ನಾಲತವಾಡ: ಸಮೀಪದ ಆಲೂರ ಮಾರುತೇಶ್ವರ ದೇಗುಲದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಪಾಲಕರ ಸಹಯೋಗದಲ್ಲಿ ಸಾಮೂಹಿಕ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು.
ಮುಖ್ಯಗುರು ಎಂ.ವಿ. ಬಿಳೇಬಾವಿ ಮಾತನಾಡಿ, ಕಳೆದ 30 ವರ್ಷಗಳಿಂದ ಗ್ರಾಮದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ಜಾನಪದ ಕಲೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ವೇದಿಕೆ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲಿದೆ ಎಂದರು.
ಸಮಾರಂಭಕ್ಕೆ ಮೈಕ್ಸಟ್ ಕೊಡುಗೆ ನೀಡಿದ ಗ್ರಾಮದ ಈರಪ್ಪಗೌಡ ಹಿರೇಗೌಡರ ಅವರನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಸನ್ಮಾನಿಸಿದರು. ಗಣ್ಯರಾದ ಸಿದ್ದಯ್ಯ ಹಿರೇಮಠ, ಈರಪ್ಪಗೌಡ ಹಿರೇಗೌಡ್ರ, ವಿಶಾಲ ಬಿರಾದಾರ, ಎ್.ಎಂ. ಹಿರೇಗೌಡ್ರ, ಎ.ಸಿ. ಹಾದಿಮನಿ, ಬಿ.ಎಸ್. ಹಾದಿಮನಿ, ನೀಲಕಂಠಯ್ಯ ಹಿರೇಮಠ, ಎಂ.ಎ. ಗೂಳಿ, ಎಚ್.ಎ. ಬಿರಾದಾರ ಇದ್ದರು.
ಶರಣಮ್ಮ ಬೆಳಗಲ್ಲ, ಮಲ್ಲಮ್ಮ ವಾಲೀಕಾರ, ಸಂಗೀತಾ ಬೆಳಗಲ ಪ್ರಾರ್ಥಿಸಿದರು. ಗೀತಾ ಕಾಂಬಳೆ ಸ್ವಾಗತ ಗೀತೆ ಹಾಡಿದರು. ಡಿ.ಎ. ಗೂಳಿ ನಿರೂಪಿಸಿದರು. ಡಿ.ಬಿ. ಬ್ಯಾಕೋಡ ವಂದಿಸಿದರು.