20.4 C
Bengaluru
Sunday, January 19, 2020

ಸಂಬಂಧಗಳ ನಾಜೂಕು ಎಳೆಗಳಿಂದ ನೇಯ್ದ ನವಿರಾದ ಚಿತ್ರ…

Latest News

ಕೊಹ್ಲಿ ಟೀಕಿಸುವ ಭರದಲ್ಲಿ ಅನುಷ್ಕಾ ಎಳೆತಂದು ಕೆಟ್ಟದಾಗಿ ಟ್ವೀಟ್​ ಮಾಡಿದ ಲೇಖಕಿಗೆ ಟ್ವಿಟ್ಟಿಗರ ಟೀಕಾಸ್ತ್ರ!

ನವದೆಹಲಿ: ಹತ್ತು ವಿಕೆಟ್​ ಅಂತರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ನಾಯಕ ವಿರಾಟ್​ ಕೊಹ್ಲಿಯ...

ನಮ್ಮಲ್ಲಿದೆ ಚಾರಿತ್ರಿಕ ಪುರುಷರ ಪೂಜಿಸುವ ಪಂಥ

ಮೈಸೂರು: ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರೆಲ್ಲಾ ಚಾರಿತ್ರಿಕ ಪುರುಷರಾದರೂ ಅದಕ್ಕೆ ಪುರಾಣದ ಪರಿಕಲ್ಪನೆ ನೀಡಿ ಅವರನ್ನು ದೇವರನ್ನಾಗಿ ಪೂಜಿಸುವ ಭಕ್ತಪಂಥವೇ ನಮ್ಮಲ್ಲಿದೆ...

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೇಯರ್ ಪಟ್ಟ

ಮೈಸೂರು: ನಗರಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲಿದಿದ್ದು, ಮೇಯರ್ ಆಗಿ ತಸ್ನಿಂ, ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾದರು. ಪಾಲಿಕೆ...

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಬನ್ನಿಮಂಟಪ...

ಗಮನ ಸೆಳೆದ ಸೈಕ್ಲೋಥಾನ್, ಮ್ಯಾರಥಾನ್

ಮೈಸೂರು: ಯುವಜನರ ದೈಹಿಕ ದಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಡೆಯಿತು. ನೆಹರು ಯುವಕೇಂದ್ರ, ಯುವ...

ಜಪಾನೀ ನಿರ್ದೇಶಕ ಹಿರೋಜಾಕು ಕೊರೀದಾ ಜಾಗತಿಕ ಸಿನಿಮಾದ ಪ್ರಮುಖ ಹೆಸರುಗಳಲ್ಲೊಂದು. ಸ್ಟಾರ್​ಗಳನ್ನು ನಿರ್ವಿುಸುವ ನಿರ್ದೇಶಕನಲ್ಲ ಈತ. ಆದರೆ ದಿನನಿತ್ಯದ ಬದುಕಿನ ನಾಜೂಕಿನ ಎಳೆಗಳನ್ನು ಅಷ್ಟೇ ನಯವಾಗಿ ನೇಯುವ ಕಲೆಯಲ್ಲಿ ಪರಿಣಿತ. ಆ ನೇಯ್ಗೆಯಲ್ಲಿ ಮಾನವೀಯತೆಯ ಎಳೆಗಳೂ ಹಾಸುಹೊಕ್ಕಾಗೇ ಇರುತ್ತವೆ. ಮನಸಿನ ಕೋಣೆಯ ಮೂಲೆಮೂಲೆಯನ್ನು ಮುಟ್ಟುವ ಸಾಮರ್ಥ್ಯ ಕೊರೀದಾ ಅವರ ಸ್ಟಾರ್​ಗಿರಿ ಇಲ್ಲದ ಪಾತ್ರಗಳಿಗಿದೆ. ಹಾಗಾಗಿ ಪ್ರೇಕ್ಷಕರು ಪಾತ್ರಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಬಲ್ಲರು. ನೊಂದ ಮನಸುಗಳಿಗೆ ನವಿರಾದ ಸಾಂತ್ವನ ನೀಡಲು ಕೊರೀದಾ ತಮ್ಮ ಪ್ರತೀ ಚಿತ್ರದಲ್ಲೂ ಪ್ರಯತ್ನಿಸುತ್ತಾರೆ.

ಸಾಮಾನ್ಯವಾಗಿ ಜಪಾನಿ ಚಿತ್ರಗಳೆಂದರೆ ಸಾಮುರಾಯ್ಗಳು, ಸಂಪ್ರದಾಯಸ್ಥ ಗೀಷಾ ಧರಿಸಿದ ಹೆಂಗಳೆಯರು ಕಣ್ಣೆದುರು ಬರುತ್ತಾರೆ. ಆದರೆ ಕೊರೀದಾ ವಿಭಿನ್ನವಾಗಿ ಆಧುನಿಕ ಜಪಾನಿ ಕುಟುಂಬದ ಕಥೆಯನ್ನು ತನ್ನ ಸಿನಿಮಾಗಳಲ್ಲಿ ಹೇಳುತ್ತಾರೆ. ‘ನೋಬಡಿ ನೋಸ್’ ಚಿತ್ರದಲ್ಲಿ ತಾಯಿ ಹೊರಗಡೆ ಹೋದಾಗ ತನ್ನ ಚಿಕ್ಕ ಸಹೋದರರನ್ನು ನೋಡಿಕೊಳ್ಳುವ ಹನ್ನೆರಡರ ಹರಯದ ಬಾಲಕನ ಚಿತ್ರಣವಿದೆ. ‘ಸ್ಟಿಲ್ ವಾಕಿಂಗ್’ ಚಿತ್ರದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಇನ್ನೋರ್ವ ಬಾಲಕನನ್ನು ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಮಗನ ನೆನಪಿನಲ್ಲಿ ನೋಯುವ ಕುಟುಂಬದ ಚಿತ್ರಣವಿದೆ. ಅವರ್ ‘ಲಿಟ್ಲ್ ಸಿಸ್ಟರ್’ ಸಿನಿಮಾದಲ್ಲಿ ತಂದೆ-ತಾಯಿಗಳ ವಿಚ್ಛೇದನದ ನಂತರ ಅಜ್ಜಿಯ ಜತೆ ವಾಸಿಸುತ್ತಿರುವ ಮೂವರು ಸಹೋದರಿಯರು ತಂದೆಯ ಮರಣಾನಂತರ ತಮ್ಮ ಹದಿಮೂರು ವರ್ಷದ ಮಲತಂಗಿಯ ಜವಾಬ್ದಾರಿ ವಹಿಸಿಕೊಳ್ಳುವುದನ್ನು ಚಿತ್ರಿಸಲಾಗಿದೆ. ‘ಐ ವಿಶ್’ ಚಿತ್ರದಲ್ಲಿ ತಂದೆ-ತಾಯಿ ಬೇರೆಯಾದ ಬಳಿಕ ಇಬ್ಬರು ಮಕ್ಕಳು ಬೇರೆಬೇರೆಯಾಗಿ ಬೆಳೆಯಬೇಕಾದ ಪರಿಸ್ಥಿತಿಯನ್ನು ಹೇಳಲಾಗಿದೆ.

‘ಲೈಕ್ ಫಾದರ್ ಲೈಕ್ ಸನ್’ 2013ರ ಸಿನಿಮಾ. ಇದರಲ್ಲಿ ಮಗ ಹುಟ್ಟಿ ಆರುವರ್ಷದ ನಂತರ ತಾವು ಸಲಹಿದ ಮಗು ತಮ್ಮದಲ್ಲ, ಹುಟ್ಟಿದಾಗ ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಅದಲು ಬದಲಾದ ಬೇರೆಯದೇ ಮಗು ಎಂಬ ಸತ್ಯ ತಂದೆ-ತಾಯಿಗಳೆದುರು ಧುತ್ತೆಂದು ಎದುರಾದಾಗುತ್ತದೆ. ಆಗ ಅವರಿಗೆ ಏನೆನಿಸಬಹುದು? ಆ ಆಘಾತದ ತೀವ್ರತೆಯೇನು ಎಂಬುದನ್ನು ಸೊಗಸಾಗಿ ಹೇಳಿದ್ದಾರೆ ಕೊರೀದಾ. ಆ ಅರಿವಿನ ನಂತರದ ತಲ್ಲಣಗಳ ಅತೀಸೂಕ್ಷ್ಮ ಭಾವನೆಗಳನ್ನು ಬಹುಸಮರ್ಥವಾಗಿ ಹಿಡಿದಿಟ್ಟಿದ್ದಕ್ಕೆ ನಿರ್ದೇಶಕನನ್ನು ಅಭಿನಂದಿಸಲೇಬೇಕು.

ರಯೊಟಾ ಒಬ್ಬ ಯಶಸ್ವಿ ಆರ್ಕಿಟೆಕ್ಟ್. ಪತ್ನಿ ಮಿದೋರಿ ಮತ್ತು ಆರು ವರ್ಷದ ಮಗ ಕೀಟಾ ಇದು ಆತನ ಪುಟ್ಟ ಕುಟುಂಬ. ಮನೆ, ಹಣ ಎಲ್ಲ ಇರುವ ರಯೊಟಾ, ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಒಂದು ನಿಮಿಷವೂ ಬಿಡುವಿಲ್ಲದಂತೆ ದುಡಿಯುವವನು. ದುಡಿಮೆಯಲ್ಲಿ ಕಳೆದುಹೋಗುವ ಅವನಿಗೆ ಹೆಂಡತಿ-ಮಗುವನ್ನು ಗಮನಿಸಲೂ ಪುರುಸೊತ್ತಿಲ್ಲ.

ಮಗ ಕೀಟಾ ಹುಟ್ಟಿದ ಆಸ್ಪತ್ರೆಯಿಂದ ಇದ್ದಕ್ಕಿದ್ದಂತೆ ಬಂದ ಒಂದು ಫೋನ್ ಕರೆ ಇವರ ಬದುಕನ್ನೇ ಅಲ್ಲೋಲ ಕಲ್ಲೋಲಗೊಳಿಸಿಬಿಡುತ್ತದೆ. ಆರು ವರ್ಷದ ಹಿಂದೆ ಆಸ್ಪತ್ರೆಯಲ್ಲಿ ತಮ್ಮ ನಿಜವಾದ ಮಗು ಬೇರೆ ಮಗುವಿನೊಡನೆ ಅದಲು ಬದಲಾಗಿದೆ ಮತ್ತು ಈಗ ತಮ್ಮ ಜತೆ ಬೆಳೆಯುತ್ತಿರುವುದು ಬೇರೆಯವರ ಮಗು ಎಂಬ ಸುದ್ದಿಯನ್ನು ರಯೊಟಾ ಮತ್ತು ಮಿದೋರಿ ಅರಗಿಸಿಕೊಳ್ಳಬೇಕಾಗುತ್ತದೆ. ಅವರ ನಿಜವಾದ ಮಗು ಯಾರ ಜತೆ ಬೆಳೆಯುತ್ತಿದೆಯೋ ಅವರನ್ನು ಭೇಟಿ ಮಾಡಲು ಆಸ್ಪತ್ರೆ ವ್ಯವಸ್ಥೆ ಮಾಡಿರುತ್ತದೆ. ಇವರ ನಿಜವಾದ ಮಗು ಮೆಕ್ಯಾನಿಕ್ ಆಗಿರುವ ಯುಕಾರಿಯ ಮನೆಯಲ್ಲಿ ಬೆಳೆಯುತ್ತಿರುತ್ತಾನೆ. ಅವನ ಹೆಸರು ರುಸೇಯಿ. ಅವನಿಗೆ ಒಬ್ಬಳು ತಂಗಿ ಹಾಗೂ ಒಬ್ಬ ತಮ್ಮ ಕೂಡ ಇದ್ದಾರೆ. ಯುಕಾರಿಯ ಹೆಂಡತಿ ಯುದಾಯಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿರುತ್ತಾಳೆ. ಕೆಳಮಧ್ಯಮ ವರ್ಗದ ಈ ದಂಪತಿಯ ಮೊದಲ ಆದ್ಯತೆ ಮಕ್ಕಳಿಗೆ. ಮಕ್ಕಳ ಬಾಲ್ಯವನ್ನು ಶ್ರೀಮಂತಗೊಳಿಸಲು ಅವರ ಪ್ರಯತ್ನ ನಿರಂತರ. ಸಮೃದ್ಧ ನೆನಪುಗಳಿಂದ ಮಕ್ಕಳ ದಿನಗಳನ್ನು ತುಂಬಿಸಲು ಈ ಪತಿ, ಪತ್ನಿ ತಮ್ಮ ಮಿತಿಯಲ್ಲೇ ಪಡುವ ಪ್ರಯತ್ನಗಳು ಹಣದ ಹಿಂದೆ ಬಿದ್ದಿರುವ ಆಧುನಿಕ ತಂದೆ-ತಾಯಿಗಳಿಗೆ ಪಾಠದಂತಿವೆ.

ಎರಡು ಗಂಟೆಯ ಈ ಚಿತ್ರ ನೋಡಿದರೆ ಯಾವ ತಂದೆ-ತಾಯಂದಿರಿಗೂ ಕಣ್ಣು ಒದ್ದೆಯಾಗದಿರದು. ತಮ್ಮ ನಿಜವಾದ ಮಗ ಸಿಗುತ್ತಾನೆನ್ನುವುದಕ್ಕಿಂತಲೂ ಮಗನೆಂದೇ ಬೆಳೆಸಿದ ಮಗುವನ್ನು ಕಳೆದುಕೊಳ್ಳುವ ವಿಚಿತ್ರ ದ್ವಂದ್ವದಲ್ಲಿ ಎರಡೂ ಕುಟುಂಬಗಳೂ ಸಿಕ್ಕಿ ಹಾಕಿಕೊಳ್ಳುತ್ತವೆ. ಆರು ವರ್ಷ ಸಾಕಿ ಬೆಳೆಸಿದ ಮಗುವನ್ನೂ ಬಿಡಲಾರರು, ತಮ್ಮ ಮಗುವೂ ಬೇಕು! ಆದರೆ ಒಂದೇ ಮಗುವನ್ನು ಆಯ್ಕೆ ಮಾಡಿಕೊಳ್ಳಬೇಕು! ರಯೊಟಾನಿಗೆ ತಾವು ಹಣವಂತರು, ಯುಕಾರಿ ಮತ್ತು ರುದಾಯಿ ಕೆಳಮಧ್ಯಮ ವರ್ಗದವರು. ಅವರಿಗೆ ಹಣ ಕೊಟ್ಟು ತಮ್ಮ ಮಗುವನ್ನು ತಾವು ತೆಗೆದುಕೊಂಡು ಬಿಡೋಣ ಎಂಬ ಯೋಚನೆ. ಇಬ್ಬರೂ ಮಕ್ಕಳನ್ನು ತಾವೇ ಸಾಕುತ್ತೇವೆ ಎಂಬ ರಯೊಟಾನ ಅಹಂಕಾರದ ಮಾತುಗಳು ಯುಕಾರಿಯನ್ನು ಸಿಟ್ಟಿಗೆಬ್ಬಿಸುತ್ತವೆ. ಹಣವಿರುವ ಮಾತ್ರಕ್ಕೆ ಎಲ್ಲವನ್ನೂ ಕೊಂಡುಕೊಂಡುಬಿಡಬಹುದು ಎಂಬ ಹಣವಂತಿಕೆಯ ಅಹಂಕಾರದ ಬಲೂನಿಗೆ ಯುಕಾರಿ ಸೂಜಿ ಚುಚ್ಚುತ್ತಾನೆ.

ಎರಡೂ ಕುಟುಂಬಗಳು ಭೇಟಿಯಾಗಿ ಮುಂದೇನು ಎಂದು ಯೋಚಿಸುತ್ತವೆ. ತಮ್ಮ ತಮ್ಮ ಸ್ವಂತ ಮಗುವನ್ನೇ ಪಡೆದುಕೊಳ್ಳಲು ನಿರ್ಧರಿಸುತ್ತಾರೆ. ಮಕ್ಕಳಿಬ್ಬರೂ ತಮ್ಮ ನಿಜವಾದ ಮನೆಗೆ ಬರುತ್ತಾರೆ.

ಆರು ವರ್ಷಗಳ ಕಾಲ ಕೆಳವರ್ಗದ ಕುಟುಂಬದ ಜತೆ ಬೆಳೆದ ಮಗನನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಆತನನ್ನು ತನ್ನ ಶಿಸ್ತಿಗೆ, ಅಂತಸ್ತಿಗೆ ತಕ್ಕಂತೆ ಪಳಗಿಸುವ ರಯೊಟಾನ ಚಿತ್ರಣವಿದೆ. ಮೊದಲಬಾರಿ ರುಸೇಯಿ ತಿನ್ನುವುದನ್ನು ನೋಡಿ, ‘ಅರೇ ನನ್ನ ರಕ್ತ ಹಂಚಿಕೊಂಡು ಹುಟ್ಟಿದ ಇವನಿಗೆ ಸರಿಯಾಗಿ ಚಾಪ್ ಸ್ಟಿಕ್ ಹಿಡಿದು ತಿನ್ನಲು ಬರುವುದಿಲ್ಲವಲ್ಲ’ ಎಂದು ಕಸಿವಿಸಿಗೊಳ್ಳುತ್ತಾನೆ! ಮಗ ಎಲ್ಲದರಲ್ಲೂ ಅತ್ಯುತ್ತಮವಾಗಿರಬೇಕೆಂದು ಬಯಸುವ ರಯೊಟಾ ಶಿಸ್ತಿನ ಸಿಪಾಯಿ. ಆದರೆ ಈಗ ಇಲ್ಲಿರುವ ಹುಡುಗ ಬೆಳೆದದ್ದು ಅಪ್ಪನೇ ದೊಡ್ಡ ಮಗುವಿನಂತೆ ವರ್ತಿಸುವ ಕುಟುಂಬದಲ್ಲಿ. ರಯೊಟಾ ರುಸೇಯಿಯನ್ನು ಶಿಸ್ತಿಗೊಳಪಡಿಸುತ್ತ ಹೋದಂತೆಲ್ಲ ರುಸೇಯಿ ಪ್ರಶ್ನಿಸುತ್ತ ಹೋಗುತ್ತಾನೆ. ರಯೊಟಾನ ಪ್ರಶ್ನೆಗಳಿಗೆ ರಿಯೂಸಿಯ ಏಕೆ ಏಕೆ ಎನ್ನುವ ಪ್ರಶ್ನೆಯೇ ಉತ್ತರವಾಗುತ್ತ ಹೋಗುತ್ತದೆ. ನಿಧಾನವಾಗಿ ತನ್ನ ಚಿಪ್ಪಿನಿಂದ ಹೊರಬರಲಾರಂಭಿಸುತ್ತಾನೆ ರಯೊಟಾ.

ಚಿತ್ರ ಮುಂದುವರಿದಂತೆ ರಯೊಟಾನ ಆತ್ಮಾವಲೋಕನವೂ ಜತೆಜತೆಗೇ ಸಾಗುತ್ತದೆ. ಯುಕಾರಿ ಮಕ್ಕಳನ್ನು ಬೆಳೆಸುವ ವಿಧಾನವನ್ನು ನೋಡಿದಾಗ ತಾನು ಗಂಡನಾಗಿ ಮತ್ತು ಪತಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲೇ ಇಲ್ಲ, ತನ್ನ ತಂದೆಯ, ಅಜ್ಜಂದಿರ ಗಂಭೀರ ತಂದೆತನದ ರೀತಿಯನ್ನೇ ತಾನು ಮುಂದುವರಿಸಿಕೊಂಡು ಬಂದಿದ್ದೇನೆ ಎಂಬ ಅರಿವು ರಯೊಟಾನಿಗೆ ಆಗುತ್ತದೆ.

ಒಮ್ಮೆ ಕ್ಯಾಮರಾದ ಫೋಟೋಗಳನ್ನು ನೋಡುವಾಗ ಕೀಟಾ ತೆಗೆದ ತನ್ನ ಚಿತ್ರಗಳನ್ನು ನೋಡಿ ಜೋರಾಗಿ ಅತ್ತುಬಿಡುತ್ತಾನೆ ರಯೊಟಾ. ತಾವು ಹೆತ್ತ ಮಗುವಿಗಿಂತ ಆರು ವರ್ಷ ಸಾಕಿದ ಮಗುವನ್ನು ಬಿಟ್ಟಿರಲು ಎರಡು ಕುಟುಂಬದವರಿಗೂ ಸಾಧ್ಯವಾಗುವುದಿಲ್ಲ. ಕೊನೆಗೂ ಮಕ್ಕಳಿಬ್ಬರೂ ತಾವು ಬೆಳೆದ ಮನೆಗಳಿಗೇ ವಾಪಾಸಾಗುತ್ತಾರೆ.

ಕೊರೀದಾ ಚಿತ್ರಗಳಲ್ಲಿ ಸಂಭಾಷಣೆಯನ್ನೇ ಹೆಚ್ಚಾಗಿ ಅವಲಂಬಿಸುವುದಿಲ್ಲ. ದೃಶ್ಯಗಳು ಸಂಭಾಷಣೆಗಿಂತ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತವೆ. ನಾಲ್ವರು ಹಿರಿಯರ, ಇಬ್ಬರು ಮಕ್ಕಳ ಮಾನಸಿಕ ಸ್ಥಿತಿಯನ್ನು ಮಾತುರಹಿತ ದೃಶ್ಯಗಳ ಮೂಲಕವೂ ಅದ್ಭುತವಾಗಿ ಕಟ್ಟಿಕೊಟ್ಟಿರುವ ಸಿನಿಮಾ ಇದು.

ಕೊರೀದಾ ತನ್ನ ಪಾತ್ರಗಳೆಡೆ ವಹಿಸುವ ಕಾಳಜಿ ಅಪರೂಪದ್ದು. ಪಾಲಕರು ಸಾಮಾನ್ಯವಾಗಿ ನಿರ್ಲಕ್ಷಿಸುವಂತಹ ಸಣ್ಣ ಸಣ್ಣ ಆದರೆ ಮುಖ್ಯವಾದ ಸಂಗತಿಗಳನ್ನು ಚಿತ್ರದುದ್ದಕ್ಕೂ ಹೇಳುತ್ತಾರೆ ಕೊರೀದಾ. ಮನೆಗಾಗಿ ದುಡಿದುಡಿದು ಹಣ್ಣಾಗುವ ರಯೊಟಾಗೆ ತನ್ನ ಸಂಪಾದನೆಯನ್ನು ಅನುಭವಿಸುವ ಅದೃಷ್ಟವಿಲ್ಲ. ಆತನ ಮಿಲಿಟರಿ ಶಿಸ್ತಿನಿಂದ ಮನೆಯಲ್ಲಿ ಮೌನ ಆಳುತ್ತಿದೆ. ಆದರೆ ಯುಕಾರಿ ಕಡಿಮೆ ಸಂಪಾದನೆಯಿರುವ, ಚಲ್ತಾ ಹೈ ಮನೋಭಾವವಿರುವ ವ್ಯಕ್ತಿ. ಆತ ಮನೆಯೊಳಗೆ ಕಾಲಿಟ್ಟರೆ ಸಾಕು ಮಕ್ಕಳು ಸಂಭ್ರಮದಿಂದ ನಳನಳಿಸುತ್ತಾರೆ! ಈ ವೈರುಧ್ಯಗಳನ್ನು ನಾಜೂಕಾಗಿ ಚಿತ್ರಿಸಲಾಗಿದೆ. ಪಾತ್ರ ಬಡತನದ್ದೇ ಆಗಲಿ, ಶ್ರೀಮಂತಿಕೆಯದ್ದೇ ಆಗಲಿ, ಅದರ ಶಕ್ತಿ, ದೌರ್ಬಲ್ಯ ಎಲ್ಲವನ್ನೂ ಸಹಾನುಭೂತಿಯೊಂದಿಗೆ ತೋರಿಸುತ್ತಾನೆ ಕೊರೀದಾ. ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕುವೆಂಪು ಮಂಥರೆಯೆಡೆಗೂ ಕರುಣಾದೃಷ್ಟಿ ಬೀರಿರುವ ಹಾಗೆ ಇಲ್ಲಿ ಕೊರೀದಾ ಮಗುವನ್ನು ಬದಲಾಯಿಸಿ ಖಳನಾಯಕಿಯಾಗಿರುವ ನರ್ಸ್​ಗೂ

ತನ್ನ ನೋವು ಹೇಳಿಕೊಳ್ಳಲು ಒಂದು ಅವಕಾಶ ಕೊಟ್ಟಿದ್ದಾರೆ. ಹಿರಿಯರ ಗೊಂದಲದಲ್ಲಿ ಮಕ್ಕಳ ತೊಳಲಾಟವನ್ನು ಚಿತ್ರಿಸುವಲ್ಲೂ ಕೊರೀದಾಗೆ ಪೂರ್ತಿ ಅಂಕ ಸಿಗುತ್ತದೆ. ಆಧುನಿಕ ಕುಟುಂಬದೊಳಗಿನ ಸಂಬಂಧದೊಳಗಿನ ತಲ್ಲಣಗಳನ್ನು ಯಶಸ್ವಿಯಾಗಿ ಹಿಡಿದಿಟ್ಟಿರುವ ಕೊರೀದಾ ಅವರ ‘ಲೈಕ್ ಫಾದರ್ ಲೈಕ್ ಸನ್’ ಸಿನಿಪ್ರಿಯರು ನೋಡಲೇಬೇಕಾದ ಸಿನಿಮಾ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...