ನಾಡದೇವಿಗೆ ನಮೋ

ಮೈಸೂರು: ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ವಿಶ್ವದರ್ಶನ ಮಾಡಿಸುವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮತ್ತೊಂದು ಮಹಾಪರ್ವ ಮುಗಿದಿದೆ. ಮಂಗಳವಾರ ವಿಜಯದಶಮಿಯಂದು ನಡೆದ ವಿಜೃಂಭಣೆಯ ವರ್ಣರಂಜಿತ ಮೆರವಣಿಗೆಯನ್ನು ದೇಶ, ವಿದೇಶಗಳ ಲಕ್ಷಾಂತರ ಜನರು ಕಣ್ತುಂಬಿಕೊಂಡರು.

ಗಜಪಡೆಯ ಕ್ಯಾಪ್ಟನ್ ಅರ್ಜುನ ಹೊತ್ತ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸತತ 8ನೇ ಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ ರೋಮಾಂಚನಕಾರಿಯಾಗಿತ್ತು. ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಮಧ್ಯಾಹ್ನ 2.02ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಸಂಪ್ರದಾಯ ದಂತೆ ಪೂಜೆ ಸಲ್ಲಿಸಿದರು. ಸಂಜೆ 4.18ಕ್ಕೆ ಶುಭ ಕುಂಭ ಲಗ್ನದಲ್ಲಿ ಅಂಬಾರಿಯಲ್ಲಿ ಆಸೀನಳಾದ ಚಾಮುಂಡೇಶ್ವರಿಗೂ ಪುಷ್ಪಾರ್ಚನೆ ಮಾಡಿ ಸಿಎಂ ನಮನ ಸಲ್ಲಿಸಿದರು.

  1. ಸಂಜೆ 6.15ಕ್ಕೆ ಬನ್ನಿಮಂಟಪ ತಲುಪಿದ ಜಂಬೂಸವಾರಿ ಮೆರವಣಿಗೆ
  2. ಸಂಜೆ 7ರಿಂದ ರಾತ್ರಿ 10 ಗಂಟೆವರೆಗೆ ಪಂಜಿನ ಕವಾಯತು.
  3. ರಾಜ್ಯಪಾಲ ವಿ.ಆರ್.ವಾಲಾರಿಂದ ಗೌರವ ವಂದನೆ ಸ್ವೀಕಾರ
  4. ಅರಮನೆಯಲ್ಲಿ ಯದುವೀರ್ ಅವರಿಂದ ಪೂಜಾಕಾರ್ಯ

409
ನೇ ದಸರಾ ಮಹೋತ್ಸವ

39
ಸ್ತಬ್ಧಚಿತ್ರಗಳ ಪ್ರದರ್ಶನ

750
ಕೆಜಿ, ಚಿನ್ನದ ಅಂಬಾರಿ ತೂಕ

5800
ಕೆಜಿ, ಅಂಬಾರಿ ಹೊತ್ತ ಅರ್ಜುನ ಆನೆಯ ತೂಕ

Leave a Reply

Your email address will not be published. Required fields are marked *