ಜೆಡಿಎಸ್‌ಗೆ ಕೈ ಕೊಟ್ಟರೆ, ಕಾಂಗ್ರೆಸ್‌ಗೆ ಕೈ ಕೊಡಲಾಗುವುದು: ಕಾಂಗ್‌ ನಾಯಕರಿಗೆ ಸಾರಾ ಮಹೇಶ್‌ ಎಚ್ಚರಿಕೆ

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಗೆಲ್ಲಬೇಕು. ಜೆಡಿಎಸ್‌​​ಗೆ ಕೈಕೊಟ್ಟರೆ ಕಾಂಗ್ರೆಸ್​ಗೆ ಕೈ ಕೊಡಲಾಗುವುದು ಎಂದು ಕಾಂಗ್ರೆಸ್‌ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್‌ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿ, ಒಂದು ವೇಳೆ ಕಾಂಗ್ರೆಸ್​​​ ನಾಯಕರು ಕೈಕೊಟ್ಟರೆ ಮೈಸೂರಿನಲ್ಲಿ ಕಾಂಗ್ರೆಸ್​​ಗೆ ಕೈಕೊಡುವುದಾಗಿ ಪರೋಕ್ಷ ಹೇಳಿಕೆ ನೀಡಿರುವ ಅವರು, ನೀವು ಮಂಡ್ಯದಲ್ಲಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಿಧ್ವನಿಸಲಿದೆ. ನಮ್ಮನ್ನು ಒಮ್ಮೆ ತಬ್ಬಿಕೊಂಡ್ರೆ, 5 ಬಾರಿ ತಬ್ಬಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂಬರೀಶ್ ನನ್ನ ತಲೆಗೆ ರಾಜಕೀಯ ಸಾಕು ಎಂದಿದ್ದರು. ನಿಖಿಲ್ ಕುಮಾರಸ್ವಾಮಿ ಮತ್ತು ಅಭಿಷೇಕ್ ಆತ್ಮೀಯ ಮಿತ್ರರು. ನಿಖಿಲ್​ರನ್ನು ಸುಮಲತಾ ಮಗ ಎಂದು ಹೇಳಿದ್ದರು. ಸುಮಲತಾ ಅವರು ಮಗನಿಗೆ ಆಶೀರ್ವಾದ ಮಾಡಬೇಕಿತ್ತು. ಈಗ ಅವರ ಮೇಲೆಯೇ ಪ್ರಹಾರ ಮಾಡಲು ನಿಂತಿದ್ದೀರಿ. ನಿಖಿಲ್ ಹೆಸರು ಬಂದಾಗಲಾದರೂ ಯೋಚನೆ ಮಾಡಬೇಕಿತ್ತು. ಕಾರ್ಯಕರ್ತರೆಲ್ಲ ಅಭಿಷೇಕ್ ನಟಿಸಿದ ಸಿನಿಮಾ ನೋಡಿ ಬೇಕಾದರೆ ಬ್ಲ್ಯಾಕ್‌ ಟಿಕೆಟ್​ಪಡೆದು ಸಿನಿಮಾ‌ ವೀಕ್ಷಿಸಿ. ಆದರೆ ಕುಮಾರಣ್ಣನ ಮಗ ರಾಜ್ಯದ ನೇತಾರನಾಗಬೇಕು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಅಂತರ ಇದ್ದೆ ಇರುತ್ತದೆ. ಆದರೆ ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ದೇಶಕ್ಕೆ ಎಚ್​ಡಿಕೆ ಮುಖಾಂತರ ಸಂದೇಶ ನೀಡಿದ್ದೇವೆ. ನನ್ನನ್ನು ಜಾತಿ ರಾಜಕಾರಣ ಮಾಡುತ್ತೇನೆ ಆರೋಪಿಸುತ್ತಾರೆ. ನಾನು ಕ್ಷೇತ್ರಕ್ಕೆ ಶಾಸಕ, ರಾಜ್ಯಕ್ಕೆ ಮಂತ್ರಿ. ಯಾವತ್ತು ನಾನು ಜಾತಿ ರಾಜಕೀಯ ಮಾಡಿಲ್ಲ. ನೀವು ಅದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದರು. (ದಿಗ್ವಿಜಯ ನ್ಯೂಸ್)

One Reply to “ಜೆಡಿಎಸ್‌ಗೆ ಕೈ ಕೊಟ್ಟರೆ, ಕಾಂಗ್ರೆಸ್‌ಗೆ ಕೈ ಕೊಡಲಾಗುವುದು: ಕಾಂಗ್‌ ನಾಯಕರಿಗೆ ಸಾರಾ ಮಹೇಶ್‌ ಎಚ್ಚರಿಕೆ”

  1. Can the existing fools who are running the government stop looking of their interest other than national interest.

Comments are closed.