More

  ಎನ್.ಸರಸ್ವತಿಗೆ ಸಾಧಕಿ ಸ್ತ್ರೀ ಪ್ರಶಸ್ತಿ ಪ್ರದಾನ

  ಶ್ರೀರಂಗಪಟ್ಟಣ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಮಾಜಸೇವಕಿ ಹಾಗೂ ಕಸಾಪ ನಗರ ಘಟಕದ ಅಧ್ಯಕ್ಷೆ ಎನ್.ಸರಸ್ವತಿ ಅವರಿಗೆ ಸಾಧಕಿ ಸ್ತ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಬೆಂಗಳೂರಿನ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿವಶ್ರೀ ಮಿಡಿಯಾದ ರಾಜ್ ನ್ಯೂಸ್ ಹಾಗೂ ರಾಜ್ ಮ್ಯೂಸಿಕ್ ವಾಹಿನಿ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಸರಸ್ವತಿ ಅವರ ಸಮಾಜಸೇವೆಗಾಗಿ ಗೌರವಿಸಲಾಗಿದೆ. ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧಕಿ ಮಹಿಳೆಯರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಚಿತ್ರ ನಟಿಯರಾದ ಪ್ರಿಯಾಂಕಾ, ತಾರಾ ಮತ್ತಿತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts