22.8 C
Bengaluru
Saturday, January 18, 2020

ಮೈಸೂರಲ್ಲಿ 500 ಕೋಟಿ ರೂ. ನೋಟು ಬದಲು ದಂಧೆ: ಶೂಟೌಟ್ ಪ್ರಕರಣಕ್ಕೆ ಮಹತ್ವದ ತಿರುವು

Latest News

ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ನವದೆಹಲಿಯಲ್ಲಿ ಜನವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ವೇದಾ ಆಯ್ಕೆ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದು, ಜನವರಿ 20...

ಮೈಸೂರು: ನೋಟು ಅಮಾನ್ಯೀಕರಣವಾಗಿ ಎರಡೂವರೆ ವರ್ಷ ಕಳೆದಿದ್ದರೂ ಅಪಮೌಲ್ಯಗೊಂಡ ಹಳೆಯ ನೋಟುಗಳ ಬದಲಾವಣೆ ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಮೈಸೂರಿನಲ್ಲಿ ಗುರುವಾರ ನಡೆದ ಶೂಟ್​ಔಟ್ ಪ್ರಕರಣದಲ್ಲೂ ಈ ದಂಧೆಯ ಹೆಜ್ಜೆಗುರುತು ಗೋಚರಿಸಿದೆ. ಪೊಲೀಸರ ಗುಂಡಿಗೆ ಬಲಿಯಾದ ಪಂಜಾಬ್ ಮೂಲದ ಸುಕ್ವಿಂದ್ ಸಿಂಗ್ ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳ ಬದಲಾವಣೆ ದಂಧೆಗೆ ಕೈಹಾಕಿದ್ದನೆಂಬ ವಿಚಾರ ಬಹಿರಂಗವಾಗಿದೆ. ಸುಕ್ವಿಂದ್ ಸಿಂಗ್ ಮೇಲೆ ಫೈರಿಂಗ್ ಮಾಡಿದ ಇನ್​ಸ್ಪೆಕ್ಟರ್ ಬಿ.ಜಿ. ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಿಸಿರುವ ವಿಜಯನಗರ ಪೊಲೀಸರು, ಅದರಲ್ಲಿ 500 ಕೋಟಿ ರೂ. ಮೌಲ್ಯದ ರದ್ದುಗೊಂಡಿರುವ ನೋಟುಗಳ ಬದಲಾವಣೆ ದಂಧೆ ನಡೆಯುತ್ತಿತ್ತು ಎನ್ನುವ ಮಾಹಿತಿ ಉಲ್ಲೇಖಿಸಿದ್ದಾರೆ.

ಎಫ್​ಐಆರ್​ನಲ್ಲೇನಿದೆ?: ‘ವಿಜಯನಗರ ಪೊಲೀಸ್ ಠಾಣೆಯಲ್ಲಿ 6 ತಿಂಗಳಿನಿಂದ ಪೊಲೀಸ್ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ 3 ವಾರಗಳಿಂದ ಹೆಚ್ಚಿನ ಸರಗಳ್ಳತನ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗಿನ ಜಾವ ನಗರದ ಎಲ್ಲ ಅಧಿಕಾರಿ ವತ್ತು ಸಿಬ್ಬಂದಿ ಜತೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದೆ. ಮೇ 16 ರಂದು ಬೆಳಗ್ಗೆ 8 ಗಂಟೆಗೆ ನಮ್ಮ ಬಾತ್ಮೀದಾರರೊಬ್ಬರು ದೂರವಾಣಿ ಕರೆ ಮಾಡಿ, ನಗರದಲ್ಲಿ ಅಮಾನ್ಯೀಕರಣಗೊಂಡ ನೋಟುಗಳ ಬದಲಾವಣೆ ದಂಧೆ ನಡೆಯುತ್ತಿದೆ. ಅಮಾನ್ಯೀಕರಣಗೊಂಡ ನೋಟು ಪಡೆದು ಚಲಾವಣೆಯಲ್ಲಿರುವ ನೋಟು ನೀಡುವುದಾಗಿ ಒಬ್ಬ ವ್ಯಕ್ತಿ ಹೇಳುತ್ತಿದ್ದಾನೆ. ನನ್ನಿಂದ 10 ಲಕ್ಷ ರೂ. ಪಡೆದು ವಾಪಸ್ ನೀಡದೆ ಮೋಸ ಮಾಡಿದ್ದಾನೆ. ಈಗ ಈತ 500 ಕೋಟಿ ರೂ. ಅಮಾನ್ಯೀಕರಣಗೊಂಡ ನೋಟು ಬದಲಾಯಿಸಿ ಕೊಡುವುದಾಗಿ ತಿಳಿಸಿದ್ದ. ಆತ ವಿಜಯನಗರದ ಎಸ್.ವಿ. ಅಪಾರ್ಟ್​ವೆುಂಟ್ ಕಡೆ ಬರುವುದಾಗಿ ತಿಳಿಸಿದ್ದಾನೆಂದು ನನಗೆ ಮಾಹಿತಿ ನೀಡಿದರು.

ಕೆಎ 09 ಸಿ 6031 ಸಂಖ್ಯೆಯ ಕಾರಿನಲ್ಲಿ ಅಲ್ಲಿಗೆ ಬರುತ್ತಾನೆ ಎಂದು ನನ್ನ ಮೊಬೈಲ್​ಗೆ ಮಸೇಜ್ ಮಾಡಿದ್ದರು. ತಕ್ಷಣ ನಮ್ಮ ಸಿಬ್ಬಂದಿ ಎಎಸ್​ಐ ವೆಂಕಟೇಶ್​ಗೌಡ , ಸಿಸಿ ಮಹೇಶ್, ಪಿಸಿ ವೀರಭದ್ರ ಅವರೊಂದಿಗೆ ಬೆಳಗ್ಗೆ 9.15 ಗಂಟೆ ವೇಳೆಗೆ ಎಸ್.ಎ. ಅಪಾರ್ಟ್ ಮೆಂಟ್ ಸ್ಥಳಕ್ಕೆ ಹೋಗಿದ್ದವು. ತಕ್ಷಣ ಆ ಕಾರು ನಮಗೆ ಎದುರಾಯಿತು. ನಮ್ಮನ್ನು ನೋಡಿದ ಕೂಡಲೇ ಕಾರಿನಲ್ಲಿದ್ದಾತ ಕೆಳಗಿಳಿದು ನನಗೆ ಕಾಲಿನಿಂದ ಒದ್ದು ನನ್ನ ಪಿಸ್ತೂಲನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ. ಜತೆಗೆ ನಮ್ಮ ಸಿಬ್ಬಂದಿಯನ್ನು ಬಿಗಿಯಾಗಿ ಹಿಡಿದುಕೊಂಡ. ನಮ್ಮ ಸಿಬ್ಬಂದಿಯನ್ನು ಬಿಡುವಂತೆ ವಿನಂತಿ ಮಾಡಿದರೂ ಬಿಗಿಯಾಗಿ ಹಿಡಿದುಕೊಂಡಿದ್ದ. ನಾನು ಕೂಡಲೇ ನನ್ನ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದೆ. ಆದರೂ, ಅವರನ್ನು ಬಿಡದೆ ತನ್ನ ಬಳಿಯಿದ್ದ ಗನ್ ತೆಗೆದು ನಮ್ಮ ಮೇಲೆ ಗುರಿಯಿಟ್ಟು ಗುಂಡು ಹಾರಿಸಲು ಪ್ರಯತ್ನಿಸಿದ. ನನ್ನ ಸಿಬ್ಬಂದಿ ಮತ್ತು ನನ್ನ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದು ಅಂತಿಮವಾಗಿ ಸಿಬ್ಬಂದಿ ಪ್ರಾಣರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ನನ್ನ ಸರ್ವೀಸ್ ಪಿಸ್ತೂಲ್​ನಿಂದ ದಂಧೆಕೋರನಿಗೆ ಗುಂಡು ಹಾರಿಸಿದೆ’ ಎಂದು ಇನ್ಸ್​ಪೆಕ್ಟರ್ ಬಿ.ಜಿ. ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಶೂಟೌಟ್ ಪ್ರಕರಣ ಸಿಐಡಿಗೆ ಹಸ್ತಾಂತರ

ಮೈಸೂರು: ನಗರದಲ್ಲಿ ಗುರುವಾರ ನಡೆದ ಶೂಟೌಟ್ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ನಾಲ್ಕು ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಮೈಸೂರಿಗೆ ಆಗಮಿಸಿ ತನಿಖೆ ಆರಂಭಿಸಿತು. ಶೂಟೌಟ್ ಪ್ರಕರಣ ನಡೆದ ಸ್ಥಳಕ್ಕೆ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿತು. ದಂಧೆಕೋರರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಪರಿಶೀಲನೆ ನಡೆಸುವ ಜತೆಗೆ ಬಾತ್ಮೀದಾರ, ಶೂಟೌಟ್ ಮಾಡಿದ ಇನ್ಸ್​ಪೆಕ್ಟರ್ ಬಿ.ಜಿ.ಕá-ಮಾರ್ ಹಾಗೂ ಅವರ ಜತೆಗಿದ್ದ ಸಿಬ್ಬಂದಿ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಪ್ರಕಾರ ಯಾವುದೇ ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಬೇಕಾಗುತ್ತದೆ.

ಮರಣೋತ್ತರ ಪರೀಕ್ಷೆ ಬಾಕಿ

ಫೈರಿಂಗ್​ನಲ್ಲಿ ಮೃತಪಟ್ಟ ಪಂಜಾಬ್ ಮೂಲದ ಸುಕ್ವಿಂದ್ ಸಿಂಗ್ (40) ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತನ ಕುಟುಂಬಸ್ಥರು ಪಂಜಾಬ್​ನಿಂದ ಆಗಮಿಸಿದ ನಂತರ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

ಹಲವು ಪ್ರಶ್ನೆಗಳು

ನೋಟು ಬದಲಾವಣೆ ಪ್ರಕರಣದಲ್ಲಿ ಕೇಳಿ ಬಂದಿರುವ 500 ಕೋಟಿ ರೂ. ಮೌಲ್ಯದ ಅಮಾನ್ಯೀಕರಣಗೊಂಡ ನೋಟುಗಳು ಎಲ್ಲಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ನಿಜವಾಗಿಯೂ ಅಮಾನ್ಯೀಕರಣಗೊಂಡ ನೋಟುಗಳ ಬದಲಾವಣೆ ಇನ್ನೂ ನಡೆಯುತ್ತಿದೆಯೇ? ಹಾಗಾದರೆ ಆ ನೋಟುಗಳು ಇನ್ನೂ ಏಕೆ ಪೊಲೀಸರ ಕೈ ಸೇರಿಲ್ಲ? ಇನ್ಸ್​ಪೆಕ್ಟರ್ ಬಿ.ಜಿ.ಕುಮಾರ್ ಫೈರಿಂಗ್​ನಲ್ಲಿ ಬಲಿಯಾದ ಸುಕ್ವಿಂದ್ ಸಿಂಗ್ ನಿಜವಾಗಿಯೂ ದಂಧೆಕೋರನಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ದಂಧೆ ಬಗ್ಗೆ ಮಾಹಿತಿ ನೀಡಿದ ಬಾತ್ಮೀದಾರನನ್ನು ವಿಜಯನಗರ ಠಾಣೆ ಪೊಲೀಸರು ಗುರá-ವಾರ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...