20.4 C
Bengaluru
Sunday, January 19, 2020

ಸೌಂದರ್ಯ ಇರೋದು ವ್ಯಕ್ತಿತ್ವದಲ್ಲಿ, ಚರ್ಮದ ಬಣ್ಣದಲ್ಲಲ್ಲ…

Latest News

ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ...

ನಮ್ಮಲ್ಲಿದೆ ಚಾರಿತ್ರಿಕ ಪುರುಷರ ಪೂಜಿಸುವ ಪಂಥ

ಮೈಸೂರು: ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರೆಲ್ಲಾ ಚಾರಿತ್ರಿಕ ಪುರುಷರಾದರೂ ಅದಕ್ಕೆ ಪುರಾಣದ ಪರಿಕಲ್ಪನೆ ನೀಡಿ ಅವರನ್ನು ದೇವರನ್ನಾಗಿ ಪೂಜಿಸುವ ಭಕ್ತಪಂಥವೇ ನಮ್ಮಲ್ಲಿದೆ...

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಯರ್ ಪಟ್ಟ

ಮೈಸೂರು: ನಗರಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿದಿದ್ದು, ಮೇಯರ್ ಆಗಿ ತಸ್ನಿಂ, ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾದರು. ಪಾಲಿಕೆ...

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಬನ್ನಿಮಂಟಪ...

ಗಮನ ಸೆಳೆದ ಸೈಕ್ಲೋಥಾನ್, ಮ್ಯಾರಥಾನ್

ಮೈಸೂರು: ಯುವಜನರ ದೈಹಿಕ ದಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಡೆಯಿತು. ನೆಹರು ಯುವಕೇಂದ್ರ, ಯುವ...

ಡಿಗ್ರಿಯ ಮೇಲೆ ಡಿಗ್ರಿಗಳನ್ನು ಗಳಿಸಿ ಒಳ್ಳೆಯ ಉದ್ಯೋಗದಲ್ಲಿರುವ ನನ್ನ ಕಿರಿಯ ಸ್ನೇಹಿತೆಯೊಬ್ಬಳು ಮ್ಯಾಟ್ರಮೋನಿ ಜಾಲತಾಣದ ಮೂಲಕ ಯುವಕನೊಬ್ಬನನ್ನು ಭೇಟಿಯಾದಳು. ಇಬ್ಬರೂ ಇಷ್ಟಪಟ್ಟು ಮೂರ್ನಾಲ್ಕು ತಿಂಗಳಿಂದ ಚಾಟ್ ಮಾಡುತ್ತಿದ್ದರು, ದಿನವೂ ಮಾತಾಡುತ್ತಿದ್ದರು. ಕಳೆದ ವಾರ ಆತನ ತಂದೆ-ತಾಯಿ ಹುಡುಗಿಯನ್ನು ನೋಡಿದರು. ತಾವೂ ಕಪ್ಪು, ಮಗನೂ ಕಪ್ಪು ಹಾಗಾಗಿ ಎಣ್ಣೆಗೆಂಪು ಬಣ್ಣದ ಹುಡುಗಿಯನ್ನು ತಕರಾರಿಲ್ಲದೆ ಅವರು ಒಪ್ಪಿಕೊಳ್ಳಲಿಲ್ಲ. ತಮಗೆ ಬೆಳ್ಳನೆಯ ಸೊಸೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇತ್ತ ಮೆಚ್ಚಿರುವ ಹುಡುಗಿಯೆಂದು ಪಾಲಕರನ್ನು ಒಪ್ಪಿಸಬೇಕಾದ ಹುಡುಗ ರೆಬೆಲ್ ಆಗಲೇ ಇಲ್ಲ! ಅಪ್ಪ-ಅಮ್ಮನನ್ನು ನಿರಾಸೆಗೊಳಿಸಬಾರದು ಎಂಬುದು ಅವನ ವಿಚಾರ. ಅಲ್ಲಿಗೆ ಇಬ್ಬರು ಪ್ರಬುದ್ಧರು ಮಾತಾಡಿ ಮೆಚ್ಚಿಕೊಂಡಿದ್ದ ಸಂಬಂಧದ ಎಳೆ ತೆಳುವಾಗಿದೆ, ಇನ್ನೇನು ತುಂಡಾಗಲಿದೆ.

ಜನರಿಗೆ ಕಪ್ಪು ಬಣ್ಣದ ಬಗೆಗಿರುವ ಮನೋಭಾವ ಎಲ್ಲರಿಗೂ ಗೊತ್ತಿರುವುದೇ. ಕಪ್ಪು ಬಣ್ಣ ಕೀಳು ಎಂಬ ಮನೋಭಾವ ಜಗತ್ತಿನಾದ್ಯಂತ ಇಂದಿಗೂ ಇದೆ. ಭಾರತೀಯರಲ್ಲಂತೂ ಕಪ್ಪು ಆಕರ್ಷಕವಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಆಳವಾಗಿ ಬೇರೂರಿದೆ. ಇಲ್ಲಿ ಬೆಳ್ಳಗಿರುವುದು ದೊಡ್ಡಸ್ತಿಕೆಯ ಸಂಗತಿ. ‘ನಿಮ್ಮ ಮಗಳು ಮುದ್ದಾಗಿದ್ದಾಳೆ’ ಎಂದು ಹೇಳಿದರೆ ‘ಆದರೇನು ಕಪ್ಪಗಿದ್ದಾಳೆ’ ಎಂದು ತಾಯಿಯೇ ನಿಟ್ಟುಸಿರು ಬಿಟ್ಟು ಹೇಳುವ, ರಸ್ತೆಯಲ್ಲಿ ಸ್ವಲ್ಪ ಹೆಚ್ಚೇ ಕಪ್ಪಗಿರುವ ಹುಡುಗಿಯನ್ನು ನೋಡಿದರೆ ‘ಇವಳನ್ಯಾರು ಮದುವೆಯಾಗುತ್ತಾರೆ’ ಎಂದು ನಮಗೆ ಸಂಬಂಧವೇ ಇಲ್ಲದ ವಿಚಾರದ ಬಗ್ಗೆ ಮಾತಾಡಿಕೊಳ್ಳುವ ಸಮಾಜ ನಮ್ಮದು. ಬಿಳಿ ಬಣ್ಣದ ವ್ಯಸನ ಬ್ರಿಟಿಷರು ಬಿಟ್ಟುಹೋದ ಅತೀ ಕೆಟ್ಟ ಬಳುವಳಿ.

ಚರ್ಮದ ಬಣ್ಣದ ಆಧಾರದ ಮೇಲೆಯೇ ವ್ಯಕ್ತಿಯ ವ್ಯಕ್ತಿತ್ವವನ್ನೂ, ಬುದ್ಧಿವಂತಿಕೆಯನ್ನೂ ನಿರ್ಧರಿಸಿಬಿಡುವ ಅಪಾಯ ಹಿಂದಿನಿಂದಲೂ ಇದೆ. ಜಗತ್ತಿನ ಇತಿಹಾಸದಲ್ಲಿ ಕಪ್ಪು ಬಣ್ಣದವರು ತಮ್ಮ ಬಣ್ಣದ ಕಾರಣಕ್ಕೇ ಅನುಭವಿಸಿದ ಸಂಕಷ್ಟಗಳನ್ನು ಇತಿಹಾಸ ದಾಖಲಿಸುತ್ತದೆ. ಸಾಮಾನ್ಯ ಜನರು ಮಾತ್ರವಲ್ಲ, ಮಹಾರಾಜರು, ರಾಣಿಯರು ಕೂಡ ತಾವು ಕಪ್ಪಗಿದ್ದರೂ ತಮ್ಮ ವರ್ಣಚಿತ್ರಗಳು ಬೆಳ್ಳಗಿರಬೇಕೆಂದು ಬಯಸುತ್ತಿದ್ದರಂತೆ. ನಮ್ಮ ಚಲನಚಿತ್ರಗಳ ಹಾಡುಗಳೋ ಬಿಳಿ ಬಣ್ಣವನ್ನೇ ಹಾಡಿಹೊಗಳುತ್ತವೆ. ನಟಿ ಎಷ್ಟೇ ಪ್ರತಿಭಾವಂತೆಯಿರಲಿ ಬಣ್ಣ ಬಿಳಿ ಇಲ್ಲದಿದ್ದರೆ ಅವಳಿಗೆ ನಾಯಕಿಯ ಪಾತ್ರ ಸಿಕ್ಕುವುದು ಕಷ್ಟ. ನಟನೆಯ ಗಂಧ ಕೂಡ ಇಲ್ಲದ ಉತ್ತರದ ಹುಡುಗಿಯರನ್ನು ಬೆಳ್ಳಗಿರುವ ಒಂದೇ ಕಾರಣಕ್ಕೆ ನಾಯಕಿಯರನ್ನಾಗಿಸುವುದನ್ನು ನಮ್ಮ ಕನ್ನಡ ಸಿನಿಮಾಗಳಲ್ಲೇ ನೋಡುತ್ತಿದ್ದೇವೆ. ಗಗನಸಖಿಯರನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಬಣ್ಣಕ್ಕೇ ಮೊದಲ ಆದ್ಯತೆ. ಅಕಾಸ್ಮಾತ್ ಆಯ್ಕೆಯಾದರೂ ಬಣ್ಣ ಕಡಿಮೆ ಇರುವವರಿಗೆ ಜನರ ಕಣ್ಣಿಗೆ ಕಾಣಿಸಿಕೊಳ್ಳದೇ ಇರುವ ಇತರೇ ಕೆಲಸಗಳನ್ನೇ ನೀಡಲಾಗುತ್ತದೆ!

ಜನರ ಈ (ಮೂಢ)ನಂಬಿಕೆ ಸೌಂದರ್ಯ ಸಾಧನ ತಯಾರಿಕಾ ಕಂಪನಿಗಳಿಗೆ ವರವಾಗಿದೆ. ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಬಿಳಿ ಬಣ್ಣ ಶ್ರೇಷ್ಠ ಎಂಬ ನಂಬಿಕೆಯನ್ನು ಬಿತ್ತಲು, ತನ್ಮೂಲಕ ಕಪ್ಪಗಿರುವವರ ಆತ್ಮವಿಶ್ವಾಸ ಕುಂದಿಸಲು ಅವು ವ್ಯವಸ್ಥಿತವಾಗಿ ಪ್ರಯತ್ನಗಳನ್ನು ಮಾಡುತ್ತ ಬಂದಿವೆ, ಯಶಸ್ವಿಯೂ ಆಗಿವೆ. ಕಾರಣ ಕೀಳರಿಮೆಯಿಂದ ನರಳುವ ಪ್ರತೀ ಯುವಕ ಯುವತಿಯೂ ಈ ಕಂಪನಿಗಳ ಗ್ರಾಹಕರೇ. ಹಾಗಾಗಿ ಕಪ್ಪಗಿದ್ದಾಗ ಸಾಧ್ಯವಾಗದ ಸಾಧನೆ ಕ್ರೀಂ ಹಚ್ಚಿ ಬೆಳ್ಳಗಾದ ಕೂಡಲೇ ಸಾಧ್ಯವಾಗುತ್ತದೆನ್ನುವ ನೇತ್ಯಾತ್ಮಕ ಸಂದೇಶ ದಿನದಿನವೂ ಹರಡಲ್ಪಡುತ್ತಿದೆ.

ಅದರಲ್ಲೂ ಡಾರ್ಕ್ ಆಂಡ್ ಹ್ಯಾಂಡ್​ಸಮ್ ಎಂಬ ಪರಿಕಲ್ಪನೆಯ ಮೂಲಕ ಹುಡುಗರಿಗೆ ಬೆಳ್ಳಗಿರುವುದದರಿಂದ ಒಂದಿಷ್ಟು ವಿನಾಯ್ತಿ ನೀಡಲಾಗಿದ್ದರೂ, ಹುಡುಗಿಯರಿಗೆ ಈ ವಿನಾಯ್ತಿ ಇಲ್ಲ. ಎಷ್ಟೇ ಓದಿದ್ದರೂ, ಜಾಣೆಯಾಗಿದ್ದರೂ ಬಣ್ಣ ಕಪ್ಪಗಿದ್ದರೆ ಅವಳ ಎಲ್ಲ ಸಾಧನೆಯೂ ಗೌಣ (ಬೆಳ್ಳಗಿರುವ ಹೆಣ್ಣುಮಕ್ಕಳ ಸಾಧನೆಯ ಶ್ರೇಯವನ್ನು ಅವರ ಬಣ್ಣಕ್ಕೆ ಕೊಡುವ ಸಣ್ಣ ಮನಸ್ಸಿನವರೂ ಇದ್ದಾರೆ, ಇದನ್ನು ರ್ಚಚಿಸುವ ಅಗತ್ಯವೂ ಬಹಳವಿದೆೆ). ನಮ್ಮ ಈ ಮನೋಭಾವದಿಂದಲೇ ಏಳು, ಎಂಟನೇ ತರಗತಿಯವರೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹುಡುಗಿಯರಿಗೆ ನಂತರ ಹೊರಾಂಗಣ ಆಟವಾಡಲು ಮನೆಯಿಂದಲೇ ನಿಷೇಧ ಹೇರಲಾಗುತ್ತದೆ. ಅಥವಾ ಹುಡುಗಿಯರ ತಲೆಯಲ್ಲಿ ಕಪ್ಪಾಗುವುದರ ಬಗ್ಗೆ ಭಯ ತುಂಬಿಸಿ ಅವರಾಗಿಯೇ ಹಿಂದೆ ಸರಿಯುವಂತೆ ನೋಡಿಕೊಳ್ಳಲಾಗುತ್ತದೆ.

ಇತ್ತೀಚೆಗೆ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಸೌಂದರ್ಯ ಸಾಧನಗಳ ಜಾಹೀರಾತನ್ನು ತಿರಸ್ಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ತನ್ನ ಸೌಂದರ್ಯದ ಗುಟ್ಟು ಇಂಥ ಫೇರ್​ನೆಸ್ ಕ್ರೀಮು ಎಂದು ಒಂದೇ ಒಂದು ಸಾಲು ಹೇಳಿ ಅನಾಯಾಸವಾಗಿ ಎರಡು ಕೋಟಿ ರೂಪಾಯಿ ಪರ್ಸಿಗಿಳಿಸಬಹುದಾಗಿದ್ದ ಅವಕಾಶವನ್ನು ತಿರಸ್ಕರಿಸಿದ ಈ ನಟಿಯ ನೇರವಂತಿಕೆ, ದಿಟ್ಟತನವನ್ನು ಮೆಚ್ಚಲೇಬೇಕು. ಏಕೆಂದರೆ ಸಿನಿಮಾ ತಾರೆಯರ ಸೌಂದರ್ಯ ಸಾಧನಗಳ ಜಾಹೀರಾತನ್ನು ನೋಡಿ ಇನ್ನೇನು ವಾರ ತಿಂಗಳೊಪ್ಪತ್ತಿನಲ್ಲಿ ಹಾಲಿನಂತೆ ಬೆಳ್ಳಗಾಗುವ ಕನಸು ಹೊತ್ತು ತರುಣಿಯರು ಫೇರ್​ನೆಸ್ ಕ್ರೀಮ್ಳನ್ನು ದಶಕದಶಕಗಳಿಂದ ಬಳಸುತ್ತಲೇ ಇದ್ದಾರೆ. ಎರಡು ಮೂರು ವಾರಗಳಲ್ಲಿ ಅದ್ಭುತ ದೇಹಕಾಂತಿ ಪಡೆಯುವ ಪ್ರಲೋಭನೆಯನ್ನೊಡ್ಡಿ ಕಂಪನಿಗಳು ಬಿಲಿಯಗಟ್ಟಲೆ ಹಣ ದೋಚುತ್ತಲೇ ಇವೆ.

ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಸಮಾಜ ಒತ್ತಾಸೆಯಾಗಿ ನಿಲ್ಲಬೇಕಾದ ಸಮಯದಲ್ಲಿ ಅವರನ್ನು ಹಾದಿ ತಪ್ಪಿಸುವ ಜಾಹೀರಾತುಗಳು, ಸಿನಿಮಾ ಹಾಡುಗಳು, ಧಾರಾವಾಹಿ ಮತ್ತು ಚಲನಚಿತ್ರಗಳ ಸಂಭಾಷಣೆಗಳು, ಹಗಲೂ ರಾತ್ರಿ ಹೇಳಿದ್ದನ್ನೇ ಹೇಳಿ ತೋರಿಸಿದ್ದನ್ನೇ ತೋರಿಸಿ ಬೆಳ್ಳಗಿರುವುದೆಂದರೆ ಏನೋ ಸಾಧನೆ ಮಾಡಿದಂತೆ ಎಂಬ ಭ್ರಮೆಯನ್ನು ಹುಟ್ಟಿಸಿಬಿಟ್ಟಿವೆ. ‘ಸುಳ್ಳನ್ನು ಪದೇಪದೆ ಹೇಳುವುದರಿಂದ ಸತ್ಯವಾಗುತ್ತದೆ’ ಎಂಬ ಹಿಟ್ಲರ್​ನ ಮಂತ್ರಿ

ಗೊಬೆಲ್ಸ್​ನ ಮಾತಿನಂತೆಯೇ ನಾವೆಲ್ಲ ಅಂತರಂಗದಲ್ಲಿ ಒಪ್ಪಿಕೊಂಡಿರುವ ಗೌರವರ್ಣದ ಶ್ರೇಷ್ಠತೆಯನ್ನು ನಮ್ಮ ಮನಸ್ಸಿನಾಳದಲ್ಲಿ ಒಪ್ಪಿಕೊಂಡೂಬಿಟ್ಟಿದ್ದೇವೆ. ಅದನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ನಾವು ಇರುವುದಕ್ಕಿಂತ ಕನಿಷ್ಠ ಮೂರು ಪಟ್ಟು ಬೆಳ್ಳಗೆ ನಮ್ಮನ್ನು ಕಾಣಿಸುವ ಕ್ಯಾಮರಾ ಇರುವ ಮೊಬೈಲ್​ಗಳು ಹೆಚ್ಚುಹೆಚ್ಚು ವ್ಯಾಪಾರವಾಗುತ್ತಿವೆ. ತೆಗೆದ ಫೋಟೋಗಳನ್ನೇ ಬೆಳ್ಳಗಾಗಿಸುವ ಆಪ್​ಗಳು ನೂರಾರು ಸಂಖ್ಯೆಯಲ್ಲಿವೆ ಮತ್ತು ಅವುಗಳನ್ನು ಪ್ರತೀ ಸೆಕೆಂಡಿಗೆ ಸಾವಿರಾರು ಮಂದಿ ಡೌನ್​ಲೋಡ್ ಮಾಡುತ್ತಾರೆ. ನಾವೂ ಅಷ್ಟೇ, ಇರುವುದಕ್ಕಿಂತ ಸುಂದರವಾಗಿರುವ ಫೋಟೋಗಳನ್ನೇ ಹುಡುಕಿ ಹುಡುಕಿ ಅಪ್​ಲೋಡ್ ಮಾಡುತ್ತೇವೆ. ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ಜಾತಿಯಂತೆ ಗೌರವರ್ಣ ಎನ್ನುವುದೂ ಮರೆಯದೇ ಸೇರಿಸುವ ಸಂಗತಿಯಾಗಿದೆ.

ಅಚ್ಚರಿಯ ಸಂಗತಿಯೆಂದರೆ ತಮ್ಮ ಮನಸ್ಸಿನಲ್ಲಿ ಬಣ್ಣದ ಬಗೆಗಿರುವ ಪೂರ್ವಗ್ರಹವನ್ನು ಹೊರಗೆ ಹಾಕಲು ಕೆಲವರಿಗೆ ಯಾವ ಭಿಡೆಯೂ ಇಲ್ಲದಿರುವುದು. ನಮ್ಮ ಈ ರೀತಿಯ ಮನಸ್ಥಿತಿಗಳನ್ನೆಲ್ಲ ಬೆತ್ತಲುಗೊಳಿಸುವ ಖ್ಯಾತಿ

ಫೇಸ್​ಬುಕ್​ಗೇ ಸಲ್ಲಬೇಕು! ಕಪ್ಪಗಿರುವ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರಿಕೆಟ್ ಪಟುಗಳು, ಇತರೇ ಸೆಲೆಬ್ರಿಟಿಗಳು ಅಷ್ಟೇ ಯಾಕೆ ತಮಗಾಗದವರನ್ನು ಸಹ ಮನಸ್ಸಿಗೆ ಬಂದಂತೆ ಟೀಕಿಸಿ ಹೀನಾಯವಾಗಿ ಮಾತಾಡುವುದು ಕೆಲವರಿಗೆ ಚಟ. ಕಪ್ಪು ಬಣ್ಣವನ್ನು ಕೀಳಾಗಿ ಕಾಣುವ ಇಂತಹ ಮನಸ್ಥಿತಿ ಹೊಂದಿದವರಲ್ಲಿ ಉಪನ್ಯಾಸಕರು, ವೈದ್ಯರು, ಅಧಿಕಾರಿಗಳು, ಲೇಖಕರು, ಉದ್ದದ ಡಿಗ್ರಿಗಳನ್ನು ಹೊಂದಿದವರೂ ಇದ್ದಾರೆನ್ನುವುದು ದುರಂತ.

ಇದಕ್ಕೆ ಪರಿಹಾರ ನಮ್ಮ ಕೈಯ್ಯಲ್ಲಿಯೇ ಇದೆ. ನಮ್ಮ ಮುಂದಿನ ಪೀಳಿಗೆಯ ಸೌಂದರ್ಯದ ಪರಿಕಲ್ಪನೆ ಬದಲಾಗಬೇಕು. ಸೌಂದರ್ಯವೆನ್ನುವುದು ವ್ಯಕ್ತಿಯ ವ್ಯಕ್ತಿತ್ವದಲ್ಲಿದೆಯೇ ಹೊರತು ಚರ್ಮದ ಬಣ್ಣದಲ್ಲಲ್ಲ ಎಂಬ ಮನೋಭಾವವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು. ಅದನ್ನು ಮೊದಲು ಮನೆಯಲ್ಲಿ ಪಾಲಕರು ಹೇಳಿಕೊಡಬೇಕು. ಆದರೆ ಬಣ್ಣದ ಆಧಾರದ ಮೇಲೆ ತಮ್ಮ ಮಕ್ಕಳಿಗೇ ತಾರತಮ್ಯ ಮಾಡುವ ಮೂರ್ಖ ಪಾಲಕರೂ ಇದ್ದಾರೆ. ಹಾಗಾಗಿ ಇಲ್ಲಿ ಶಿಕ್ಷಕರ ಪಾತ್ರ ಹಿರಿದು. ‘ಜೂಲಿಯೆಟ್ ಕಾಗೆಗಳ ಮಧ್ಯೆ ಇರುವ ಬಿಳಿಯ ಪಾರಿವಾಳದಂತೆ ಕಾಣುತ್ತಿದ್ದಳು’ ಎಂಬಂತಹ ಸಾಲುಗಳನ್ನು ಪಾಠ ಮಾಡುವಾಗ ಬೆಳ್ಳಗಿರುವವರ ಮುಖದಲ್ಲಿ ಕಂಡೂಕಾಣದ ಹೆಮ್ಮೆಯನ್ನೂ ಕಪ್ಪಗಿರುವವರ ಮುಖ ಸಪ್ಪಗಾಗುವುದನ್ನೂ ನಾನು ಗಮನಿಸಿದ್ದೇನೆ. ಹೈಸ್ಕೂಲು, ಪಿಯುಸಿ ಹಂತಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಕರು, ಉಪನ್ಯಾಸಕರು ಅವರಲ್ಲಿರುವ ಬಣ್ಣದ ಕುರಿತ ಭ್ರಮೆಗಳನ್ನು ತೊಡೆದುಹಾಕಲು ಸತತ ಪ್ರಯತ್ನ ಮಾಡುತ್ತಲೇ ಇರಬೇಕು. ಇದು ಸಾಸಿವೆಯ ರಾಶಿಯ ಜತೆ ಬೆರೆತ ರಾಗಿಯ ರಾಶಿಯನ್ನು ಬೇರೆ ಮಾಡುವಂತಹ ದೀರ್ಘ ಸಮಯ ಬೇಡುವ ಕೆಲಸವೇ ಇರಬಹುದು. ಆದರೆ ಬರಿದೇ ಮಾತಾಡುವುದಕ್ಕಿಂತ ಚಿಕ್ಕದಾಗಿಯಾದರೂ ಕೆಲಸ ಶುರು ಮಾಡುವುದು ಈಗಿನ ಅವಶ್ಯಕತೆ ಮಾತ್ರವಲ್ಲ ಅನಿವಾರ್ಯತೆಯೂ ಹೌದು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...