವರು ಗೋಡ್ಸೆ ಕುರಿತು ಟ್ವೀಟ್​ ಮಾಡಿದ್ದರು. ಇದಕ್ಕೆ ವಿರೋಧವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಟ್ವೀಟ್​ ಅನ್ನು ಡಿಲೀಟ್​ ಮಾಡಿದ್ದು, ‘ನನ್ನ ಕೊನೆಯ ಎರಡು ಟ್ವೀಟ್​ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ’ ಎಂದು ತಿಳಿಸಿದ್ದಾರೆ.

ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು

ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಅವರ ಟ್ವಿಟರ್​ ಖಾತೆಯಲ್ಲೂ ಗೋಡ್ಸೆ ಕುರಿತು ವಿವಾದಾತ್ಮಕ ಟ್ವೀಟ್​ ಪ್ರಕಟವಾಗಿತ್ತು. ಈ ಕುರಿತು ಈಗ ಪ್ರತಿಕ್ರಿಯೆ ನೀಡಿರುವ ಅನಂತ್​ ಕುಮಾರ್​ ಅವರು ನಿನ್ನೆಯಿಂದ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು. ಗೋಡ್ಸೆ ಕುರಿತು ಟ್ವೀಟ್​ ಆಗಿರುವುದು ತಿಳಿದ ತಕ್ಷಣ ಅದನ್ನು ಡಿಲೀಟ್​ ಮಾಡಿದ್ದೇನೆ. ಈ ಟ್ವೀಟ್​ ಕುರಿತು ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಗಾಂಧೀಜಿ ಹತ್ಯೆಯನ್ನು ನಾನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇಶಕ್ಕೆ ಗಾಂಧೀಜಿ ನೀಡಿದ ಕೊಡುಗೆ ಬಗ್ಗೆ ಅಪಾರ ಗೌರವವಿದೆ ಎಂದು ಅನಂತಕುಮಾರ್​ ಹೆಗಡೆ ಟ್ವೀಟ್​ ಮಾಡಿದ್ದಾರೆ.

ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ

ರಾಜೀವ್​ ಗಾಂಧಿ ದೇಶದ ಐಕ್ಯತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತಹವರನ್ನು ಕೊಂದ ಗೋಡ್ಸೆಯನ್ನು ಬಿಜಪಿಯವರು ದೇವರಂತೆ ಪೂಜೆ ಮಾಡುತ್ತಿದ್ದಾರೆ. ನಳಿನ್​ ಕುಮಾರ್​ ಕಟೀಲ್​ನಂತಹವರ ಸಂಖ್ಯೆ ಮತ್ತು ಅವರಂತಹ ವಿಚಾರಧಾರೆ ಹೆಚ್ಚುತ್ತಿರುವುದರಿಂದ ದೇಶಕ್ಕೆ ತೊಂದರೆಯಾಗುತ್ತಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.

One Reply to “ಗೋಡ್ಸೆ ಬಗ್ಗೆ ವಿವಾದಾತ್ಮಕ ಟ್ವೀಟ್​ ಮಾಡಿ ಕ್ಷಮೆ ಕೇಳಿದ ಸಂಸದ ನಳಿನ್​ ಕುಮಾರ್​ ಕಟೀಲ್​”

  1. Kharge Sir Rajeev Gandhi is a murderer. He killed 17000 sikh+3000 LTTE+ 1000indian army soldier He murdered LTTE and in turn murdered by LTTE. Political end for using army for political purpose. I can understand that your name for CM is under consideration of Pappu

Leave a Reply

Your email address will not be published. Required fields are marked *