More

    ಬಿ, ಸಿ ಗ್ರೇಡ್​ ಕಾಲೇಜು ಮತ್ತು ವಿವಿಗಳು ದೇಶದ ಯುವಶಕ್ತಿಯನ್ನು ಹಾಳು ಮಾಡುತ್ತಿವೆ: ರಾಜ್ಯಪಾಲ ವಜುಭಾಯಿ​ ವಾಲಾ

    ಬೆಂಗಳೂರು: ನ್ಯಾಕ್ ಶ್ರೇಯಾಂಕದಲ್ಲಿ ಬಿ ಮತ್ತು ಸಿ ಪಡೆದಿರುವ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಒಂದು ವರ್ಷಗಳ ಅವಕಾಶ ನೀಡಿ. ಸುಧಾರಿಸದೇ ಇದ್ದಲ್ಲಿ ಅಂತಹ ವಿವಿ ಹಾಗೂ ಕಾಲೇಜುಗಳನ್ನು ಶಾಶ್ವತವಾಗಿ ಮುಚ್ಚಿಬಿಡಿ. ಬಿ ಮತ್ತು ಸಿ ಶ್ರೇಯಾಂಕ ಪಡೆದ ಕಾಲೇಜು ಮತ್ತು ವಿವಿಗಳು ಯುವಶಕ್ತಿಯನ್ನು ಹಾಳು ಮಾಡುತ್ತಿವೆ ಎಂದು ರಾಜ್ಯಪಾಲ ವಜುಭಾಯಿ​​ ವಾಲಾ ಅಭಿಪ್ರಾಯ ವ್ಯಕ್ತಪಡಿಸಿದರು.

    ಮಂಗಳವಾರ ರಾಜಭವನದಲ್ಲಿ ಆಯೋಜಿಸಿದ ನ್ಯಾಕ್​ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಮೊದಲಿಗೆ ರಜತೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು. ನಂತರ ನ್ಯಾಕ್ 25 ವರ್ಷ ಪೂರೈಸಿದೆ. ಅದೆಷ್ಟೋ ಸಂಸ್ಥೆಗಳು ಐವತ್ತು, ನೂರು ವರ್ಷಗಳ ನಂತರವೂ ದೇಶಕ್ಕೆ ಅಗತ್ಯವಾದ ವಸ್ತುಗಳನ್ನು ನೀಡುತ್ತವೆಯೇ ಎಂಬುದು ಮುಖ್ಯವಾಗಿದೆ. ಶಿಕ್ಷಣ‌ ಕ್ಷೇತ್ರ‌ ಎ ಗ್ರೇಡ್ ಆಗಲೇಬೇಕು. ಬಿ ಗ್ರೇಡ್, ಸಿ ಗ್ರೇಡ್​ಗಳನ್ನು ಇಡಲೇಬಾರದು. ಕಡಿಮೆ‌ ಗ್ರೇಡಿನ ಶಿಕ್ಷಣ ಸಂಸ್ಥೆಗಳನ್ನು ಉಳಿಸಬಾರದು. ಅಂತಹ ಸಂಸ್ಥೆಗಳನ್ನು ಮುಚ್ಚಬೇಕು ಎಂದು ತಿಳಿಸಿದರು.

    ಖಾಸಗಿ ಶಿಕ್ಷಣಗಳು ಬಹಳಷ್ಟು ಎ ಗ್ರೇಡ್‌ಗಳಾಗಿರುತ್ತವೆ. ಸರ್ಕಾರಿ ಶಿಕ್ಷಣ ಮಾತ್ರ ಬಿ, ಸಿ ಗ್ರೇಡ್​ ಆಗಿರುತ್ತವೆ. ಯಾವ ರಾಷ್ಟ್ರದಲ್ಲಿ ಶಿಕ್ಷಣಕ್ಕೆ‌ ಹೆಚ್ಚು ಒತ್ತು ‌ಕೊಡಲಾಗುತ್ತದೆಯೋ ಆ ರಾಷ್ಟ್ರ ಅಭಿವೃದ್ಧಿಯಲ್ಲಿ ಮುಂದಾಗುತ್ತದೆ. ವಿಜ್ಞಾನ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡುವ ರಾಷ್ಟ್ರ ಶ್ರೀಮಂತ ರಾಷ್ಟ್ರವಾಗುತ್ತವೆ. ಭಾರತದಲ್ಲಿ ಹೆಚ್ಚು ಬುದ್ಧಿವಂತ ಯುವ ಪೀಳಿಗೆ ಇದೆ. ತಿಂಗಳ ಮೊದಲ ದಿನ ಸಂಬಳ‌ ತೆಗೆದುಕೊಳ್ಳುವುದು ಆಗಬಾರದು. ಯಾವ ವಿದ್ಯಾರ್ಥಿಯನ್ನು ಶಿಕ್ಷಕ ಎಷ್ಟು ‌ಬುದ್ಧಿವಂತ ಮಾಡಿದ್ದಾನೆ. ಶಿಕ್ಷಣ ನೀಡಿದ್ದಾನೆ ಎಂಬ ಬಗ್ಗೆ ಮೌಲ್ಯಮಾಪನ ಆಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತವು ಪ್ರಬಲವಾಗಿ ಬೆಳೆಯಲು ಇಲ್ಲಿನ ಯುವ ಶಕ್ತಿಯ ಬುದ್ದಿಮತ್ತೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಎಬಿಸಿ ಗ್ರೇಡ್‌ ಬಗ್ಗೆ ನ್ಯಾಕ್ ಹೆಚ್ಚು ಚಿಂತನೆ‌ಮಾಡಬೇಕು. ಬಿ ಮತ್ತು ಸಿ ಗ್ರೇಡ್ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡಬೇಕು. ಇಂತಹ ಕಡಿಮೆ ‌ದರ್ಜೆಯ ಶಿಕ್ಷಣ ಸಂಸ್ಥೆಗಳು ಶಿಕ್ಣಣ ಕ್ಷೇತ್ರದಲ್ಲಿ ಹಿನ್ನಡೆ ಉಂಟುಮಾಡುತ್ತವೆ. ವಿಧ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಣದ ಬಗ್ಗೆ ನ್ಯಾಕ್ ತನ್ನ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

    ಇನ್ನು ಕಾರ್ಯಕ್ರಮದಲ್ಲಿ ಭಾರತ ಮಾತಾಕಿ ಎಂದಾಗ.. ಸಭಿಕರು ಸಣ್ಣದಾಗಿ ಜೈ ಎಂದಿದ್ದಕ್ಕೆ ರಾಜ್ಯಪಾಲರು ಗರಂ ಆದರು. ಭಾರತ ಮಾತಾಕಿ ಜೈ ಎಂದು ಜೋರಾಗಿ ಕೂಗದವರು ಶಕ್ತಿ‌ ಇಲ್ಲದವರು. ಭಾರತ್‌ ಮಾತಾ‌ಕಿ ಜೈ ಎನ್ನಲು ಶಕ್ತಿ ಬೇಕು ಎಂದು ಹೇಳಿ ಭಾಷಣದ ಕೊನೆಯಲ್ಲಿ ಭಾರತ್ ಮಾತಾಕಿ ಜೈ ಎಂದರು.

    ರಾಜಭವನದಲ್ಲಿ ಆಯೋಜಿಸಿರುವ ನ್ಯಾಕ್ ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts