More

  ಪಪಂ ಮೀಸಲಾತಿ ಗೊಂದಲ ನಿವಾರಣೆ

  ನಾಲತವಾಡ: ಕೊನೆಗೂ ಸರ್ಕಾರ ಸ್ಥಳೀಯ ಆಡಳಿತ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿದೆ. ನಾಲತವಾಡ ಪಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಿರಿಸಲಾಗಿದೆ.

  ಹೋರಾಟಕ್ಕೆ ಸಿಕ್ಕ ಜಯ

  ನಾಲತವಾಡ ಪಪಂ ಮೊದಲನೇ ಅವಧಿ ಮುಕ್ತಾಯವಾದ ನಂತರ ಎರಡನೇ ಅವಧಿಯ ಅಧ್ಯಕ್ಷ ಸ್ಥಾನದ ಮೀಸಲು ಪ.ಜಾ. ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಿರಿಸಲಾಗಿತ್ತು. ಈ ಮೀಸಲಾತಿ ಪಟ್ಟಿ ಪ್ರಕಟವಾದ ನಂತರ ಕೆಲವೇ ದಿನಗಳ ನಂತರ ಕಾಂಗ್ರೆಸ್ ಸರ್ಕಾರ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ-ಅ ಎಂದು ಬದಲಾವಣೆ ಮಾಡಿತು. ಮೀಸಲಾತಿ ಬದಲಾವಣೆ ಮಾಡುತ್ತಿದ್ದಂತೆ ಪ.ಜಾತಿಗೆ ಸೇರಿದ ಸದಸ್ಯೆ ಲತಾ ಕಟ್ಟಿಮನಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ನಂತರ ಲತಾ ಕಟ್ಟಿಮನಿ ಪರವಾಗಿ ತೀರ್ಪು ಬಂದಿತ್ತು. ಕಳೆದ ವರ್ಷ ಡಿ.12 ರಂದು ನ್ಯಾಯಾಲಯ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದ ಬಳಿಕವೂ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸದೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಮೇಲಧಿಕಾರಿಗಳಿಗೆ ಸಾಕಷ್ಟು ಬಾರಿ ಅರ್ಜಿ ಕೂಡ ಸಲ್ಲಿಸಿದ್ದರು. ಇಷ್ಟಾದರೂ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ವಿಳಂಬ ಮಾಡಿದ್ದಕ್ಕೆ ಲತಾ ಕಟ್ಟಿಮನಿ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಕೂಡ ಸಲ್ಲಿಸಿದರು. ದೂರು ದಾಖಲು ಮಾಡಿಕೊಂಡ ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ಹಾಗೂ ಚುನಾವಣಾಧಿಕಾರಿಗೆ ತುರ್ತು ನೋಟಿಸ್ ನೀಡಿ ವಿಚಾರಣೆ ಮುಂದೂಡಿತ್ತು. ಆದರೆ ಈಗ ಸರ್ಕಾರವೇ ಅಧ್ಯಕ್ಷ ಸ್ಥಾನವನ್ನು ಪ.ಜಾ.ಮಹಿಳೆಗೆ ಮೀಸಲಿಟ್ಟು ಆದೇಶ ನೀಡಿರುವ ಹಿನ್ನ್ನೆಲೆಯಲ್ಲಿ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಲತಾ ಕಟ್ಟಿಮನಿ ತಿಳಿಸಿದ್ದಾರೆ.

  ಸರ್ಕಾರದ ಆದೇಶದಿಂದ ನನಗೆ ಜಯ ಸಿಕ್ಕಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಕೂಡಲೇ ಆದೇಶ ನೀಡಬೇಕು.
  ಲತಾ ಕಟ್ಟಿಮನಿ, ಸದಸ್ಯೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts