More

    ಶ್ರೀಮಂತ ಸಾಹಿತ್ಯ ಹೊಂದಿರುವ ಭಾಷೆ ಕನ್ನಡ

    ಎಚ್.ಡಿ.ಕೋಟೆ: ಕನ್ನಡ ಅತ್ಯಂತ ಶ್ರೀಮಂತ ಸಾಹಿತ್ಯವನ್ನು ಹೊಂದಿರುವ ಭಾಷೆಯಾಗಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಬಣ್ಣಿಸಿದರು.
    ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿಸ್ತೀರ್ಣದಲ್ಲಿ ಎಚ್.ಡಿ.ಕೋಟೆ 1561 ಚದರ ಕಿ.ಮೀ. ಹೊಂದಿದ್ದು, ಜಿಲ್ಲೆಗೆ ದೊಡ್ಡ ತಾಲೂಕಾಗಿದೆ. ವಿಸ್ತೀರ್ಣದಲ್ಲಿ ದೊಡ್ಡದಿರುವುದರಿಂದ 300 ಕೋಟಿ ರೂ.ಗಳಿಗೂ ಹೆಚ್ಚು ಹಣ ರಸ್ತೆ ಅಭಿವೃದ್ಧಿಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ವಿಸ್ತೀರ್ಣಕ್ಕೆ ಅನುಗುಣವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಸಂಸ್ಕೃತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಮಾತನಾಡಿ, ಎಲ್ಲೂ ಕಾಣ ಸಿಗದ ಸಾಂಸ್ಕೃತಿಕ ಶ್ರೀಮಂತಿಕೆ ಎಚ್.ಡಿ.ಕೋಟೆಯಲ್ಲಿ ಇದೆ. ಕನ್ನಡವನ್ನು ಶ್ರೀಮಂತಗೊಳಿಸುವವರು ಸಾಹಿತಿಗಳು. ಸಾಹಿತಿಗಳನ್ನು ಹೊತ್ತು ಮೆರೆಸುವವರು ನಿಮ್ಮಂತಹ ಕನ್ನಡಾಭಿಮಾನಿಗಳು ಎಂದರು.
    ಆಂತರಿಕವಾಗಿ ಕನ್ನಡಕ್ಕೆ ನೂರಾರು ಸಮಸ್ಯೆಗಳಿವೆ. ಆದ್ದರಿಂದ ಕನ್ನಡದ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಿದೆ. ಕರ್ನಾಟಕದ ಏಕೀಕರಣವಾದಾಗ ಕನ್ನಡ ವಿಶಾಲವಾಗಿತ್ತು. ಆದರೀಗ ಕಾನೂನಿನ ಚೌಕಟ್ಟಿಗೆ ತಂದು ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಪ್ರೊ.ಕೆ.ಪಿ. ಬಸವೇಗೌಡ, ಕೆ.ವಿ.ಬಸವರಾಜು, ಸಣ್ಣಪುಟ್ಟಮ್ಮ, ಜಿ.ವಿ.ರಾಜಶೆಟ್ಟಿ, ರಂಗರಾಜು, ಜವರನಾಯಕ, ವಾದಿರಾಜ್, ಪುನೀತ್ ಅಂಬಳೆ, ಮಂಜುಳಾ, ರಮೇಶ್‌ರಾವ್, ಕೆ.ಶೈಲಜಾ, ಮಹದೇವ, ಎಚ್.ಕೆ.ಸೋಮಶೇಖರ್, ಕಾಳಿಹುಂಡಿ ಶಿವಕುಮಾರ್, ಡಾ.ಕುಮಾರ್ ಅಂಕನಹಳ್ಳಿ, ಚಲುವ, ಮರಿನಂಜಾಚಾರ್, ಎಸ್.ಎಸ್.ಮಹದೇವಯ್ಯ, ವಿ.ಉದಯಕುಮಾರ್, ಎಸ್.ಮಲ್ಲಿಕಾರ್ಜುನ್, ಬಾಲಚಂದ್ರ, ನಾರಾಯಣ್ ಲಾಲ್, ಪಳನಿಸ್ವಾಮಿ, ಅಬ್ದುಲ್ ಬಾರಿ ಅವರನ್ನು ಸನ್ಮಾನಿಸಲಾಯಿತು.
    ಸಮ್ಮೇಳನಾಧ್ಯಕ್ಷ ಪ್ರೊ.ನೀ.ಗಿರಿಗೌಡ, ಶಾಸಕ ಅನಿಲ್ ಕುಮಾರ್, ಮಾಜಿ ಸಚಿವ ಎಂ.ಶಿವಣ್ಣ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ತಾಲೂಕು ಅಧ್ಯಕ್ಷ ಕನ್ನಡಪ್ರಮೋದ್, ವಿನಯ್ ಭಜರಂಗಿ, ಕಸ್ತೂರಿ ಮಹೇಶ್, ಮಾ.ಶಿ. ಗಿರೀಶ್‌ಮೂರ್ತಿ, ಡಾ.ರಘುನಾಥ್, ಪುರಸಭಾ ಸದಸ್ಯ ನರಸಿಂಹಮೂರ್ತಿ, ಹಿರೇಹಳ್ಳಿ ಸೋಮೇಶ್, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಶಿವಯ್ಯ, ಅಶೋಕ್, ಮಹದೇವಸ್ವಾಮಿ, ಡೇರಿ ಶ್ರೀಕಾಂತ್, ಪ್ರಸಾದ್, ಆಟೋ ಪ್ರಶಾಂತ್, ಕಾಶಿ ಮಹೇಶ್, ತ್ರಿಶಂಭು, ಸಿದ್ದರಾಜು, ಜಯಪ್ರಕಾಶ್, ನಾಗುಸಾಗರ್, ಅಂಬಾರಿ ಕೃಷ್ಣ, ಅಪ್ಪು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts