ಶೋಷಿತರ ಕಷ್ಟಗಳಿಗೆ ದನಿಯಾಗಿದ್ದ ನಾ.ಡಿಸೋಜ

blank

ಸೊರಬ: ಸಾಹಿತ್ಯ ಹಾಗೂ ಹೋರಾಟದ ಮೂಲಕ ಸಮಾಜದ ದೀನ ದಲಿತರ, ಶೋಷಿತರ ಕಷ್ಟಗಳಿಗೆ ದನಿಯಾಗಿದ್ದ ಸಾಹಿತಿ ನಾ.ಡಿಸೋಜ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ದಂತ ವೈದ್ಯ ಜ್ಞಾನೇಶ್ ಹೇಳಿದರು.
ಸೊರಬದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯತೆ, ಅಂತಃಕರಣ, ಸೂಕ್ಷ್ಮ ಸಂವೇದನೆಗಳಿಗೆ ಹೆಸರಾದ ಸಾಹಿತಿ ನಾ.ಡಿಸೋಜ ಅವರು ಶೋಷಿತ ಸಮುದಾಯಗಳ ಬಗ್ಗೆ ಅನುಕಂಪ ಹೊಂದಿದ್ದರು. ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಅನಾವರಣಗೊಳಿಸುವ ಮೂಲಕ ಅವರಿಗೆ ಧ್ವನಿಯಾಗಿದ್ದರು. ಮಕ್ಕಳ ಬಗ್ಗೆ ಪ್ರೀತಿ, ಕಾಳಜಿ ಹೊಂದಿದ ಅವರು ಮಕ್ಕಳ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದರು ಎಂದರು. ರಾಜಪ್ಪ ಮಾಸ್ತರ್, ನಿರಂಜನ್, ಷಣ್ಮುಖಾಚಾರ್, ಎಸ್.ಕೃಷ್ಣಾನಂದ್, ರೇವಣ್ಣಪ್ಪ, ಮೋಹನ್ ಸುರಭಿ, ಎಚ್.ಗುರುಮೂರ್ತಿ, ಡಾ. ಎಸ್.ಎಂ.ನೀಲೇಶ್, ಇ.ಶಿವಕುಮಾರ್, ಟಿ.ಆರ್.ಸಂತೋಷ್, ಸುಜಾತ ಜೋತಾಡಿ, ರೂಪದರ್ಶಿ, ಭಾರತಿ, ರೈತ ಸಂಘದ ಮಂಜುನಾಥ್ ಗೌಡ, ಈಶ್ವರಪ್ಪ ಕೊಡಕಣಿ ಇತರರಿದ್ದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…