More

    ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ

    ಬೆಂಗಳೂರು/ಮೈಸೂರು: ಬಹಳ ವರ್ಷಗಳಿಂದ ವಿಷ್ಣು ಅಭಿಮಾನಿಗಳು ಎದುರು ನೋಡುತ್ತಿದ್ದ ಆ ಕ್ಷಣ ಇಂದು ಬಂದೇ ಬಿಟ್ಟಿದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗು ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅವರ ತವರೂರಿನಲ್ಲಿ ಅವರ ಸ್ಮಾರಕ ಇಂದು ಉದ್ಘಾಟನೆಯಾಗಲಿದೆ.

    ಸ್ಮಾರಕ ಉದ್ಘಾಟನೆ ಅಂಗವಾಗಿ ವಿಷ್ಣು ಪುಣ್ಯಭೂಮಿ ಅಭಿಮಾನ್​ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ಮಾರಕ ಉದ್ಘಾಟನೆ ಕನ್ನಡಿಗರ ಬಹುದಿನದ ಕನನಾಗಿದ್ದು,‌ ಇಂದು ನನಸಾಗುತ್ತಿದೆ. 13 ವರ್ಷಗಳ ಸತತ ಹೋರಾಟಕ್ಕೆ ಇಂದು ಪ್ರತಿಫಲ ಸಿಗಲಿದೆ. ಇದೇ ಖುಷಿಯಲ್ಲಿ ಬೆಂಗಳೂರಿಂದ ಮೈಸೂರಿನವರೆಗೆ 1000 ರಥ ಯಾತ್ರೆ ನೆರವೇರಲಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸುಮಾರು 1000 ವಾಹನಗಳ ರಥ ಯಾತ್ರೆ ನಡೆಯುತ್ತಿದೆ.

    ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣು ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರಿಂದ 1000 ಗಾಡಿಯಲ್ಲಿ ಸಾವಿರಾರು ಅಭಿಮಾನಿಗಳು ಸ್ಮಾರಕ ಉದ್ಘಾಟನೆಗೆ ಬರಲಿದ್ದಾರೆ. ಮೈಸೂರು ರಸ್ತೆಯುದ್ದಕ್ಕೂ ಕರುನಾಡು ಸುಪುತ್ರನ ಕಟೌಟ್​ಗಳು ತಲೆ‌ ಎತ್ತಿ ನಿಂತಿವೆ. 140ಕ್ಕೂ ಹೆಚ್ಚು ಕಿ.ಮೀ‌ ವರೆಗೂ ವಿಷ್ಣು ಕಟೌಟ್​ಗಳು ರಾರಾಜಿಸುತ್ತಿವೆ.

    ಇಂದು ಬೆಳಗ್ಗೆ 4 ಗಂಟೆಯಿಂದಲೂ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕ‌ ಮುಂದೆ ಅಭಿಮಾನಿಗಳು ಕ್ಯೂ ನಿಂತಿದ್ದರು. ಸಾಹಸಸಿಂಹ ವಿಷ್ಣು ಪುಣ್ಯಭೂಮಿಗೆ ವಿಶೇಷ ಪೂಜೆ‌‌ ಸಲ್ಲಿಸಿ ವಾಹನ ಜಾಥಾಗೆ ಚಾಲನೆ ನೀಡಲಾಗಿದೆ. ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರು, ವೀರಕಪುತ್ರ ಶ್ರೀನಿವಾಸ್ ಅವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

    ಪೂಜೆಯ ಬಳಿಕ ವಿಷ್ಣು ಅಭಿಮಾನಿಗಳು ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದಾರೆ. ಬೃಹತ ಮೆರವಣಿಗೆ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. 1 ಸಾವಿರ ವಾಹನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ವಿಷ್ಣು ಸೇನಾ ಸಮಿತಿಯಿ ನೇತೃತ್ವದಲ್ಲಿ ಮೈಸೂರಿನ ಸ್ಮಾರಕ ಉದ್ಘಾಟನೆ ಕಾರ್ಯಕ್ರಮಕ್ಕೆ ಅಭಿಮಾನಿಗಳು ತೆರಳಿದ್ದಾರೆ.

    ದಾರಿಯುದ್ದಕ್ಕೂ ಅಭಿಮಾನಿಗಳು ಬೃಹತ್​ ಮೆರವಣಿಗೆಯನ್ನು ಸೇರಿಕೊಳ್ಳಲಿದ್ದಾರೆ. 10 ವರ್ಷಗಳ ಅಭಿಮಾನಿಗಳ ಕನಸು ಈ ದಿನ ನನಸಾಗುತ್ತಿದೆ. ಒಂದು ಸಾವಿರ ವಾಹನಗಳಲ್ಲಿ ಮೈಸೂರಿನ ಸ್ಮಾರಕ ಉದ್ಘಾಟನೆಗೆ ತೆರಳುತ್ತಿದ್ದೇವೆ. ದಾರಿಯುದ್ದಕ್ಕೂ ಅಭಿಮಾನಿಗಳು ಸೇರ್ಪಡೆಯಾಗ್ತಾರೆ. ಮೈಸೂರಿನಲ್ಲಿ ಕಲಾತಂಡಗಳ ಜೊತೆಗೆ ಮೆರವಣಿಗೆ ಮಾಡಲಾಗುತ್ತದೆ. ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹೇಳಿದರು. (ದಿಗ್ವಿಜಯ ನ್ಯೂಸ್​)

    ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ

    ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ ವಿಧಿವಶ

    ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ: ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts