More

  ರಕ್ತದಾನಕ್ಕೆ ಎಲ್ಲರೂ ಮುಂದಾಗಿ

  ನಾಲತವಾಡ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡಲಸಂಗಮದ ಬಸಜಯ ಮೃತ್ಯುಂಜಯ ಶ್ರೀಗಳ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.
  ವೀರರಾಣಿ ಕಿತ್ತೂರ ಚನ್ನಮ್ಮ ಸಾಮಾಜಿಕ ಸೇವಾ ಸಂಘದ ಹಾಗೂ ಮುದ್ದೇಬಿಹಾಳ, ತಾಳಿಕೋಟಿ ಪಂಚಮಸಾಲಿ ಸಮಾಜದವರ ನೇತತ್ವದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
  ಡಾ. ಸುಮಾ ಮಮದಾಪುರ ಮಾತನಾಡಿ, ಒಬ್ಬ ಆರೋಗ್ಯ ವ್ಯಕ್ತಿ ನಿಸ್ವಾರ್ಥವಾಗಿ ರಕ್ತವನ್ನು ದಾನ ಮಾಡಿದರೆ ಅದು ರಕ್ತದಾನವಾಗುತ್ತದೆ. ರಕ್ತದಾನ ಮಾಡಲು ಎಲ್ಲರೂ ಮುಂದಾಗಬೇಕು ಎಂದರು. ಪಂಚಮಸಾಲಿ ಸಮಾಜದ ಮುಖಂಡ ಶಂಕರಗೌಡ ಹಿರೇಗೌಡರ ಮಾತನಾಡಿದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಗಿರೀಶಗೌಡ ಪಾಟೀಲ ಸ್ವಾಗತಿಸಿದರು. ಗಂಗಣ್ಣ ಗಂಗನಗೌಡರ ನಿರೂಪಿಸಿದರು. ಗೌರಿಶಂಕರ ದೇಶಮುಖ ವಂದಿಸಿದರು. ಕಿತ್ತೂರ ಚನ್ನಮ್ಮ ಸಂಘದ ತಾಲೂಕು ಅಧ್ಯಕ್ಷ ಆರ್.ಸಿ. ಗೂಳಿ, ಕಾಮರಾಜ ಬಿರಾದಾರ, ಲೋಹಿತ ದೇಶಮುಖ, ಮುತ್ತುಸಾಹುಕಾರ ಅಂಗಡಿ, ಕಾಶಿಬಾಯಿ ರಾಂಪೂರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಸಿ.ಬಿ. ವಿರಕ್ತಮಠ, ಚನ್ನಪ್ಪ ಹಂಪನಗೌಡರ, ವೀರರಾಣಿ ಕಿತ್ತೂರ ಚನ್ನಮ್ಮ ಸಾಮಾಜಿಕ ಸೇವಾ ಸಂಘದ ಅಧ್ಯಕ್ಷ ಶರಣಪ್ಪ ಗಂಗನಗೌರ, ಉಪಾಧ್ಯಕ್ಷ ವೀರೇಶ ಜಾಲವಾದಗಿ, ಕಾರ್ಯದರ್ಶಿ ಗಂಗಣ್ಣ ಗಂಗನಗೌಡರ, ಖಜಾಂಚಿ ಗೌರಿಶಂಕರ ದೇಶಮುಖ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts