ರೈತರಿಗೆ ಅನ್ಯಾಯ ಮಾಡುತ್ತಿರುವ ಬಿಜೆಪಿ

ನಾಯ್ಕಲ್: ದೇಶ ಸ್ವಾತಂತ್ರೃ ನಂತರ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಕಷ್ಟದ ಸಮಯದಲ್ಲಿ ಮೊದಲು ಗ್ರಾಮೀಣ ಭಾಗದ ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಿದೆ. ಅದರ ಪರಿಣಾಮ ಇಂದು ನಾವು ಬದಲಾವಣೆ ಕಾಣುತ್ತಿದ್ದೇವೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಸೋಮವಾರ ನಾಯ್ಕಲ್ ಗ್ರಾಮದಲ್ಲಿ ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಬಿ. ವಿ. ನಾಯಕ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 5ವರ್ಷಗಳಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸಕರ್ಾರ ಬಡವರ ಪರ ಯೋಜನೆಗಳನ್ನು ಜಾರಿಗೆ ತರದೆ ಉದ್ಯಮಿಗಳ ಪರ ಕೆಲಸ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸಕರ್ಾರ ಅಧಿಕಾರ ಅವಧಿಯಲ್ಲಿ ಹೈಕ ಭಾಗಕ್ಕೆ ಸಂವಿಧಾನದ 371ನೇ (ಜೆ) ಕಲಂ ತಿದ್ದುಪಡಿ ಮಾಡಿರುವುದರಿಂದ ನಮ್ಮ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನ ಅನಪೂರ ಮಾತನಾಡಿದರು. ಪಕ್ಷದ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಶಾಂತರಡ್ಡಿ ದೇಸಾಯಿ, ಶ್ರೀನಿವಾಸರಡ್ಡಿ ಕಂದಕೂರ, ಹನುಮೇಗೌಡ ಮರಕಲ್, ಬಾಷುಮಿಯಾ, ಮರೆಪ್ಪ ಬಿಳ್ಹಾರ, ಬಸ್ಸುಗೌಡ ಬಿಳ್ಹಾರ, ಬಸನಗೌಡ ಮರಕಲ್, ಶರಣಗೌಡ ಬೆಟಗೇರಾ, ಮಂಜುಳಾ ಗೂಳಿ, ಖಾಜಾಮೈನೊದ್ದೀನ್, ಡಾ.ಅಂಬ್ರಣ್ಣಗೌಡ ಗಡ್ಡೆಸೂಗೂರ, ಮೈನೋದ್ದೀನ್ ಮಿಚರ್ಿ ಸೇರಿದಂತೆ ಇತರರಿದ್ದರು.