ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಬಹುತೇಕ ಆನೆಗಳು ತಮ್ಮ ದೇಹ ತೂಕವನ್ನ ಹೆಚ್ಚಿಸಿಕೊಂಡಿವೆ. ಮೈಸೂರಿಗೆ ಬರುವುದಕ್ಕೂ ಮೊದಲೇ ಗಜಪಡೆಯಲ್ಲಿದ್ದ ತೂಕಕ್ಕೂ ಈಗಿರುವ ತೂಕಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ.

ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ತೂಕ ಪರಿಶೀಲನೆ ನಡೆಸಲಾಗಿದ್ದು, ಮೈಸೂರು ಅರಮನೆ ಆವರಣ ಪ್ರವೇಶಿಸಿದ ನಂತ್ರ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಆನೆಗಳ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

ಇದೇ ಮೊದಲ ಬಾರಿಗೆ ಪ್ರವೇಶಿಸಿರುವ ಧನಂಜಯ, ಬರೋಬ್ಬರಿ 530 ಕೆಜಿ ಹೆಚ್ಚಿಸಿಕೊಂಡಿದ್ದು, ಎಲ್ಲಕ್ಕಿಂತ ನಾನೇ ಗಟ್ಟಿಮುಟ್ಟು ಎಂದು ಬೀಗುತ್ತಿದ್ದಾನೆ. ಆದರೆ, ಕಳೆದೆರಡು ದಿನಗಳಿಂದ ಅನಾರೋಗ್ಯ ಪೀಡಿತನಾಗಿರುವ ಪ್ರಶಾಂತ, 340 ಕೆಜಿ ಕಳೆದುಕೊಂಡಿದ್ದಾನೆ.

ಗಜಪಡೆಯ ತೂಕ