ಮೈವಿವಿ ಎಸ್ಸಿ, ಎಸ್ಟಿ ನೌಕರರ ಸಂಘದ ಪ್ರತಿಭಟನೆ

ಮೈಸೂರು:ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದ ದಲಿತ ಯುವಕನ ಮೇಲಿನ ಹಲ್ಲೆ, ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಸದಸ್ಯರು ಮಾನಸಗಂಗೋತ್ರಿಯ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಇದೊಂದು ಅಮಾನವೀಯ ಕೃತ್ಯವಾಗಿದ್ದು, ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಯುವಕನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಪ್ರೊ.ದಯಾನಂದ ಮಾನೆ, ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ, ವಿದ್ಯಾರ್ಥಿ ಮುಖಂಡರಾದ ಡಾ.ಗೋವಿಂದರಾಜು, ಕೆ.ಎಸ್.ಶೃಂಗಾರ್, ಮನೋಜ್‌ಕುಮಾರ್, ಮಹದೇವಸ್ವಾಮಿ, ಮಹೇಶ್, ಮಾದೇಶ್ ಮತ್ತಿತರರು ಇದ್ದರು.

ಈ ಪ್ರಕರಣವನ್ನು ಖಂಡಿಸಿ ವಿವಿಧ ಸಂಘಟನೆಗಳು ಇಲವಾಲದಲ್ಲೂ ಪ್ರತಿಭಟನೆ ನಡೆಸಿದವು. ಈ ಕುರಿತು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು, ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಯುವಕನಿಗೆ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ನಾಗವಾಲ ಸಿ.ನರೇಂದ್ರ, ಡಿಸಿಸಿ ಕಾರ್ಯದರ್ಶಿ ಡಾ.ಹುಯಿಲಾಳು ರಾಮಸ್ವಾಮಿ, ಸ್ವಾಭಿಮಾನಿ ದಲಿತ ವೇದಿಕೆ ಕಾರ್ಯದರ್ಶಿ ಚೆಲುವರಾಜ್, ಇಲವಾಲದ ಚೆಲುವರಾಜು, ಬಿ.ಡಿ.ಎಂ.ಕುಮಾರ್, ರವಿ, ಭೈರವ, ವಿಶ್ವ ನಾಗ್, ಬೋಗಾದಿ ಕೆ.ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *