ನಾಗೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

ತಾಳಿಕೋಟೆ: ಸಮೀಪದ ನಾಗೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬುಧವಾರ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸ್ ಘಟಕಕ್ಕೆ ಗ್ರಾಮಸ್ಥರು ಭೇಟಿ ನೀಡಿ ಘಟಕಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ದೇಶಕ್ಕೆ ಸ್ವಾತಂತ್ರೃ ಸಿಕ್ಕು 72 ವರ್ಷಗಳು ಕಳೆದರೂ ಇಲ್ಲಿಯವರೆಗೂ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಗ್ರಾಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮಕ್ಕೆ ಇಲ್ಲಿಯವರೆಗೂ ಒಂದೇ ಒಂದು ಬಸ್ ಕೂಡ ಓಡಿಸಿಲ್ಲ. ಇದರಿಂದಾಗಿ ರೋಗಿಗಳು, ವಯೋವೃದ್ಧರು, ಕೂಲಿಕಾರರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಿತ್ಯ 10 ಕಿಮೀ ದೂರ ನಡೆದು ತಾಳಿಕೋಟೆ ಪಟ್ಟಣಕ್ಕೆ ಬರಬೇಕಿದೆ. ವಿದ್ಯಾರ್ಥಿಗಳು ಕಾಲ್ನಡುಗೆಯಲ್ಲಿ ಶಾಲೆ- ಕಾಲೇಜುಗಳಿಗೆ ಆಗಮಿಸುವಷ್ಟರಲ್ಲಿ ಸಮಯ ಮೀರಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.
ಪ್ರಸಕ್ತವರ್ಷ ಶೈಕ್ಷಣಿಕ ಶಾಲೆಗಳು ಆರಂಭಗೊಂಡಿವೆ. ಈಗಲಾದರೂ ಕೂಡಲೇ ಬಸ್ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡದಿದ್ದರೆ, ಬಸ್ ಘಟಕಕ್ಕೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿ ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಅವರಿಗೆ ಮನವಿ ಪತ್ರ ನೀಡಿದರು.
ಗ್ರಾಮದ ಮುಖಂಡರಾದ ಶಿವರಾಜ ಗುಂಡಕನಾಳ, ಜಟ್ಟೆಪ್ಪ ಭಂಟನೂರ, ಹಣಮಂತ್ರಾಯ ಹಡಗಿನಾಳ, ಮಾನಪ್ಪ ಬಿರಾದಾರ, ಸಂಗಯ್ಯ ಹಿರೇಮಠ, ರಾಮಣ್ಣ ಮದ್ನೂರ, ದೇವಣ್ಣ ಉಳ್ಳಾಗಡ್ಡಿ, ಬಾಲಚಂದ್ರ ಬಿರಾದಾರ, ಬಸವರಾಜ ತಳ್ಳಳ್ಳಿ, ಶಿವರಾಜ ಅರೇಶಂಕರ, ಸುನೀಲ ಚಲವಾದಿ, ಮಲ್ಲಪ್ಪ ಗುಂಡಕನಾಳ, ಮುತ್ತಣ್ಣ ಮಾದರ, ಶಿವರಾಜ ದೊಡಮನಿ, ಹುಲಗಪ್ಪ ಮಾದರ, ಮಾನಪ್ಪ ಎಂಟಮಾನ, ಮಲ್ಲಯ್ಯ ಸರಗಣಾಚಾರಿ, ಗುರುರಾಜ ಗುಮಾಸ್ತೆ, ನಿಂಗರಾಜ ನಾಯ್ಕೋಡಿ, ಮುತ್ತಣ್ಣ ಗುಂಡಕನಾಳ, ದೇವಮ್ಮ ಬೂದಿಹಾಳ, ಪವಿತ್ರಾ ಹಿರೇಮಠ, ಸುವರ್ಣ ಚಲವಾದಿ, ಯಮನಪ್ಪ ಮಾದರ, ಸಾವಿತ್ರಿ ಬಿರಾದಾರ, ಸಾಯಿರಾಬಾನು ಮುಲ್ಲಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *