ಎಚ್.ಡಿ.ಕೋಟೆ: ಪಟ್ಟಣದ ಶ್ರೀಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನಗ್ಮಾ ಬಿಕಾಂ ಪದವಿ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಚಿನ್ನದ ಪದಕ ಪಡೆದಿದ್ದಾಳೆ.
ಮೈಸೂರು ವಿವಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 400ಕ್ಕೆ 368 ಅಂಕ ಪಡೆಯುವ ಮೂಲಕ 2023-24 ಸಾಲಿನ ಅಜೀಜ್ ಸೇಠ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.
ಹೆಬ್ಬಲಗುಪ್ಪೆ ಗ್ರಾಮದ ನಿವಾಸಿ ಅಬ್ದುಲ್ ಜಬ್ಬಾರ್ ಹಾಗೂ ಫಾತಿಮಾ ಬೇಗಂ ದಂಪತಿ ಪುತ್ರಿ ನಗ್ಮಾ ಮೈಸೂರು ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳ ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ಪ್ರಾಂಶುಪಾಲ ಜೆ.ಎನ್.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಎದುರಿಸಲು ಬೆಂಗಳೂರಿನಲ್ಲಿ ನಗ್ಮಾ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಶ್ಲಾಘಿಸಿದ್ದಾರೆ.
TAGGED:023-24 ಸಾಲಿನ ಅಜೀಜ್ ಸೇಠ್ ಚಿನ್ನದ ಪದಕHD KoteMysoreಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಅಬ್ದುಲ್ ಜಬ್ಬಾರ್ ಹಾಗೂ ಫಾತಿಮಾ ಬೇಗಂ ದಂಪತಿ ಪುತ್ರಿಎಚ್.ಡಿ.ಕೋಟೆಕನ್ನಡ ಭಾಷಾ ವಿಷಯದಲ್ಲಿ 400ಕ್ಕೆ 368 ಅಂಕಚಿನ್ನದ ಪದಕನಗ್ಮಾಬಿಕಾಂ ಪದವಿ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಮೈಸೂರುಮೈಸೂರು ವಿವಿ ನಡೆಸಿದ ಪದವಿ ಪರೀಕ್ಷೆಮೈಸೂರು ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳ ವಾಣಿಜ್ಯ ವಿಭಾಗಶ್ರೀಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಹೆಬ್ಬಲಗುಪ್ಪೆ ಗ್ರಾಮದ ನಿವಾಸಿ