More

  ನಕಲು ಮಾಡುವುದು ಸಲ್ಲ

  ನಾಲತವಾಡ: ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಬೇಕೆಂದು ತಾಲೂಕು ಕಲ್ಯಾಣ ಅಧಿಕಾರಿ ಎನ್.ಆರ್. ಉಂಡಿಗೇರಿ ಹೇಳಿದರು.
  ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಸತಿ ನಿಲಯಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
  ಪರೀಕ್ಷೆ ಬಗ್ಗೆ ಭಯ ಪಡುವುದರಿಂದ ನಿಮಗೆ ಕಷ್ಟಕರ ಅನಿಸುತ್ತದೆ. ಪರೀಕ್ಷೆಯಲ್ಲಿ ನೀವು ಅಭ್ಯಾಸ ಮಾಡಿದ ಪಠ್ಯದ ಪ್ರಶ್ನೆಗಳೇ ಇರುತ್ತವೆ. ಅದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರಿಸಬೇಕು. ನಕಲು ಮಾಡುವ ಗೋಜಿಗೆ ಹೋಗಬಾರದು ಎಂದರು.
  ಶಿಕ್ಷಣ ಸಂಯೋಜಕ ಎ.ಎಂ. ಬಾಗವಾನ, ಸಂಪನ್ಮೂಲ ವ್ಯಕ್ತಿಗಳಾದ ಎ.ಟಿ. ಹರಿಜನ್, ಎಚ್.ಬಿ. ಜಾಯವಾಡಗಿ, ಜೆ.ಪಿ. ಮುಲ್ಲಾ, ಎಸ್.ವೈ. ಪಾಟೀಲ, ಎನ್. ಎ. ಗದ್ದನಕೇರಿ ಮಾತನಾಡಿದರು.
  ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಪಿ.ಬಿ. ಕಮರಿ, ನಿಲಯ ಪಾಲಕ ಎಸ್.ಎಚ್. ಜೈನಾಪೂರ, ಎಸ್.ಜಿ. ವಾಲಿಕಾರ, ಎನ್.ವಿ. ಕೋರಿ, ಎಸ್.ಎಂ. ಕಲ್ಬುರ್ಗಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts