ಮರಳು ದಂಧೆಗೆ ಕಡಿವಾಣ ಹಾಕಲು ಬದ್ಧ

ನಾಲತವಾಡ: ಶೀಘ್ರವೇ ಪೊಲೀಸರೊಂದಿಗೆ ರ್ಚಚಿಸಿ ಮರಳು ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಕಟ್ಟಪ್ಪಣೆ ಮಾಡುತ್ತೇನೆ ಹಾಗೂ ಮರಳು ಸಾಗಣೆ ಮಾಡುವವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಸಮೀಪದ ಅಡವಿ ಸೋಮನಾಳ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಡವಿ ಸೋಮನಾಳದ ಹಳ್ಳವನ್ನು ಜೆಸಿಬಿ ಯಂತ್ರಗಳಿಂದ ಮನಬಂದಂತೆ ಕೊರೆದು ಮರಳು ಸಾಗಣೆ ನಡೆಸಲಾಗಿದೆ. ಇನ್ನೊಂದೆಡೆ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದ್ದು, ಸಂಶಯಕ್ಕೆ ಎಡೆ ಮಾಡಿದೆ. ದಯವಿಟ್ಟು ಶಾಸಕರು ಮರಳು ದಂಧೆಗೆ ಕಡಿವಾಣಿ ಹಾಕಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಕೂಡಲೇ ಮರಳು ದಂಧೆಕೋರರ ಮೇಲೆ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡುವುದಾಗಿ ಅವರು ತಿಳಿಸಿದರು.

ಸಮೀಪದ ಡೊಂಕುಮಡು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಡೊಂಕಮಡು-ತಾಳಿಕೋಟೆ ರಸ್ತೆ ನಿರ್ವಣ, ಪಡಿತರ ಸಮಸ್ಯೆ ನೀಗಿಸುವುದು ಹಾಗೂ ನಿರ್ಗತಿಕರಿಂದ ಆಸರೆ ಮನೆ ನೀಡುವ ಕುರಿತು ಮನವಿ ಸಲ್ಲಿಸಿದರು.

ತಹಸೀಲ್ದಾರ್ ಎಂ.ಎಸ್.ಬಾಗವಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ಮಂಜುಳಾ ಬಿರಾದಾರ, ಪಿಡಿಒ ಎಸ್.ಬಿ. ಬಿರಾದಾರ, ಬಸವರಾಜ ಗುಳಬಾಳ, ತಾಪಂ ಇಒ ಡಾ.ಎಸ್.ಎಸ್.ಭಜಂತ್ರಿ, ಅಧಿಕಾರಿಗಳಾದ ಐ.ಆರ್. ಮುಂಡರಗಿ, ವೈ.ಬಿ. ಕ್ಷತ್ರಿ, ಎಸ್.ಡಿ,ಗಾಂಜಿ, ಡಾ.ಎಸ್.ಸಿ.ಚೌಧರಿ, ಎಸ್.ಬಿ.ಚಲವಾದಿ, ಎಸ್.ಬಿ.ಲಮಾಣಿ, ಡಾ.ಸತೀಶ ತಿವಾರಿ, ಪ್ರಸನ್ನ ಮಾನೆ, ಸಿ.ಆರ್.ಪೊಲೀಸ್​ಪಾಟೀಲ, ಅಮರೇಶ ತಾಂಡೂರ, ಬಿ.ಕೆ.ದಾಶ್ಯಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.