ಪಪಂ ಬಾಗಿಲು ಬಂದ್ ಮಾಡಿ ಪ್ರತಿಭಟನೆ

ನಾಲತವಾಡ: ಶ್ರೀಮಂತರ, ನೌಕರಸ್ಥರ ಹಾಗೂ ಸದಸ್ಯರ ಪಾಲಾದ ಆಸರೆ ಮನೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಸರೆ ಮನೆ ವಂಚಿತ ಮಹಿಳೆಯರು ಪಟ್ಟಣ ಪಂಚಾಯಿತಿ ಕಚೇರಿ ಮುಖ್ಯ ದ್ವಾರವನ್ನು ಬಂದ್ ಮಾಡಿ ಶುಕ್ರವಾರ ಪ್ರತಿಭಟಿಸಿದರು.

ಪಪಂ ಎದುರು 9 ದಿನದಿಂದ ಆಮರಣ ಉಪವಾಸ ಕೈಗೊಂಡಿರುವ ಯುವ ಜನ ಸೇನೆ ಹೋರಾಟ ಪಾರದರ್ಶಕವಾಗಿದ್ದು, ಕೂಡಲೇ ಆಸರೆ ಮನೆಗಳ ಪರಿಶೀಲನೆ ಮಾಡಬೇಕು. ವಿನಾ ಕಾರಣ ಎಲ್ಲ ಮನೆಗಳನ್ನು ರದ್ದುಗೊಳಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಸಂಗೀತಾ ಚಾಂದಕೋಟಿ, ರಿಯಾನಾ ಖಾಜಿ, ಲಕ್ಷ್ಮಿ ಹಡಪದ, ಆಶಾಬಿ ಹಳ್ಳೂರ, ಸವಿತಾ ಲೊಟಗೇರಿ, ಶೀಲಾ ಸಾಲಂಕಿ, ಶಾಂತಾ ಲಾಟಿ, ರತ್ನಾ ಸಾಲಂಕಿ, ಲಕ್ಷ್ಮಿಬಾಯಿ, ಮಹಾದೇವಿ, ಹುಸೇನಬಿ ಬಿಜ್ಜರಗಿ, ವಿಜಯಲಕ್ಷ್ಮಿ ಹೆಸರೂರ ಇದ್ದರು.

ಜಿಲ್ಲಾಧ್ಯಕ್ಷರ ಬೆಂಬಲ

ವಿವಿಧ ಬೇಡಿಕೆ ಈಡೇರಿಕೆಗಾಗಿ ಆಮರಣ ಉಪವಾಸ ಕೈಗೊಂಡಿರುವ ಯುವ ಜನ ಸೇನೆಯ ಹೋರಾಟಕ್ಕೆ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಾರಜೋಳ ಬೆಂಬಲ ವ್ಯಕ್ತಪಡಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ನಂತರ ಮಾತನಾಡಿದ ಅವರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವಿಜಯಪುರದಲ್ಲಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ಉಪಾಧ್ಯಕ್ಷ ದತ್ತಾತ್ರೆಯ ಕುಲಕರ್ಣಿ, ಮಾಳಿಂಗರಾಯ ವನಹಳ್ಳಿ, ಶರತ್ ಸಂಕಗೊಂಡ, ಬಸವರಾಜ ಹಾದಿಮನಿ, ಸಂತೋಷ ಬಿರಾದಾರ, ಸಂಗಣ್ಣ ಪಟ್ಟಮನಿ, ಪ್ರಮೋದ ನರಳಿ ಇತರರಿದ್ದರು.