20.4 C
Bengaluru
Sunday, January 19, 2020

ದೇಶದ ಭವಿಷ್ಯ ನಿರ್ವಿುಸುತ್ತಿರುವ ಶಿಕ್ಷಕರಿಗೆ ಋಣಿಯಾಗಿರೋಣ

Latest News

ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ...

ನಮ್ಮಲ್ಲಿದೆ ಚಾರಿತ್ರಿಕ ಪುರುಷರ ಪೂಜಿಸುವ ಪಂಥ

ಮೈಸೂರು: ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರೆಲ್ಲಾ ಚಾರಿತ್ರಿಕ ಪುರುಷರಾದರೂ ಅದಕ್ಕೆ ಪುರಾಣದ ಪರಿಕಲ್ಪನೆ ನೀಡಿ ಅವರನ್ನು ದೇವರನ್ನಾಗಿ ಪೂಜಿಸುವ ಭಕ್ತಪಂಥವೇ ನಮ್ಮಲ್ಲಿದೆ...

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಯರ್ ಪಟ್ಟ

ಮೈಸೂರು: ನಗರಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿದಿದ್ದು, ಮೇಯರ್ ಆಗಿ ತಸ್ನಿಂ, ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾದರು. ಪಾಲಿಕೆ...

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಬನ್ನಿಮಂಟಪ...

ಗಮನ ಸೆಳೆದ ಸೈಕ್ಲೋಥಾನ್, ಮ್ಯಾರಥಾನ್

ಮೈಸೂರು: ಯುವಜನರ ದೈಹಿಕ ದಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಡೆಯಿತು. ನೆಹರು ಯುವಕೇಂದ್ರ, ಯುವ...

ಒಮ್ಮೆ ಒಬ್ಬ ಹುಡುಗ ತನ್ನ ಗುರುಗಳ ಹತ್ತಿರ ಪ್ರಶ್ನೆಯೊಂದನ್ನು ಕೇಳಲು ಬಂದ. ಕೈ ಮುಷ್ಠಿಯಲ್ಲೊಂದು ಪುಟಾಣಿ ಹಕ್ಕಿಮರಿ. ‘ಗುರುಗಳೇ, ಈ ಹಕ್ಕಿಮರಿ ಸತ್ತಿದೆಯೋ ಬದುಕಿದೆಯೋ?’ ಕೇಳಿದ. ಗುರುಗಳು ಹುಡುಗನನ್ನೂ, ಅವನ ಮುಚ್ಚಿದ ಮುಷ್ಠಿಯನ್ನೂ ನೋಡಿ ಹೇಳಿದರು, ‘ಆ ಹಕ್ಕಿಮರಿಯ ಜೀವ ನಿನ್ನ ಕೈಲಿದೆಯಪ್ಪಾ, ನೀನು ಕರುಣೆ ತೋರಿಸಿದರೆ ಬದುಕುತ್ತದೆ, ಇಲ್ಲವಾದರೆ ಸಾಯುತ್ತದೆ’.

ಜೀವನದ ಪ್ರತೀ ಹಂತದಲ್ಲೂ ಮಾರ್ಗದರ್ಶನ ಮಾಡಲು ಇಂಥ ಒಬ್ಬ ಗುರುವಿನ ಅವಶ್ಯಕತೆ ನಮ್ಮೆಲ್ಲರಿಗೂ ಇದೆ. ಹೌದು, ಹುಟ್ಟಿನಿಂದ ಸಾಯುವವರೆಗೂ ನಮ್ಮೆಲ್ಲರಿಗೂ ಒಬ್ಬ ಗುರು, ಒಬ್ಬ ಮಾರ್ಗದರ್ಶಕ, ಒಬ್ಬ ಮೆಂಟರ್ ಬೇಕು. ಆ ಗುರು ನಮ್ಮ ಪಾಲಕರಾಗಿರಬಹುದು, ಶಿಕ್ಷಕರಾಗಿರಬಹುದು, ಪ್ರಕೃತಿಯೂ ಆಗಿರಬಹುದು ಅಥವಾ ಬದುಕಲು ಕಲಿಸುವ ಯಾರಾದರೂ ಆಗಿರಬಹುದು. ಅದಕ್ಕೇ ಒಂದಕ್ಷರವನ್ನು ಕಲಿಸಿದವರೂ ಗುರುವೇ ಎನ್ನುತ್ತಾರಲ್ಲ! ಗುರು ಎಂದರೆ ಕತ್ತಲ ಹಾದಿಯ ಕೈದೀಪ. ಕರಿಮೋಡದಂಚಿನ ಬಿಳಿಗೆರೆಯಂತಹ ಭರವಸೆ. ದಡ ಸೇರಿಸುವ ನಾವೆಯಲ್ಲಿನ ದಿಕ್ಸೂಚಿ.

ಗುರುವಿನ ಒಂದು ಸರಿಯಾದ ಸಲಹೆ, ಎಚ್ಚರಿಕೆ, ಕರುಣೆಯ ಮಾತು, ಪುಟ್ಟ ಸಹಾಯ, ಭರವಸೆಯ ಹಸ್ತ, ಒಂದು ಅವಕಾಶ, ಮುಗುಳ್ನಗು, ಹೊಗಳಿಕೆ ಮಕ್ಕಳ ದಾರಿಯ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಲ್ಲಿಯೋ ಕಳೆದುಹೋಗಬಹುದಾಗಿದ್ದ ಅವರು ಯಶಸ್ಸು ಕಾಣಬಹುದು, ಸಾರ್ಥಕ ಬದುಕು ಬಾಳಬಹುದು. ಶಿಕ್ಷೆಯೂ ವಿದ್ಯಾರ್ಥಿಗಳನ್ನು ತಿದ್ದುವ ಒಂದು ಮಾರ್ಗವೆಂಬುದು ನಿಜವೇ. ಆದರೆ ಗುರುವಿನ ಒಂದೇ ಒಂದು ಕೊಂಕು ಮಾತು, ಅವಮಾನ, ಹೀಗಳಿಕೆ ಬೆಳೆವ ಸಿರಿಯ ಮೊಳಕೆಯನ್ನೇ ಚಿವುಟಿಹಾಕಬಹುದು. ಈ ಅರಿವು ಮತ್ತು ಎಚ್ಚರಿಕೆ ಎರಡೂ ಶಿಕ್ಷಕರಾದವರಿಗೆ ಇರಬೇಕು.

ಮತ್ತು ಗುರುವಿನ ಮಹತ್ವ ಸದಾ ಹೊಸದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿದೆ. ತಾನೇನಿದ್ದರೂ ಕೊಡುವುದೇ ಎಂದುಕೊಂಡವರು ಎಂದಿಗೂ ಗುರುವಾಗಲಾರರು. ಪ್ರತಿದಿನವೂ ವಿದ್ಯಾರ್ಥಿಗಳಿಗೆ ಕಲಿಸುವ ಜತೆಗೆ ಅವರಿಂದ ತನ್ನ ಅನುಭವದ ಜೋಳಿಗೆಯನ್ನೂ ತುಂಬಿಕೊಳ್ಳುವ ಜೋಗಿಯಂತೆ ಗುರು. ಸದಾ ವಿದ್ಯಾರ್ಥಿಯಾಗಿರುವವರೇ ನಿಜವಾದ ಶಿಕ್ಷಕರು.

ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರಾದವರು ಹೊಸದನ್ನು ಕಲಿಯುತ್ತಿಲ್ಲ ಜತೆಗೆ ಶಿಕ್ಷಕರು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಿದ್ದಾರೆಂಬ ಎರಡು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಭಾವುಕತೆಯನ್ನು ಬದಿಗಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡಿದಾಗ ಎರಡೂ ರೀತಿಯ ಶಿಕ್ಷಕರೂ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಓದಿನ ಮೂಲಕ ದಿನದಿನವೂ ಅಪ್​ಡೇಟ್ ಆಗುವ ಶಿಕ್ಷಕರಿರುವಂತೆ ಓಬೀರಾಯನ ಕಾಲದ ನೋಟ್ಸ್ ಬಿಟ್ಟು ಬೇರೆ ಯಾವ ಪುಸ್ತಕವನ್ನು ಕುತೂಹಲಕ್ಕಾದರೂ ಮುಟ್ಟಿಯೂ ನೋಡದ ಶಿಕ್ಷಕರಿದ್ದಾರೆ. ದಿನವೂ ದೋಣಿ ನಡೆಸಿಕೊಂಡು ಶಾಲೆಗೆ ಪಾಠ ಮಾಡಲು ಹೋಗುವ ಶಿಕ್ಷಕಿಯೊಬ್ಬರ ಕುರಿತೂ ಓದುತ್ತೇವೆ, ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಂಡು ತರಗತಿಗಳನ್ನೇ ತೆಗೆದುಕೊಳ್ಳದಿರುವವರ ಕುರಿತೂ ಓದುತ್ತೇವೆ. ಅದೇ ವೇಳೆಗೆ ಸಮಾಜಮುಖಿಗಳಾಗಿ ಸಾರ್ಥಕ ಕೆಲಸ ಮಾಡುವ ಮನಸ್ಸುಗಳೂ ಶಿಕ್ಷಕ ಸಮುದಾಯದಲ್ಲಿವೆ. ಇತ್ತೀಚೆಗೆ ಭಾರಿ ಮಳೆಯಿಂದ ನೆರೆಸಂತ್ರಸ್ತರಾದ ಜನರಿಗೆ ಶಿಕ್ಷಕರಾದ ಕವಿ ವೀರಣ್ಣ ಮಡಿವಾಳರ ಅವರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಅವಶ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಸಂತ್ರಸ್ತರಲ್ಲಿಗೇ ಹೋಗಿ ಸಹಾಯ ಮಾಡಿದರು. ಅದೇವೇಳೆ ಪತ್ರಿಕೆಗಳಲ್ಲಿ ಪ್ರಕಟವಾದ ಸರ್ಕಾರದ ವರದಿಯ ಪ್ರಕಾರ ಸರ್ಕಾರಿ ನೌಕರರಲ್ಲಿ ಕೊಡಗಿನ ನೆರೆಗೆ ಒಂದು ದಿನದ ಸಂಬಳ ಕೊಟ್ಟವರು ಶೇಕಡ ಅರವತ್ತು ಮಂದಿ! ಅಂದರೆ ಉಳಿದ ಶೇಕಡ ನಲವತ್ತು ಮಂದಿ ಟಿವಿಯಲ್ಲಿ ಪ್ರವಾಹವನ್ನು ನೋಡುತ್ತ ಲೊಚಗುಟ್ಟಿದರೇ ವಿನಹ ಒಂದಿಷ್ಟು ಅಳಿಲುಸೇವೆ ಸಲ್ಲಿಸುವ ಮನಸ್ಸು ಮಾಡಲಿಲ್ಲ! ಶಿಕ್ಷಕರಿರಲಿ, ವೈದ್ಯರಿರಲಿ, ವಕೀಲರಿರಲಿ ಅಥವಾ ಇನ್ಯಾವುದೇ ಕೆಲಸದಲ್ಲಿರಲಿ ಪ್ರತಿಯೊಬ್ಬರೂ ತಮ್ಮ ದಿನವನ್ನು ಸಂಭ್ರಮಕ್ಕೆ ಮಾತ್ರವಲ್ಲ, ಆತ್ಮಾವಲೋಕನಕ್ಕೆ ಕೂಡ ನೆಪವಾಗಿಸಿಕೊಳ್ಳಬೇಕಿರುವುದು ಇಂದಿನ ತುರ್ತು ಎಂಬ ಕಾರಣಕ್ಕಾಗಿ ಈ ಸಂಗತಿಯನ್ನು ಪ್ರಸ್ತಾಪಿಸಿದೆ ಅಷ್ಟೇ.

ಆದರೆ ಅದೃಷ್ಟವಶಾತ್ ಈ ಜಗತ್ತಿನಲ್ಲಿ ಒಳ್ಳೆಯದೇ ಹೆಚ್ಚಿದೆ. ನೆಗೆಟಿವ್ ಸಂಗತಿಗಳು ಹೆಚ್ಚು ಪ್ರಚಾರ ಪಡೆಯುತ್ತವಷ್ಟೇ. ಸರ್ಕಾರ ಕೊಡುವ ಸಣ್ಣಮೊತ್ತದ ಗೌರವಧನಕ್ಕೆ ಎಳೆಯ ಕಂದಮ್ಮಗಳನ್ನು ಜೋಪಾನವಾಗಿ ಸಲಹುತ್ತ ಅಕ್ಷರ ಕಲಿಸುವ ಅಂಗನವಾಡಿಯ ತಾಯಂದಿರು, ತೀರಾ ಕಡಿಮೆ ಮೊತ್ತದ ಸಂಬಳ ಪಡೆದರೂ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳೂ ದುಡಿಯುವ ಖಾಸಗಿ ಶಾಲೆಗಳ ದೊಡ್ಡ ಸಂಖ್ಯೆಯ ಶಿಕ್ಷಕ-ಶಿಕ್ಷಕಿಯರು, ಸರ್ಕಾರಿ ಶಾಲಾ ಕಾಲೇಜುಗಳ ಅತಿಥಿ ಶಿಕ್ಷಕ ವೃಂದ ಇವರೆಲ್ಲ ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಿದ್ದಾರೆ. ಮಕ್ಕಳನ್ನು ಒಳ್ಳೆಯ ಅಂಕ ತೆಗೆಯಲು ಪೋ›ತ್ಸಾಹಿಸುವುದರ ಜತೆಯಲ್ಲೇ ಅವರ ಕೀಳರಿಮೆ, ಮೇಲರಿಮೆ, ಸಲ್ಲದ ನಡವಳಿಕೆ ಎಲ್ಲವನ್ನೂ ಗಮನಿಸುವ, ತಿದ್ದುವ ಶಿಕ್ಷಕರಿಗೆ ಸಮಾಜ ಸದಾ ಋಣಿಯಾಗಿರುತ್ತದೆ.

ಪ್ರತೀದಿನವೂ ತರಗತಿಗಳಲ್ಲಿ ಪುಟಿವ ಚೆಂಡಿನಂಥ ವಿದ್ಯಾರ್ಥಿಗಳನ್ನು ಎದುರುಗೊಳ್ಳುವ ಅದೃಷ್ಟವಿರುವವರು ಶಿಕ್ಷಕರು. ನಾನೂ ಆ ಅದೃಷ್ಟವಂತರಲ್ಲೊಬ್ಬಳು ಎಂಬುದು ನನಗೆ ತುಂಬ ಸಂತಸದ ಮತ್ತು ಹೆಮ್ಮೆಯ ವಿಚಾರ. ಹೊಸತಲೆಮಾರಿನ ಜ್ಞಾನ, ಉತ್ಸಾಹ, ಎಡವಟ್ಟುಗಳು ಎಲ್ಲವನ್ನೂ ತಮ್ಮೊಳಗೆ ತುಂಬಿಕೊಂಡಿರುವ ಆ ಮಕ್ಕಳ ಕಣ್ಣದೀಪ್ತಿ ನನ್ನೊಳಗಿನ ಕುತೂಹಲದ ಕಣ್ಣುಗಳ ವಿದ್ಯಾರ್ಥಿನಿಯನ್ನು ಜೀವಂತವಾಗಿರಿಸಿದೆ. ಅಂದಹಾಗೆ ತರಗತಿಯೊಳಗೆ ದೇಶದ ಭವಿಷ್ಯವನ್ನು ನಿರ್ವಿುಸುತ್ತಿರುವ ಎಲ್ಲಾ ಶಿಕ್ಷಕಬಂಧುಗಳಿಗೂ ಶುಭಾಶಯಗಳು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...