ಮುದ್ದೇಬಿಹಾಳ : ತಮ್ಮ ಮನೆಯ ಎದುರು ಬಿಜೆಪಿ ರೈತ ಮೋರ್ಚಾದವರು ಸೆಗಣಿ ಎಸೆದ ಟನೆ ಕುರಿತು ಶಾಸಕ, ಕೆಎಸ್ಡಿ ನಿಗಮದ ಅಧ್ಯ ಸಿ.ಎಸ್.ನಾಡಗೌಡರು ಮಂಗಳವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಏಕವಚನದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು.
ಹಸು ಕೆಚ್ಚಲು ಕೋಯ್ದ ಟನೆಗೆ ನಮ್ಮದೂ ವಿಷಾದವಿದೆ. ಸಿಎಂ, ಪದ ಅಧ್ಯರು, ಸಚಿವರು ಖಂಡಿಸಿ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಹೀಗಿದ್ದರೂ ಶಾಸಕನಾಗಿರುವ ನನ್ನ ಮನೆಗೆ ಸೆಗಣಿ ಹಾಕಿಸುವ ರಾಜಕಾರಣ ಏಕೆ ಮಾಡಿದಿರಿ. ಸೆಗಣಿ ಹಾಕಿದವರ್ಯಾರೂ ನಿಜವಾದ ಬಿಜೆಪಿಗರಲ್ಲ.
ನಾನು ಯಾರನ್ನೂ ಬಂಧಿಸುವಂತೆ ಪೊಲೀಸರಿಗೆ ಹೇಳಿಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ನೀವು ಶಾಸಕರಾಗಿದ್ದಾಗ ಎಷ್ಟು ಜನರನ್ನು ಜೈಲಿಗೆ ಕಳಿಸಿದ್ದೀರಿ ಅನ್ನೋ ಲಿಸ್ಟ್ ಕೊಡಲೇನು ? ಎಂದು ಕೆಲವರ ಹೆಸರು ಬಹಿರಂಗಪಡಿಸಿದರು.
ನನಗೂ ಸೆಗಣಿ ಮಹತ್ವ ಗೊತ್ತಿದೆ. ದಿನವೂ ಗೋಮಾತೆ, ಶರಣರು, ದೇವರನ್ನು ಸ್ಮರಿಸಿಯೇ ಮನೆಯಿಂದ ಹೊರಗೆ ಬರುವುದು. ನಿಮ್ಮಿಂದ ಪಾಠ ಕಲಿಯಬೇಕಿಲ್ಲ.
ನಿಮ್ಮಂಥ ರಾಜಕಾರಣಿಗಳು ವ್ಯವಸ್ಥೆಯನ್ನು ಈ ಮಟ್ಟಕ್ಕೆ ತಂದಿರುವುದು ಮೈಯಲ್ಲಿ ರಕ್ತ ಕುದಿಯುವಂತೆ ಮಾಡುವುದರಿಂದ ಮಾತನಾಡುತ್ತೇನೆಯೇ ಹೊರತು ಬಿಪಿ ಏರಿಸಿಕೊಂಡು ಮಾತನಾಡುವುದಿಲ್ಲ. ಇಲ್ಲಿನ ರಾಜಕೀಯ ಭವಿಷ್ಯ ಏನಾಗುತ್ತೋ ಹೇಳಲು ಹೋಗುವುದಿಲ್ಲ. ಆದರೆ ನಿಮ್ಮಂಥವರನ್ನು ಎಂದಿಗೂ ಎಂಎಲ್ಎ ಮಾಡಲು ಅವಕಾಶ ಕೊಡಲ್ಲ. ಯಾವುದೇ ತ್ಯಾಗ ಮನೋಭಾವನೆಗೂ ನಾವು ಸಿದ್ಧರಿದ್ದೇವೆ. ಆ ಶಕ್ತಿ ಇವತ್ತಿಗೂ ಭಗವಂತ ನಮಗೆ ಕೊಟ್ಟಿದ್ದಾನೆ. ನಿಮ್ಮ ವರ್ತನೆ ಇತಿಮಿತಿಯಲ್ಲಿರಬೇಕು ಎಂದರು.
ಸೆಗಣಿ ಅಮೃತ, ಪವಿತ್ರ ಎನ್ನುವ ಸನ್ಮಾನ್ಯ ನಡಹಳ್ಳಿ ಮಾಜಿ ಶಾಸಕರೇ ಆ ಅಮೃತವನ್ನು ಇನ್ನು ಮೇಲೆ ಮುಖಕ್ಕೆ ಹಚ್ಚಿಕೊಳ್ಳಿ. ಯಾವುದನ್ನು ಹೇಗೆ ಬಳಕೆ ಮಾಡಬೇಕು. ಯಾವುದು ಅಮೃತ ಅನ್ನೋದು ನನಗೂ ಗೊತ್ತಿದೆ. ಇಂಥ ರಾಜಕಾರಣ ಇಲ್ಲಿ ನಡೆಯುವುದಿಲ್ಲ. ಇದಕ್ಕೆ ನಾವು ಅಂಜುವುದೂ ಇಲ್ಲ.
ಹೀಗೆ ಮಾಡುವುದರಿಂದ ಬಿಜೆಪಿ ಪ್ರಮುಖರು, ದೊಡ್ಡ ನಾಯಕರು ಅಮಿತ್ ಷಾ, ಯಡಿಯೂರಪ್ಪ ಅಂಥವರು ಭಾರಿ ಖುಷಿಯಾಗಿ ಹೋರಾಟ ಮೆಚ್ಚಿದ್ದೇವೆ ಅಂತ ತಿಳ್ಕೋತಾರೆ ಅನ್ನೋ ಭಾವನೆ ಇದ್ದರೆ ಅದರಿಂದ ಹೊರಬನ್ನಿ. ಈ ತಾಲೂಕಲ್ಲಿ ಒಂದು ಸಂಸ್ಕಾರ, ಸಂಸತಿ ಇದೆ. ಜನ ನಿಮಗೆ ಇನ್ನೂ ಪಾಠ ಕಲಿಸಲು ಸಿದ್ಧರಾಗುತ್ತಿದ್ದಾರೆ. ನೀವು ಬಹಳ ಸಾಧನೆ ಮಾಡಿದ್ದೇನೆ ಎಂದು ತಿಳಿದುಕೊಳ್ಳಬೇಡಿ ಎಂದರು.
15&20 ವರ್ಷದ ಹಿಂದೆ ನೀವೇ ದೊಡ್ಡವರು ಎಂದು ನಮಸ್ಕಾರ ಮಾಡುವುದನ್ನು ಮರೆತಿದ್ದೀರಾ. ಯಾರಿಂದ ಉಪಕಾರ ಪಡೆದಿರಿ ಅನ್ನೋದನ್ನು ನೆನಪಿಡಿ. ಮತದಾರರನ್ನೇ ನೀವು ನೆನಪಿಡಲಿಲ್ಲ. ನನಗೆ ಯಾರ ಭಯವೂ ಇಲ್ಲದಿರುವುದರಿಂದಲೇ ಪೊಲೀಸ್ ಎಸ್ಕಾರ್ಟ್ ತಗೊಂಡಿಲ್ಲ.
ನನಗಿರುವುದು ಭಗವಂತನ ಭಯ ಒಂದೇ. ಮಾತನಾಡುವುದಕ್ಕಿಂತ ಮೊದಲು ಆಲೋಚನೆ ಮಾಡಿ. ಸುಳ್ಳು ಹೇಳುವುದನ್ನು ಕೈಬಿಡಿ. ನಿಮ್ಮ ಧೋರಣೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಮುಂದೆ ದೇವರು ನಿಮಗೆ ಒಳ್ಳೆಯದು ಮಾಡಬಹುದು. ಇದೇ ಧೋರಣೆ ಮುಂದುವರಿಸಿದರೆ ಯಾವ ಕಾಲಕ್ಕೂ ನಿಮಗೆ ಒಳ್ಳೆಯದಾಗಲ್ಲ ಎಂದರು.
ಮುಖಂಡರಾದ ಸಿ.ಬಿ.ಅಸ್ಕಿ, ವೈ.ಎಚ್.ವಿಜಯಕರ್, ಚನ್ನಪ್ಪ ವಿಜಯಕರ್ ಟನೆ ಖಂಡಿಸಿ ಮಾತನಾಡಿದರು. ಮುಖಂಡರಾದ ಮಲ್ಲನಗೌಡ ಪಾಟೀಲ ಹಿರೇಮುರಾಳ, ಬಾಪೂರಾವ್ ದೇಸಾಯಿ, ಗುರು ತಾರನಾಳ, ಮಹಿಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಸಂಗನಗೌಡ ಬಿರಾದಾರ, ಸತೀಶಕುಮಾರ ಓಸ್ವಾಲ್, ಚಿನ್ನುಧಣಿ ನಾಡಗೌಡ, ಮಲ್ಲಿಕಾರ್ಜುನ ದೇಶಮುಖ, ಶ್ರೀಶೈಲ ಮರೋಳ, ಪ್ರಭುದೇವ ಕಲಬುರ್ಗಿ, ಎಸ್.ಎಸ್.ಮಾಲಗತ್ತಿ, ಎಂ.ಎಚ್.ಹಾಲಣ್ಣವರ್ ಇತರರಿದ್ದರು.