ವಿಶೇಷ ಚೇತನ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ ಬಾಡಿಗಾರ್ಡ್‌; ವಿಡಿಯೋ ವೈರಲ್‌ ಆಗ್ತಿದ್ದಂತೆ ಕ್ಷಮೆ ಕೇಳಿದ ನಟ

1 Min Read
ವಿಶೇಷ ಚೇತನ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ ಬಾಡಿಗಾರ್ಡ್‌; ವಿಡಿಯೋ ವೈರಲ್‌ ಆಗ್ತಿದ್ದಂತೆ ಕ್ಷಮೆ ಕೇಳಿದ ನಟ

ಹೈದ್ರಾಬಾದ್‌:  ಸೆಲೆಬ್ರಿಟಿಗಳು ಹಾದು ಹೋದಾಗ, ಫೋಟೋಗಳಿಗಾಗಿ ಜನರು ಅವರನ್ನು ಭೇಟಿಯಾಗುತ್ತಾರೆ. ಅಂತಹ ಸಮಯದಲ್ಲಿ, ಸೆಲೆಬ್ರಿಟಿಗಳ ಸುತ್ತಲೂ ಇರುವ ಬಾಡಿ ಗಾರ್ಡ್‌ಗಳು ಅವರನ್ನು ಪಕ್ಕಕ್ಕೆ ಇಡುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳ ಮೇಲೆ ಗುಂಪು ಗುಂಪಾಗಿ ಬಂದು ಅಭಿಮಾನಿಗಳನ್ನು ತಳ್ಳಿದ ಘಟನೆಗಳು ನಡೆಡಿದೆ.

ನಾಗಾರ್ಜುನ ಅವರು ತಮ್ಮ ಬಾಡಿಗಾರ್ಡ್‌ ಜತೆಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು. ಅವರ ಪಕ್ಕದಲ್ಲಿ ನಟ ಧನುಷ್ ಕೂಡ ಕಾಣಿಸಿಕೊಂಡಿದ್ದರು. ಹೀಗೆ ಬರುತ್ತಿರುವಾಗ ವಿಶೇಷ ಚೇತನ ಅಭಿಮಾನಿ ಒಮ್ಮೆಲೆ ನಾಗಾರ್ಜುನ ಕಡೆಗೆ ಸೆಲ್ಫಿ ಕೇಳಲು ಬಂದರು. ಆಗ ನಾಗಾರ್ಜುನ ಅವರ ಬಾಡಿಗಾರ್ಡ್‌ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರರು ಹಿಡಿದುಕೊಂಡಿದ್ದಾರೆ. ಆದರೆ ನಾಗಾರ್ಜುನ ಈ ಘಟನೆಯನ್ನು ಗಮನಿಸಿರಲಿಲ್ಲ. ಇದೀಗ ನಟ ಕ್ಷಮೆ ಕೇಳಿದ್ದಾರೆ.

https://x.com/iamnagarjuna/status/1804919359099605097

“ಇದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಗೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಾಗಾರ್ಜುನ ಅವರಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, “ಆ ವ್ಯಕ್ತಿ ವಿಶೇಷ ಚೇತನ. ಅವರು ಎಷ್ಟು ಅವಮಾನ ಅನುಭವಿಸಿರಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು”ಸೆಲೆಬ್ರಿಟಿಗೆ ತುಂಬಾ ಹತ್ತಿರ ಬರುವ ಅಭಿಮಾನಿಗಳನ್ನು ನಿಭಾಯಿಸುವ ಕಲೆ ಗೊತ್ತಿರಬೇಕುʼʼಎಂದು ಬರೆದುಕೊಂಡಿದ್ದಾರೆ.

ಸದ್ಯ ಕಿಂಗ್ ನಾಗಾರ್ಜುನ ವರ್ಷಕ್ಕೆ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಕ್ರಾಂತಿಗೆ ನಾ ಸಮಿರಂಗ ಸಿನಿಮಾದೊಂದಿಗೆ ಬಂದು ಉತ್ತಮ ಹಿಟ್ ಗಳಿಸಿದ್ದರು. ಮುಂದಿನ ಸಿನಿಮಾ ಸದ್ಯದಲ್ಲೇ ಶುರುವಾಗಲಿದೆ.

See also  ಆಸೀಸ್ ಪ್ರವಾಸದ ಮೊದಲ 2 ಟೆಸ್ಟ್‌ನಿಂದ ರೋಹಿತ್, ಇಶಾಂತ್ ಶರ್ಮ ಔಟ್
Share This Article