ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಕೇಂದ್ರಿಯ ಶಾಲೆಯಲ್ಲಿ ಶನಿವಾರ ನಾಗರ ಪಂಚಮಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಒಳ ಆವರಣದಲ್ಲಿ ನಾಗದೇವತೆಯನ್ನು ಪ್ರತಿಷ್ಠಾಪಿಸಿ, ನಾಗ ಪೂಜೆ ನೆರವೇರಿಸಲಾಯಿತು.
ಪ್ರಾಚಾರ್ಯರು, ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ಕುರಿತು ಮಾತನಾಡಿದರು.
“ನಮ್ಮ ಸಂಸ್ಕೃತಿಯ ಪ್ರತಿಕವಾದ ಹಬ್ಬಗಳನ್ನು ಅರಿತು, ಬೆರೆತು, ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಿಕ್ಷಕರು, ವಿದ್ಯಾಥಿರ್ಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚಿತ್ರಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು. ಧ್ರುವಿ ಅಗರವಾಲ ಸ್ವಾಗತ ಭಾಷಣ ಮಾಡಿದರು. ಮಕ್ಕಳಿಂದ ನಾಗಪಂಚಮಿ ವಿಶೇಷ ನೃತ್ಯ ಪ್ರದರ್ಶನ ನಡೆಯಿತು.