More

  ಮೋದಿಜೀ ಜನತಾ ಕರ್ಫ್ಯೂ ಪಾಲನೆ ಮಾಡಿ

  ನಾಲತವಾಡ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಯನ್ನು ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಪಾಲಿಸಬೇಕೆಂದು ಬಿಜೆಪಿ ಯುವ ಮುಖಂಡ ಗಿರೀಶಗೌಡ ಪಾಟೀಲ ಮನವಿ ಮಾಡಿದರು.
  ದೇಶದಲ್ಲಿ ಕರೊನಾ ರೋಗ ನಿಯಂತ್ರಣಕ್ಕಾಗಿ ಭಾನುವಾರ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು. ವೈರಸ್ ಕುರಿತು ನಿರ್ಲಕ್ಷೃ ಬೇಡ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಅವರ ಕರೆಯನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಹಕಾರ ನೀಡಬೇಕಾಗಿದೆ ಎಂದು ಶುಕ್ರವಾರ ಅವರ ಅಡತಿ ಅಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
  ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನರು ತಮ್ಮ ಮನೆಯಿಂದ ಯಾರೂ ಹೊರಗೆ ಬರಬೇಡಿ. ಪ್ರಧಾನಿ ಅವರ ಕಳಕಳಿಗೆ ನಾವೆಲ್ಲರೂ ಚಾಚು ತಪ್ಪದೆ ಪಾಲಿಸಬೇಕು. ಚೀನಾ ದೇಶದಿಂದ ಪ್ರಾರಂಭವಾದ ಈ ರೋಗ ಈಗ ಎಲ್ಲ ರಾಷ್ಟ್ರಗಳಿಗೆ ತಗುಲಿದೆ. ಇಟಲಿ, ಅಮೆರಿಕಾ, ಇರಾಕ್, ಇರಾನ್ ಹಾಗೂ ಇನ್ನಿತರ ದೇಶಗಳಲ್ಲಿ ಸಾಕಷ್ಟು ವೇಗದಲ್ಲಿ ರೋಗ ಹರುಡುತ್ತಿದೆ. ಆದರೆ, ಭಾರತ ದೇಶದಲ್ಲಿ ಈ ರೋಗದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಜಾಗೃತಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಾವೆಲ್ಲರೂ ರೋಗದ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಅನಗತ್ಯ ನಾವು ಮನೆಯಿಂದ ಹೊರಗೆ ಬರವುದನ್ನು ಮುಂದಿನ ದಿನಗಳಲ್ಲಿ ಕಡಿಮೆ ಮಾಡಬೇಕು. ಶಂಕಿತ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗಳಿಗೆ ಮಾಹಿತಿ ನೀಡಿ ಎಂದರು.
  ಮುದ್ದೇಬಿಹಾಳ ತಾಲೂಕು ಬಿಜೆಪಿ ಉಪಾಧ್ಯಕ್ಷ ಬಾಬುಗೌಡ ಅಮಾತಿಗೌಡರ ಮಾತನಾಡಿ, ಕರೊನಾ ನಿಯಂತ್ರಣ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸಾಮೂಹಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರು ಗುಂಪು ಪ್ರದೇಶದಿಂದ ದೂರ ಇರಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದನ್ನು ಎಲ್ಲರೂ ಪಾಲಿಸುತಿದ್ದಾರೆ. ಇದರ ಜತೆಗೆ ನಾವು ಇನ್ನು ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
  ಡಾ.ಸಿ.ಬಿ. ವಿರಕ್ತಮಠ ಮಾತನಾಡಿದರು. ಬಿಜೆಪಿ ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಖಾಜಾಹುಸೇನ್ ಎತ್ತಿಮನಿ, ಬಸಣ್ಣ ವಡಗೇರಿ, ಚನ್ನಪ್ಪಗೌಡ ಹಂಪನಗೌಡರ, ಜಗದೀಶ ಜಾಲಹಳ್ಳಿ, ಚಂದ್ರು ಹಂಪನಗೌಡರ, ಗೌಡಪ್ಪ ಹಂಪನಗೌಡ್ರ, ಚನ್ನಸಬಪ್ಪ ತಾಳಿಕೋಟಿ, ನಿಂಗಣ್ಣ ಬಿರಾದಾರ, ಅಮರೇಶ ಮದರಿ, ವೀರೇಶ ಗೌಡರ, ಶಿವು ಗಂಗನಗೌಡರ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts