ನಾಲತವಾಡಕ್ಕೆ ತಹಸೀಲ್ದಾರ್ ಭೇಟಿ

ನಾಲತವಾಡ: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ತಹಸೀಲ್ದಾರ್, ಪಪಂ ಆಡಳಿತಾಧಿಕಾರಿಯಾಗಿರುವ ವಿನಯಕುಮಾರ ಪಾಟೀಲ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಪಟ್ಟಣದ 2ನೇ ವಾರ್ಡ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಪೇ ಯ್ಯಂಡ್ ಯ್ಯೂಜ್’ ಹೈಟೆಕ್ ಶೌಚಗೃಹದ ಕಾಮಗಾರಿ ವೀಕ್ಷಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್ ಪಾಟೀಲ, ಪಟ್ಟಣದಲ್ಲಿನ ಜನಸಂಖ್ಯೆಗನುಗುಣವಾಗಿ ಹೆಚ್ಚುವರಿ ಕುಡಿಯುವ ನೀರಿನ ಸರಬರಾಜು ಟ್ಯಾಂಕ್ ನಿರ್ಮಿಸಬೇಕಿದೆ. ಸದ್ಯ ಕೇವಲ 5 ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್‌ನಿಂದ ಪಟ್ಟಣ ಜನತೆಗೆ ನೀರು ಪೂರೈಸಲಾಗುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ, ವಿದ್ಯುತ್ ಅಭಾವದಿಂದಲೂ ನೀರು ಸರಬರಾಜು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯುತ್ ಸಮಸ್ಯೆ ಆಗದಂತೆ ಇನ್ನೆರಡು ದಿನಗಳಲ್ಲಿ ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಸಿಒ ಮಾರುತಿ ನಡುವಿನಕೇರಿ ಇದ್ದರು.

Leave a Reply

Your email address will not be published. Required fields are marked *