20.4 C
Bengaluru
Sunday, January 19, 2020

ಆತ್ಮಸ್ಥೈರ್ಯದ ಮುಂದೆ ಸಾಲು ಸಾಲು ಸವಾಲುಗಳು ಸೋತವು

Latest News

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

ಜಗತ್ತಿನಲ್ಲಿ ಸಾಧಕರಿಗೆ ಕೊರತೆಯಿಲ್ಲ. ಯಾವುದೇ ಕ್ಷೇತ್ರವನ್ನು ನೋಡಿದರೂ ಅಪರೂಪದ ಸಾಧನೆ ಮಾಡಿದ ಸಾಧಕರು ಇದ್ದೇ ಇರುತ್ತಾರೆ. ಅವರಲ್ಲಿ ಕೆಲವರ ಸಾಧನೆಯಂತೂ ‘ಸತ್ತಂತಿಹರನು ಬಡಿದೆಚ್ಚರಿಸುವಂತೆ’, ಸೋಮಾರಿಗಳಲ್ಲೂ ಸ್ಪೂರ್ತಿಯ ಸೆಲೆ ಉಕ್ಕಿಸುವಂತೆ ವಿಶಿಷ್ಟವಾಗಿರುತ್ತದೆ. ಆದರೆ ಯಾವುದೇ ದೇಶದ ಯಾವುದೇ ಸಾಧಕರ ಬದುಕನ್ನು ಗಮನಿಸಿ- ಅವರೆಲ್ಲರಲ್ಲೂ ಇರುವ ಒಂದೇ ಒಂದು ಸಾಮ್ಯವೆಂದರೆ, ಎಂಥ ಕಷ್ಟಗಳಿಗೂ ಅವರು ತಲೆಬಾಗದೇ ಇರುವುದು. ಅವರ್ಯಾರಿಗೂ ಯಶಸ್ಸು ಒಮ್ಮೆಲೇ ಒಲಿಯಲಿಲ್ಲ. ಹಾಗಂತ ಇವರು ಬಿಡಲೂ ಇಲ್ಲ. ಬದುಕು ತೊಡರುಗಾಲು ಕೊಟ್ಟು ಕೆಡವಿದರೂ ಸಾವರಿಸಿಕೊಂಡು ಎದ್ದು ಮುನ್ನಡೆದರು. ಪದೇಪದೆ ಸೋತರೂ ಗೆಲುವಿನ ಮಂತ್ರ ಜಪಿಸದೇ ಇರಲಿಲ್ಲ. ‘ಸೋಲೇ ಗೆಲುವಿನ ಸೋಪಾನ’ ಎಂಬ ಮಾತು ಇಂತಹವರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಯಿತು. ‘ಮರಳಿ ಯತ್ನವ ಮಾಡು’ ಎಂಬ ಮಾತು ಜೀವನದ ಗುರಿಯಾಯಿತು. ಅಂಥದ್ದೇ ಸಾಧಕರ ಸಾಲಿಗೆ ಸೇರುವಾಕೆ ಅಡೆಲ್ ಲಾರೀ ಬ್ಲೂ್ಯ ಆಡ್ಕಿನ್ಸ್.

ಅಡೆಲ್! ಮುದ್ದಿನ ಹೆಸರು ಆಡೀ! ಆಕೆ ಬರೆವ, ಹಾಡುವ ಹಾಡುಗಳು ಜನರನ್ನು ಸಮ್ಮೋಹಗೊಳಿಸುತ್ತವೆ! ಮನಸ್ಸನ್ನು ಮೆಲ್ಲನೆ ರ್ಸ³ಸುತ್ತವೆ, ಭಾವುಕರನ್ನಾಗಿಸುತ್ತವೆ. ಜಗತ್ತಿನಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಸಂಗೀತಗಾರ್ತಿ ಅಡೆಲ್​ಳ ಬದುಕಿನ ಕತೆ ಎಲ್ಲರಂತೆ ಏಳುಬೀಳಿನದ್ದು, ಅತಿಸಾಮಾನ್ಯದ್ದು. ಆದರೆ ಅದನ್ನೆಲ್ಲ ಮೀರಿ, ಕಷ್ಟಗಳ ಸರಮಾಲೆಯಲ್ಲಿ ಎಲ್ಲೋ ಕಳೆದುಹೋಗಬಹುದಾಗಿದ್ದ ಹುಡುಗಿಯೊಬ್ಬಳು, ಸಮಸ್ಯೆಗಳಿಗೇ ಸೆಡ್ಡುಹೊಡೆದು ಜಗತ್ತಿನ ಮುಂಚೂಣಿಯ ಗಾಯಕಿ, ಸೆಲೆಬ್ರಿಟಿಯಾಗಿರುವುದು ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದಲೇ ವಿನಾ ಬೇರಾವುದರಿಂದಲೂ ಅಲ್ಲ.

1988ರ ಮೇ 5ರಂದು ಇಂಗ್ಲೆಂಡ್​ನಲ್ಲಿ ಜನನ. ಅವಳು ಎರಡು ವರ್ಷದ ಮಗುವಿರುವಾಗಲೇ ತಂದೆ ಮನೆಬಿಟ್ಟು ಹೋಗಿಬಿಟ್ಟ. ತಾಯಿಗೂ ಆಗ ಇಪ್ಪತ್ತೇ ವರ್ಷ. ಸರ್ಕಾರದಿಂದ ಸಹಾಯಧನ ಪಡೆಯುವ ಮನೆಗಳಲ್ಲಿ ಅವರು ವಾಸ್ತವ್ಯ ಹೂಡಬೇಕಾಯಿತು. ಹತ್ತಕ್ಕೂ ಹೆಚ್ಚು ಶಾಲೆಗಳನ್ನು ಬದಲಾಯಿಸಬೇಕಾಯಿತು ಅಡೆಲ್. ಸಮಸ್ಯೆಗಳಿದ್ದರೂ ಮಗಳನ್ನು ಬೇರೆ ಬೇರೆ ಆಸಕ್ತಿಗಳನ್ನಿಟ್ಟುಕೊಳ್ಳಲು ತಾಯಿ ಪೋ›ತ್ಸಾಹಿಸಿದ್ದು ಅಡೆಲ್​ಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿತು. ನಾಲ್ಕರ ವಯಸ್ಸಿನಿಂದಲೇ, ಹಾಡುವುದು ಅಡೆಲ್​ಳ ನೆಚ್ಚಿನ ಹವ್ಯಾಸವಾಗಿತ್ತು. ಬರೀ ಹವ್ಯಾಸವಲ್ಲ, ಹಾಡುವುದು ಅವಳ ಜೀವನವಿಧಾನವೇ ಆಗಿತ್ತು. ಸ್ಪೈಸ್ ಗರ್ಲ್ಸ್, ಎಡ್ಡಾ ಜೇಮ್್ಸ ಮುಂತಾದ ಖ್ಯಾತ ಹಾಡುಗಾರ್ತಿಯರನ್ನು ನೋಡುತ್ತ ನೋಡುತ್ತ ಆಕೆ ಬೆಳೆದಳು. ಅವರಂತಾಗಬೇಕೆಂದು ವರ್ಷಗಟ್ಟಲೆ ಸತತ ಪ್ರಯತ್ನಪಟ್ಟಳು. 14ನೇ ವಯಸ್ಸಿನಲ್ಲಿ ಎಲ್ಲಾ ಫಿಟ್ಝೆರಾಲ್ಡ್ ಹಾಗೂ ಎಟ್ಟಾ ಜೇಮ್ಸ್​ರ ಆಲ್ಬಂ ನೋಡಿದಮೇಲೆ ಅವರು ಅವಳ ಫೇವರಿಟ್ ಹಾಡುಗಾರ್ತಿಯರಾದರು. ಖ್ಯಾತ ಹಾಡುಗಾರ್ತಿ ಪಿಂಕ್ ನೀಡಿದ ಪ್ರದರ್ಶನವನ್ನು ನೋಡಿ ತಾನು ಗಾಯಕಿಯೇ ಆಗಬೇಕೆಂದು ಆಕೆ ಶಪಥಮಾಡಿದಳು. ಅಭಿನಯ ಕಲೆಯ ಬ್ರಿಟ್ ಸ್ಕೂಲ್​ನಿಂದ ಪದವಿ ಪಡೆದ ಅಡೆಲ್ ಹಾಡುಗಳನ್ನು ಬರೆಯುತ್ತಿದ್ದಳು ಮತ್ತು ಆಗಾಗ್ಗೆ ಅವನ್ನು ‘ಮೈ ಸ್ಪೇಸ್’ನಲ್ಲಿ ಅಪ್​ಲೋಡ್ ಮಾಡುತ್ತಿದ್ದಳು. 18 ವರ್ಷಕ್ಕೆ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡಳು.

2008ರಲ್ಲಿ ‘ಅಡೆಲ್ 19’ ಎನ್ನುವ ಆಕೆಯ ಮೊದಲ ಆಲ್ಬಂ ಹೊರಬಂತು. ಹತ್ತು ಮಿಲಿಯನ್ ಪ್ರತಿಗಳು ಖರ್ಚಾದವು! ಅಷ್ಟು ಹೊತ್ತಿಗೆ ಅಡೆಲ್ ತನಗಿಂತ ಹತ್ತು ವರ್ಷ ಹಿರಿಯ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ಒಂದೂವರೆ ವರ್ಷದ ನಂತರ ಆ ಸಂಬಂಧ ಮುರಿದುಬಿತ್ತು. ಆಮೇಲೆ ಬಂದ ‘ಅಡೆಲ್ 21’ ಎಂಬ ಆಲ್ಬಂ ಕೂಡ ಹಿಟ್ ಆಯಿತು. ನೊಂದ ಅಡೆಲ್ ಬರೆದ ಈ ಆಲ್ಬಂನ ‘ಸಮ್ ಒನ್ ಲೈಕ್ ಯು’ ಹಾಡು ಹಿಂದಿನ ದಾಖಲೆಗಳನ್ನೆಲ್ಲ ಮುರಿಯಿತು.

2011ರಲ್ಲಿ ಆಕೆ ಹಾಡುವುದನ್ನು ನಿಲ್ಲಿಸಬೇಕಾಯಿತು. ಏಕೆಂದರೆ ಸಿಗರೇಟು ಸೇದಿಸೇದಿ ಆಕೆಯ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆಗೊಳಗಾಯಿತು. ಸೈಮನ್ ಕೊನೆಕಿಯೊಂದಿಗೆ ಪ್ರೀತಿಯಲ್ಲಿದ್ದ ಅಡೆಲ್ 2012ರಲ್ಲಿ ಮಗುವೊಂದರ ತಾಯಿಯೂ ಆದಳು. ಅದೇ ವರ್ಷ ಡಿಪ್ರೆಶನ್​ಗೊಳಗಾದಳು. ಆದರೆ ಅಡೆಲ್ ಹುಟ್ಟಾ ಹೋರಾಟಗಾರ್ತಿ. ಈ ಎಲ್ಲ ಸಮಸ್ಯೆಗಳಿಂದ ತನ್ನನ್ನು ಹೊರತಂದುಕೊಂಡಳು. ಮಗನನ್ನು ಗಮನದಲ್ಲಿಟ್ಟುಕೊಂಡು ಬದುಕಿನ ತೀರ್ವನಗಳನ್ನು ತೆಗೆದುಕೊಳ್ಳಲಾರಂಭಿಸಿದಳು. ಸಿಗರೇಟು ಸೇವನೆ ತ್ಯಜಿಸಿದಳು. ಡಿಪ್ರೆಶನ್​ನಿಂದ ಹೊರಬಂದಳು. ತನ್ನೆಲ್ಲ ಬದಲಾವಣೆಗಳಿಗೆ ಮಗನೇ ಕಾರಣ ಎಂದ ಆಕೆ ಸಂಗೀತವನ್ನು ಆತ್ಮವಾಗಿಸಿಕೊಂಡಳು. 2012ರಲ್ಲಿಯೇ ಹಾಡಲು ವಾಪಾಸಾದ ಅಡೆಲ್​ಳ ಮೂರು ಹಾಡುಗಳು ‘ಟಾಪ್ ಟೆನ್’ ಪಟ್ಟಿಯಲ್ಲಿದ್ದವು. ಅಂತಹ ಮೊದಲ ಹಾಡುಗಾರ್ತಿಯಾದಳಾಕೆ. ‘ಗ್ರಾಮಿ ಪುರಸ್ಕಾರ’ ಕಾರ್ಯಕ್ರಮದಲ್ಲಿ ತನ್ನ ಮೊದಲ ಪ್ರದರ್ಶನವಿತ್ತಳು. ಆ ರಾತ್ರಿ ಆಕೆ ಆರು ಬಹುಮಾನ ಗೆದ್ದಳು! ಹಸಿರುಕಣ್ಣಿನ ಹುಡುಗಿಯ ವಿಜಯಗಾಥೆ ಆರಂಭಗೊಂಡಿತ್ತು. 2013ರಲ್ಲಿ ಜೇಮ್್ಸ ಬಾಂಡ್ ಸಿನಿಮಾಗೆ ಬರೆದು ಸಂಗೀತ ಸಂಯೋಜಿಸಿ ಹಾಡಿದ ‘ಸ್ಕೈಫಾಲ್’ ಹಾಡಿಗಾಗಿ ಅಕಾಡೆಮಿ ಅವಾರ್ಡ್ ಅಂದರೆ ಆಸ್ಕರ್ ಕೂಡ ಗೆದ್ದಳು. 2016ರಲ್ಲಿ ಪ್ರಿಯಕರ ಸೈಮನ್ ಕೊನೆಕಿಯೊಂದಿಗೆ ವಿವಾಹವೂ ಆಯಿತು.

ಅಡೆಲ್​ಗೆ ಸ್ಟೇಜ್​ಫಿಯರ್ ಇತ್ತು, ಜನರೆದುರು ಹಾಡಲು ಆಕೆಗೆ ಭಯವಾಗುತ್ತಿತ್ತು! ಪ್ರದರ್ಶನ ನೀಡಬೇಕೆಂದಾಗ ಆತಂಕದಿಂದ ವಾಂತಿಯಾಗುವುದು, ತಲೆಸುತ್ತುವುದು ಆಗುತ್ತಿತ್ತು. ತೂಕ ಕಡಿಮೆ ಮಾಡಿಕೊಳ್ಳುವಂತೆ ಮಾಧ್ಯಮಗಳು ಸತತ ಒತ್ತಡ ಹಾಕಿದರೂ ‘ಝೀರೋ ಫಿಗರ್’ನ ಸ್ಟೀರಿಯೋಟೈಪ್​ಗೆ ಆಕೆ ತಲೆಬಾಗಲಿಲ್ಲ. ಹೊರಗಿನ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಪ್ರಮುಖವೆಂದು ಅವಳು ನಂಬಿದ್ದಳು. ಸಂಗೀತವಿರುವುದು ಕಿವಿಗಳಿಗೇ ಹೊರತು ಕಣ್ಣುಗಳಿಗಲ್ಲ ಎನ್ನುತ್ತಿದ್ದಳಾಕೆ. ತಾನು ನೋಡುವುದಕ್ಕೆ ಹೇಗೆ ಕಾಣುತ್ತಿದ್ದೇನೆಂಬುದಕ್ಕೆ ಗಮನಕೊಡುವ ಬದಲು ತನ್ನ ಹಾಡು ಹೇಗೆ ಕೇಳಲ್ಪಡುತ್ತದೆ ಎಂಬುದರ ಕಡೆಗೆ ಆಕೆ ಹೆಚ್ಚಿನ ಗಮನಕೊಟ್ಟಳು. ತಾನು ಹಾಡುವುದು ಕೇಳಲು, ನೋಡಲಲ್ಲ ಎನ್ನುತ್ತಾಳಾಕೆ. ಈಗಿನ್ನೂ ಮೂವತ್ತು ವರ್ಷದ ಅಡೆಲ್ ಆಗಲೇ 12 ಗ್ರಾಮಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಆಕೆಯ ಹಾಡಿನ ನೂರು ಮಿಲಿಯನ್ ರೆಕಾರ್ಡ್​ಗಳು ಮಾರಾಟವಾಗಿವೆ. ದಕ್ಷಿಣ ಕೊರಿಯಾದ ಪಿಎಸ್​ವೈ ಹಾಡಿದ ಗಂಗ್ನಂ ಸ್ಟೈಲ್ ಹಾಡನ್ನು 159 ದಿನಗಳಲ್ಲಿ ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್ ಅಂದರೆ ನೂರು ಕೋಟಿ ಜನರು ವೀಕ್ಷಿಸಿದ್ದರು. ಆದರೆ ಅಡೆಲ್​ಳ ‘ಹೆಲ್ಲೋ’ ಹಾಡನ್ನು ಕೇವಲ ಎಂಬತ್ತೆಂಟೇ ದಿನಗಳಲ್ಲಿ ನೂರು ಕೋಟಿ ಜನರು ವೀಕ್ಷಿಸಿದ್ದರು. ಇದುವರೆಗೆ ಆ ಹಾಡನ್ನು 248 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ!! ಹೀಗೆ ತನ್ನ ಆಲ್ಬಮ್ಳು ಯೂಟ್ಯೂಬ್​ನಲ್ಲಿ, ಮಾರಾಟದಲ್ಲಿ, ಜನಪ್ರಿಯತೆಯಲ್ಲಿ ಸತತವಾಗಿ ಮುಂಚೂಣಿಯಲ್ಲಿದ್ದುದಕ್ಕೆ ಮೂರು ಸಲ ಗಿನ್ನಿಸ್ ಬುಕ್​ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾಳೆ. ಪ್ರತಿಷ್ಠಿತ ಟೈಮ್್ಸ ಮ್ಯಾಗಝಿನ್​ನ ಬಹುಪ್ರಭಾವಿ ವ್ಯಕ್ತಿಯಾಗಿ ಎರಡು ಸಲ ಆಯ್ಕೆಯಾಗಿದ್ದಾಳೆ. ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಾಗಿ ಆಕೆಗೆ ಇಂಗ್ಲೆಂಡ್ ಸರ್ಕಾರದಿಂದ ‘ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್’ ಬಿರುದೂ ಸಿಕ್ಕಿದೆ. ಅಡೆಲ್ ಮಹಿಳೆಯರ ಹಕ್ಕು ಮತ್ತು ಸಮಾನತೆಗಾಗಿ ಧ್ವನಿ ಎತ್ತುವಾಕೆಯೂ ಹೌದು. ಹಾಂ, ವಾರಕ್ಕೆ ಹದಿಮೂರು ಮಿಲಿಯನ್ ಡಾಲರ್​ಗಿಂತಲೂ ಹೆಚ್ಚು (ಅಂದರೆ ಸುಮಾರು ಒಂಬತ್ತು ಕೋಟಿ ರೂಪಾಯಿಗಿಂತಲೂ ಜಾಸ್ತಿ!!) ಆದಾಯವಿರುವ ಅಡೆಲ್ ಬ್ರಿಟನ್ನಿನ ಅತಿಶ್ರೀಮಂತ ಹಾಡುಗಾರ್ತಿ!

‘ನಾನು ಪ್ರತಿಯೊಬ್ಬರಿಗೂ ಅವರನ್ನೇ ನೆನಪಿಸುತ್ತೇನೆ, ಪ್ರತಿಯೊಬ್ಬರು ನನ್ನ ಥರ ಇದ್ದಾರೆಂದಲ್ಲ, ನಾನು ಪರಿಪೂರ್ಣಳಲ್ಲದಿರುವುದರಿಂದ ಬೇರೆಯವರ ಜತೆ ಹೋಲಿಸಿಕೊಳ್ಳುತ್ತೇನೆ. ಏಕೆಂದರೆ ಬಹಳ ಮಂದಿ ತಾರೆಗಳನ್ನು ಪರಿಪೂರ್ಣರು, ಸಾಮಾನ್ಯರಿಗೆ ತಲುಪಲಾಗದವರು ಎಂಬಂತೆ ಚಿತ್ರಿಸಲಾಗುತ್ತದೆ. ಅದನ್ನು ನಾನು ಇಷ್ಟಪಡುವುದಿಲ್ಲ’ ಎನ್ನುತ್ತಾಳೆ ಅಡೆಲ್.

ಕೆಟ್ಟ ಹವ್ಯಾಸಗಳು, ತಪ್ಪು ಅಭ್ಯಾಸಗಳು ಕಾಲಲ್ಲಿನ ಸಂಕೋಲೆಗಳಂತೆ. ಅವುಗಳನ್ನು ಕಳಚಿಕೊಳ್ಳದ ಹೊರತು ಮುಂದಡಿಯಿಡುವುದು ಅಸಾಧ್ಯ ಎಂಬುದು ಅಡೆಲ್​ಳ ಬದುಕು ನಮಗೆಲ್ಲ ಕಲಿಸುವ ಪಾಠ. ಬದುಕಿನ ಹಾದಿಯಲ್ಲಿ ನಡೆಯುವಾಗ ಎಡವೋದು ಸಾಮಾನ್ಯ. ಆದರೆ ಅದನ್ನು ಮೀರಿ ತಾವು ಕಂಡ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. ಸೋಲೋ ಗೆಲುವೋ ತಮ್ಮ ಸಾಮರ್ಥ್ಯದ ಶೇ. ನೂರು ಪ್ರಯತ್ನ ಹಾಕುವ ಸಮರ್ಪಣಾ ಮನೋಭಾವ ಇರುವವರು ಮಾತ್ರ ಅಂತಿಮವಾಗಿ ಗೆಲುವಿನ ನಗು ಬೀರುವುದು ಸಾಧ್ಯ. ಅಡೆಲ್​ಳ ಬದುಕು ಇದಕ್ಕೊಂದು ತಾಜಾ ಉದಾಹರಣೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...