ರಾಜಕೀಯದಲ್ಲಿ ಮಸಾಲೆ ಬೇಕು ಎಂದು ನಳಿನ್​ ಕುಮಾರ್​ ಕಟೀಲ್​ ಹೇಳಿದ್ದೇಕೆ ಗೊತ್ತಾ?

ಮಂಗಳೂರು: ರಾಜಕೀಯದಲ್ಲಿ ಮಸಾಲೆ ಬೇಕು, ಇಲ್ಲವಾದರೆ ಸುದ್ದಿಯೇ ಆಗುವುದಿಲ್ಲ, ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.

ದ.ಕ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಮೊನ್ನೆ ಬಿಜೆಪಿ ಕೋರ್ ಕಮಿಟಿ ಸಭೆಗೆ ಸಚಿವ ಆರ್.ಅಶೋಕ್ ಬಂದಿಲ್ಲ, ಅರವಿಂದ ಲಿಂಬಾವಳಿ ಬಂದಿಲ್ಲ ಎಂದು ಸುದ್ದಿಯಾಯಿತು, ಆದರೆ ಇದರಲ್ಲಿ ಸತ್ಯಾಂಶ ಇಲ್ಲ, ಲಿಂಬಾವಳಿ ಸಭೆಯಲ್ಲಿದ್ದರು, ಅಶೋಕ್ ಆರೋಗ್ಯ ಸರಿ ಇರಲಿಲ್ಲ, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕೋರ್ ಕಮಿಟಿ ಯಶಸ್ವಿಯಾಗಿ ನಡೆದಿದೆ ಎಂದು ನಳಿನ್ ಹೇಳಿದರು.

ನಮ್ಮಲ್ಲಿ ಯಾವ ವ್ಯತ್ಯಾಸಗಳಿಲ್ಲ, ಆದರೆ ರಾಜಕೀಯದಲ್ಲಿ ಮಸಾಲೆ ಬೇಕು, ನೆಗೆಟಿವ್ ಬೇಕು. ಅದಕ್ಕಾಗಿ ಹೀಗೆ ಆಗುವುದು ಸಹಜ, ಮಂಗಳವಾರ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಅವರು ಬರಲಿಲ್ಲ, ಇವರು ಬರಲಿಲ್ಲ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಯಿತು, ಆದರೆ ಅಮರನಾಥ ಯಾತ್ರೆಯಲ್ಲಿದ್ದ ಕಾರಣ ಶಾಸಕ ಸುಕುಮಾರ ಶೆಟ್ಟರು ಬಂದಿರಲಿಲ್ಲ, ಉಳಿದವರೆಲ್ಲ ಇದ್ದರು, ಇಂಥದ್ದಕ್ಕೆ ಕಾರ್ಯಕರ್ತರು ವಿಚಲಿತರಾಗುವುದು ಬೇಡ, ನೆಗೆಟಿವ್ ಇದ್ದಾಗ ಮಾತ್ರ ಟಿವಿಯಲ್ಲಿ ಸುದ್ದಿಯಾಗುತ್ತದೆ, ಸಾವಿರ ಕೋಟಿ ರೂ. ಅನುದಾನ ತಂದರೆ ಸುದ್ದಿಯಾಗುವುದಿಲ್ಲ ಎಂದರು.

Leave a Reply

Your email address will not be published. Required fields are marked *