20.4 C
Bengaluru
Sunday, January 19, 2020

ಸಮಯವನ್ನು ವ್ಯರ್ಥವಾಗಿ ಕಳೆದುಬಿಟ್ಟೆ ಎನಿಸುತ್ತಿದೆಯೇ?

Latest News

ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ...

ನಮ್ಮಲ್ಲಿದೆ ಚಾರಿತ್ರಿಕ ಪುರುಷರ ಪೂಜಿಸುವ ಪಂಥ

ಮೈಸೂರು: ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರೆಲ್ಲಾ ಚಾರಿತ್ರಿಕ ಪುರುಷರಾದರೂ ಅದಕ್ಕೆ ಪುರಾಣದ ಪರಿಕಲ್ಪನೆ ನೀಡಿ ಅವರನ್ನು ದೇವರನ್ನಾಗಿ ಪೂಜಿಸುವ ಭಕ್ತಪಂಥವೇ ನಮ್ಮಲ್ಲಿದೆ...

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಯರ್ ಪಟ್ಟ

ಮೈಸೂರು: ನಗರಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿದಿದ್ದು, ಮೇಯರ್ ಆಗಿ ತಸ್ನಿಂ, ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾದರು. ಪಾಲಿಕೆ...

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಬನ್ನಿಮಂಟಪ...

ಗಮನ ಸೆಳೆದ ಸೈಕ್ಲೋಥಾನ್, ಮ್ಯಾರಥಾನ್

ಮೈಸೂರು: ಯುವಜನರ ದೈಹಿಕ ದಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಡೆಯಿತು. ನೆಹರು ಯುವಕೇಂದ್ರ, ಯುವ...

ಹೀಗೇ ಒಮ್ಮೆ ಗೌತಮ ಬುದ್ಧನನ್ನು ಯಾರೋ ಕೇಳಿದರಂತೆ-‘ಮನುಷ್ಯನ ದೊಡ್ಡ ತಪ್ಪುಗ್ರಹಿಕೆ ಯಾವುದು’? ಅದಕ್ಕೆ ಬುದ್ಧ ಹೇಳಿದನಂತೆ, ‘ಮನುಷ್ಯನಿಗೆ ಯಾವಾಗಲೂ ತನ್ನ ಹತ್ತಿರ ಬಹಳ ಸಮಯವಿದೆ ಎಂದು ಅನ್ನಿಸುತ್ತಿರುತ್ತದೆ. ಅದೇ ಮನುಷ್ಯನ ದೊಡ್ಡ ತಪ್ಪು ಕಲ್ಪನೆ’ ಎಂದು. ಇದನ್ನು ವಿಚಿತ್ರವೆಂದಾದರೂ ಎನ್ನಿ, ವೈರುಧ್ಯವೆಂದಾದರೂ ಎನ್ನಿ. ‘ಸಮಯ ಇಲ್ಲ’ ಎನ್ನುವುದು ಮನುಷ್ಯನ ಒಂದು ಕಾಯಿಲೆಯಾದರೆ ‘ಸಮಯ ಬೇಕಾದಷ್ಟಿದೆ’ ಎಂದುಕೊಳ್ಳುವುದು ಇನ್ನೊಂದು ರೀತಿಯ ರೋಗ. ನಿಜ ತಾನೇ, ನಮಗೆ ಯಾವಾಗಲೂ ನಮ್ಮ ಹತ್ತಿರ ಬಹಳ ಸಮಯವಿದೆ ಎನ್ನಿಸುತ್ತಿರುತ್ತದೆ. ಆದರೆ ಬೇಕಾದಷ್ಟಿದೆ ಎಂದುಕೊಂಡಿದ್ದ ಆ ಸಮಯ ಕಳೆದುಹೋದ ಮೇಲೆಯೇ ಅದರ ಮಹತ್ವದ ಅರಿವಾಗುವುದು. ಬೇಸರದ ವಿಚಾರವೆಂದರೆ ಈ ವಿಷಯದಲ್ಲಿ ಬೇರೆಯವರ ಅನುಭವದಿಂದ ಯಾರೂ ಪಾಠ ಕಲಿಯುವುದಿಲ್ಲ. ಒಂದು ಮಾತಂತೂ ಸತ್ಯ. ಸಮಯವನ್ನು ನಾವು ಗೌರವಿಸದಿದ್ದರೆ ಅದು ನಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.

ನಮಗೆಲ್ಲರಿಗೂ ಇರುವ ಕೆಟ್ಟ ರೂಢಿಯೆಂದರೆ ಕಣ್ಣೆದುರು ಇರುವ ಪ್ರಸ್ತುತ ಕ್ಷಣಕ್ಕಿಂತ ಕಾಣದ ಭವಿಷ್ಯಕ್ಕೆ ಪ್ರಾಶಸ್ತ್ಯ ಕೊಡುವುದು. ಹಾಗಾಗಿಯೇ, ಭವಿಷ್ಯದಲ್ಲಿ ಸಮಯ ಬೇಕಾದಷ್ಟಿದೆ ಎಂದು ಆರಾಮಾಗಿ ಕಾಲ ಕಳೆದುಬಿಡುತ್ತೇವೆ. ಭವಿಷ್ಯದಲ್ಲಿ ಚೆನ್ನಾಗಿರಬೇಕೆಂದೆ ಎಲ್ಲರೂ ಬಯಸುವುದಾದರೂ ಅದಕ್ಕೆ ವರ್ತಮಾನದಲ್ಲಿ ಶ್ರಮಪಡಬೇಕಲ್ಲವೇ? ಇವತ್ತೇಕೆ ಮಾಡುವುದು ಮುಂದೆ ಮಾಡಿದರಾಯಿತು ಎನ್ನುವ ಮುಂದೂಡುವಿಕೆಯ ಪ್ರವೃತ್ತಿ ಶ್ರಮದ ಸಂಕಟವನ್ನು ತಪ್ಪಿಸಿಕೊಳ್ಳಲು ಇರುವ ಮಾರ್ಗವೇ ಹೊರತು ಬೇರೇನಿಲ್ಲ. ಒಂದು ಕೈಯ್ಯಲ್ಲಿ ವಜ್ರದ ತುಂಡು, ಇನ್ನೊಂದು ಕೈಯ್ಯಲ್ಲಿ ಪುಟ್ಟ ಸಿಹಿತಿಂಡಿ ಹಿಡಿದು ಯಾವುದು ಬೇಕು ಎಂದರೆ ಸಿಹಿಯನ್ನೇ ಆಯ್ಕೆ ಮಾಡುವ ವಜ್ರದ ಮೌಲ್ಯವನ್ನರಿಯದ ಪುಟ್ಟ ಮಗುವಿನಂತಹವರು ನಾವು. ಆ ಮಗುವಿನದೋ ಮುಗ್ಧತೆ, ಆದರೆ ಸಮಯದ ಮೌಲ್ಯವನ್ನರಿಯದ ನಮ್ಮದು ಅಜ್ಞಾನ ಅಷ್ಟೇ ಅಲ್ಲ ಅಪರಾಧ ಕೂಡ.

‘ಯಶಸ್ಸಿಗಾಗಿ ನಾವು ಪಡುವ ಕಷ್ಟ, ಅನುಭವಿಸುವ ನೋವು ತಾತ್ಕಾಲಿಕ, ಅದು ಒಂದು ನಿಮಿಷ ಇರಬಹುದು, ಒಂದು ಗಂಟೆಯದ್ದಿರಬಹುದು, ಒಂದು ದಿನದ್ದಿರಬಹುದು, ಒಂದು ವರ್ಷದ್ದಿರಬಹುದು. ಆದರೆ ಅದು ನಿಧಾನವಾಗಿ ಮಾಯವಾಗುತ್ತದೆ. ಆದರೆ ಪ್ರಯತ್ನದಿಂದ ಹಿಂದೆ ಸರಿದರೆ ಆ ನೋವು ಶಾಶ್ವತವಾಗಿರುತ್ತದೆ’ ಎಂದು ಖ್ಯಾತ ಸೈಕ್ಲಿಂಗ್ ಚಾಂಪಿಯನ್ ಲಾನ್ಸ್ ಆಮರ್್​ಸ್ಟ್ರಾಂಗ್ ಹೇಳುತ್ತಾರೆ. ಹೌದು, ಕಠಿಣ ಪ್ರಯತ್ನ ನೀಡುವ ನೋವು ತಾತ್ಕಾಲಿಕ. ಏಕೆಂದರೆ ಮುಂದೆ ಯಶಸ್ಸು ಅದನ್ನು ಮರೆಯಿಸಿಬಿಡುತ್ತದೆ. ಆದರೆ ಪ್ರಯತ್ನವನ್ನೇ ಕೈ ಬಿಡುವುದು ಶಾಶ್ವತ ನೋವನ್ನು ನೀಡುತ್ತದೆ ಎಂಬ ವಾಸ್ತವ ಕಷ್ಟಪಡಲು ಹೆದರಿ ಅಮೂಲ್ಯವಾದ ಸಮಯವನ್ನು, ಸಾಧನೆಯ ಚಿನ್ನದಂತಹ ಅವಕಾಶವನ್ನು ಕಳೆದುಕೊಂಡವರಿಗಿಂತ ಚೆನ್ನಾಗಿ ಬೇರೆಯವರಿಗೆ ಅರ್ಥವಾಗಲು ಸಾಧ್ಯವಿಲ್ಲ.

ಸಮಯವನ್ನು ಉಳಿಸಿಕೊಳ್ಳಲಾಗುವುದಿಲ್ಲ, ಆದರೆ ಅದನ್ನು ಉಪಯೋಗಿಸಿಕೊಳ್ಳಬಹುದು. ಎಲ್ಲರಿಗೂ ಸಿಕ್ಕಿದಂತೆ ನಮಗೂ ಸಮಯ ಉಚಿತವಾಗೇ ಸಿಗುತ್ತದೆ. ಆದರೆ ಸಮಯದ ಬೆಲೆಯನ್ನು ಯಾರೂ ಕಟ್ಟಲಾರರು. ಬೇಂದ್ರೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂದು ಹೇಳಿದ್ದು ಸಮಯದ ಬಗ್ಗೆಯೇ. ಸಮಯ ವೇಗವಾಗಿ ಹಾರುತ್ತದೆ. ಮೊನ್ನೆ ಮೊನ್ನೆ ಹೊಸ ವರ್ಷದ ಶುಭಾಶಯ ಹೇಳಿದಂತಿರುತ್ತದೆ. ಆಗಲೇ ಮತ್ತೊಂದು ವರ್ಷ ಎದುರು ಬಂದು ನಿಂತಿರುತ್ತದೆ. ನಾಲ್ಕನೇ ಕ್ಲಾಸಿನಲ್ಲಿದ್ದ ಮಗ ಹತ್ತನೇ ಕ್ಲಾಸಿನ ಪರೀಕ್ಷೆ ಬರೆಯುತ್ತಿರುತ್ತಾನೆ. ಎಲ್ಲ ಜವಾಬ್ದಾರಿ ಮುಗಿಸಿ ಉತ್ತರ ಭಾರತ ಯಾತ್ರೆ ಮಾಡಬೇಕೆನ್ನುವ ಹೊತ್ತಿಗೆ ಹೆಜ್ಜೆಯೂರಲೂ ಬಿಡದ ಮಂಡಿ ನೋವು ಇಳಿವಯಸ್ಸನ್ನು ನೆನಪಿಸುತ್ತದೆ. ಆದರೆ ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಸಮಯ ಹಾರುತ್ತದಾದರೂ ಅದನ್ನು ಚಲಾಯಿಸುವ ಪೈಲಟ್ ನಾವೇ. ಸಮಯವನ್ನು ಹೇಗೆ ನಿಯಂತ್ರಿಸಬಹುದೆಂದು, ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲ ಪೈಲಟ್ ಗುರಿ ತಲುಪಿದರೆ, ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಚಲಾಯಿಸುವ ಪೈಲಟ್ ಕಥೆ ಅಷ್ಟೇ!

ಸಮಯ ಒಂದು ವಿಶಿಷ್ಟ ಸಂಗತಿ. ನಮ್ಮ ಸಂಪತ್ತನ್ನು ದ್ವಿಗುಣ ತ್ರಿಗುಣಗೊಳಿಸಿಕೊಳ್ಳಬಹುದು. ಆದರೆ ಸೆಕೆಂಡಿನ ಸಾವಿರದಲ್ಲೊಂದು ಅಂಶವನ್ನೂ ಖರೀದಿಸಲಾರೆವು. ನಮ್ಮೆಲ್ಲರ ಹತ್ತಿರವೂ ಸಮಯವಿದೆ. ಇದೀಗ ಈ ಕ್ಷಣ ನಾವದನ್ನು ಹೊಂದಿದ್ದೇವೆ ಕೂಡ. ಸರಿಯಾಗಿ ಉಪಯೋಗಿಸಿಕೊಳ್ಳುವ ಸಮಯದಲ್ಲಿ ಯಶಸ್ಸಿನ, ಸಂತಸದ, ಸಂಪತ್ತಿನ ರಹಸ್ಯ ಅಡಗಿದೆ. ನಿರ್ಲಕ್ಷಿಸಿದರೆ ನೋವು ಕಟ್ಟಿಟ್ಟಬುತ್ತಿ. ದಿನವೂ ಬೆಳಗ್ಗೆ ಎದ್ದಾಗ ಸಿಗುವ ಈ ಆಸ್ತಿಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಬದುಕಿನ ಏರಿಳಿತಗಳು ನಿರ್ಧಾರವಾಗುತ್ತವೆ. ಹನಿಹನಿಯಾಗಿ ಗೊತ್ತೇ ಆಗದಂತೆ ಸೋರಿಹೋಗುತ್ತಲೇ ಇರುವ, ವಾಪಾಸು ಪಡೆಯಲಾಗದ ಅಮೂಲ್ಯ ನಿಧಿಯಿದು.

ಹಾಗಾದರೆ ಕೆಲಸ ಪ್ರಾರಂಭಿಸಲು ಸರಿಯಾದ ಸಮಯ ಯಾವುದು? ರಿಟೈರ್ ಆದ ಮೇಲಲ್ಲ, ಐದು ವರ್ಷದ ನಂತರವಲ್ಲ, ಅಪ್ಪ ಕಂಪ್ಯೂಟರ್ ಕೊಡಿಸಿದ ಮೇಲಲ್ಲ, ನಾಳೆಯಂತೂ ಅಲ್ಲವೇ ಅಲ್ಲ! ಇದೀಗ ನಮ್ಮ ತೆಕ್ಕೆಯಲ್ಲಿ ಏನೂ ಅರಿಯದ ಹಸುಗೂಸಂತೆ ಮಲಗಿರುವ ಈ ಗಳಿಗೆಯೇ ಎಲ್ಲದಕ್ಕಿಂತ ಪ್ರಶಸ್ತವಾದ ಕಾಲ. ಈ ಸಮಯವನ್ನು ಕಠಿಣ ಪರಿಶ್ರಮದಿಂದ, ಸಮರ್ಪಣಾ ಮನೋಭಾವದಿಂದ ದುಡಿಸಿಕೊಂಡರೆ ಜಗತ್ತೇ ಅಂತಹ ಸಾಧಕನ ಸೊತ್ತಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಇರುವ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹನ್ನೆರಡು ಗಂಟೆ ಈಜಿನ ಅಭ್ಯಾಸ ಮಾಡಿ ಮೈಕೆಲ್ ಫೆಲ್ಪ್ಸ್ ವಿಶ್ವದಾಖಲೆಗಳ ದಾಖಲೆ ನಿರ್ವಿುಸಿದ. ಉಗ್ಗಿನ ಸಮಸ್ಯೆಯಿಂದ ಬಾಯಿ ತೆರೆಯಲಿಕ್ಕೇ ಹಿಂಜರಿಯುತ್ತಿದ್ದ ಡೆಮಾಸ್ತನೀಸ್ ಗಂಟೆಗಂಟೆಗಳ ಕಾಲ ಅಭ್ಯಸಿಸಿ ಜಗತ್ತೇ ಅಚ್ಚರಿಪಡುವ ವಾಗ್ಮಿಯಾದ. ಓದಿನಲ್ಲಿ ಸಾಧಾರಣ ಅಥವಾ ಅತೀ ಸಾಧಾರಣ ಎನ್ನಬಹುದಾದ ಯುವಕ-ಯುವತಿಯರು ವರ್ಷವರ್ಷಗಳ ಕಾಲ ಎಡಬಿಡದೆ ಶ್ರದ್ಧೆಯಿಂದ ಓದಿ ಐಎಎಸ್ ಅಧಿಕಾರಿಗಳೇ ಆದ ಉದಾಹರಣೆಗಳಿವೆ. ಸಾವಿರ ಸಾವಿರ ಗಂಟೆಗಳ ಕಾಲ ಸತತ ಅಭ್ಯಾಸ ನಡೆಸಿದವರು ಅಪ್ರತಿಮ ಕಲಾವಿದರಾಗಿದ್ದಾರೆ. ಇಂತಹ ಉದಾಹರಣೆಗಳೋ ಅನೇಕ. ಒಂದಂತೂ ನಿಜ, ತನ್ನ ಸರಿಯಾದ ಉಪಯೋಗ ಮಾಡಿಕೊಂಡವರನ್ನು ಸಮಯ ಎಂದಿಗೂ ನಿರಾಕರಿಸಿಲ್ಲ.

ನಮ್ಮ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುವುದು ಬಹು ಮುಖ್ಯ. ಇಲ್ಲವಾದಲ್ಲಿ ಮುಖ್ಯವಲ್ಲದ ಕೆಲಸಗಳಿಗೆ ಸಮಯ ಸೋರಿಹೋಗಿ ಪ್ರಮುಖ ಕೆಲಸಗಳಿಗೆ ವೇಳೆಯೇ ಸಿಗದಂತಾಗುತ್ತದೆ. ಸಮಯವನ್ನು ಉಳಿಸಲು ನಾವು ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಬೇಕಿಲ್ಲ. ದಿನವೂ ಬೆಳಗ್ಗೆ ಹತ್ತು ನಿಮಿಷ ಬೇಗ ಏಳುವುದು, ಸ್ನಾನದ ಮನೆಯಲ್ಲಿ ಅರ್ಧರ್ಧ ಗಂಟೆ ಕಳೆಯುವ ಸಮಯವನ್ನು ಇಪ್ಪತ್ತು ನಿಮಿಷಕ್ಕೆ ಇಳಿಸುವುದು, ಬೇಕಿರಲಿ ಬೇಡದಿರಲಿ ಆಗಾಗ ಮೊಬೈಲ್ ತೆಗೆದು ಫೇಸ್​ಬುಕ್ ಸ್ಕೊ›ೕಲ್ ಮಾಡುವ ಸಮಯದಲ್ಲಿ ಅರ್ಧಗಂಟೆ ಕಡಿಮೆ ಮಾಡುವುದು ಇಂಥವೇ ಸಾಕು. ಇದರಿಂದ ನಮಗೆ ನಮ್ಮ ಪ್ರಮುಖ ಕೆಲಸ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಉದಾಹರಣೆಗೆ, ಇಷ್ಟದ ಪುಸ್ತಕ ಓದುವುದು, ಸಂಗೀತವೋ ತೋಟಗಾರಿಕೆಯೋ ಹೀಗೆ ಇಷ್ಟದ ಹವ್ಯಾಸವನ್ನು ಮುಂದುವರಿಸಬಹುದು.

ನಮ್ಮ ಸಮಸ್ಯೆ ಏನೆಂದರೆ ನಾವು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇರುತ್ತೇವೆ. ಮತ್ತು ಅವನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹಳ ಸಲ ವಿಫಲರೂ ಆಗುತ್ತೇವೆ. ಕಾರಣ ನಾವು ಮೊದಲೇ ನಮ್ಮ ಸಮಯವನ್ನು ಬೇರೆ ಬೇರೆ ಕೆಲಸಗಳಿಗೆ ಹೊಂದಿಸಿಕೊಂಡಿರುತ್ತೇವೆ. ಹಾಗಾಗಿ ಹೊಸ ಯೋಜನೆಗಳಿಗೆ ನಮ್ಮಲ್ಲಿ ಸಮಯವಿರುವುದಿಲ್ಲ. ಹೊಸ ಯೋಜನೆಗಳಿಗೆ ಅವಕಾಶ ಆಗಬೇಕೆಂದರೆ ಹಳೆಯ ಅನುಪಯುಕ್ತ ಕೆಲಸಗಳಿಗೆ ನೀಡುತ್ತಿದ್ದ ಸಮಯವನ್ನು ನಿಲ್ಲಿಸಬೇಕು. ದಿನಕ್ಕೆ ಒಂದು ಗಂಟೆ ಆ ರೀತಿಯ ಸಮಯ ಉಳಿದರೂ ವಾರಕ್ಕೆ ಏಳು ಗಂಟೆ ನಮಗೆ ಸಿಕ್ಕಿದ ಹಾಗೆ ಆಗುತ್ತದೆ. ಇನ್ನು ಕೆಲವರಿಗೆ ಒಂದೇ ಸಮಯದಲ್ಲಿ ಹಲವಾರು ಕೆಲಸ ಮಾಡುವ ರೂಢಿ ಇರುತ್ತದೆ. ಇಂತಹ ಮಲ್ಟಿಟಾಸ್ಕಿಂಗ್​ನಿಂದ ನಾವು ಯಾವ ಕೆಲಸವನ್ನೂ ಸರಿಯಾಗಿ ಮಾಡಲಾರೆವು.

ಅಯ್ಯೋ, ಸಮಯವನ್ನು ವ್ಯರ್ಥವಾಗಿ ಕಳೆದುಬಿಟ್ಟೆ ಎನಿಸುತ್ತಿದೆಯೇ? ಹಾಗೇನೂ ಇಲ್ಲ. ನಿನ್ನೆ ಮುಗಿದಿದೆ. ನಾಳೆ ಇನ್ನೂ ಬಂದಿಲ್ಲ. ನಮ್ಮ ಕೈಲಿರುವುದು ಈ ದಿನ ಮಾತ್ರ. ಹಾಗಾಗಿ ಹೊಸದನ್ನು ಶುರು ಮಾಡಲಿದು ಅತ್ಯಂತ ಸೂಕ್ತ ಸಮಯ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...