ನಂದಿ ಧ್ವಜಕ್ಕೆ ಸಿಎಂರಿಂದ ಪೂಜೆ; ಜಂಬೂ ಸವಾರಿಗೆ ಚಾಲನೆ

ಮೈಸೂರು: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಮಧ್ಯಾಹ್ನ 2.30 ರಿಂದ 3.16 ರೊಳಗಿನ ಶುಭ ಕುಂಭ ಲಗ್ನದಲ್ಲಿ ಸಿಎಂ ಕುಮಾರಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಅರಮನೆಯ ಬಲರಾಮ ದ್ವಾರದಲ್ಲಿ ಪೂಜೆ ನೆರವೇರಿತು. ಈ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು.
7ನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನನಿಗೆ ಎಡಬಲದಲ್ಲಿ ವರಲಕ್ಷ್ಮಿ ಹಾಗೂ ಕಾವೇರಿ ಸಾಥ್ ನೀಡಲಿದ್ದಾರೆ. ಅಲ್ಲದೆ, ಜಂಬೂ ಸವಾರಿಯಲ್ಲಿ ಮುಂಚೂಣಿಯಲ್ಲಿ ಬಲರಾಮ ಹೆಜ್ಜೆ ಹಾಕಲಿದ್ದು, ಅಭಿಮನ್ಯು, ನೌಫತ್ ಆನೆ ಸೇರಿದಂತೆ ಇನ್ನುಳಿದ ಆನೆಗಳನ್ನು ಸಾಲಾನೆಗಳಾಗಿ ಬಳಸಲಾಗುತ್ತಿದೆ. ಜಂಬೂಸವಾರಿ ಹಿಂದೆ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಲಿದ್ದು, ಈ ಬಾರಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡಿವೆ.
ಸ್ತಬ್ಧ ಚಿತ್ರಗಳ ಪಟ್ಟಿ (ಜಿಲ್ಲೆ ಅಥವಾ ಇಲಾಖೆ-ಸ್ತಬ್ಧ ಚಿತ್ರದ ಮಾದರಿ)
1. ಬಾಗಲಕೋಟೆ- ಕೂಡಲ ಸಂಗಮ
2. ಬೆಂಗಳೂರು ಗ್ರಾ.- ಘಾಟಿ ಸುಬ್ರಹ್ಮಣೇಶ್ವರ ದೇವಾಲಯ
3. ಬೆಂಗಳೂರು ನ.- ಘನತ್ಯಾಜ್ಯ ವಸ್ತುಗಳ ವಿಲೇವಾರಿ
4. ಎನ್​ಸಿಸಿ- ಪ್ರವಾಹ ಸಂತ್ರಸ್ತರಿಗೆ ನೆರವು ಮತ್ತು ಕ್ರೀಡೆಗಳು
5. ಉನ್ನತ ಶಿಕ್ಷಣ ಇಲಾಖೆ- ವಿದ್ಯಾನಿಲಯಗಳು ನಡೆದು ಬಂದ ದಾರಿ
6. ಬೆಳಗಾವಿ- ಕಿತ್ತೂರಿನ ವೈಭವ
7. ಬಳ್ಳಾರಿ- ತುಂಗಭದ್ರಾ ಜಲಾಶಯ
6. ಬೀದರ್- ಅನುಭವ ಮಂಟಪ
9. ಪ್ರವಾಸೋದ್ಯಮ ಇಲಾಖೆ- ಒಂದು ರಾಜ್ಯ ಹಲವು ಜಗತ್ತು
10. ವಿಜಯಪುರ- ಗೋಲ್ ಗುಂಬಜ್
11. ಚಾಮರಾಜನಗರ- ಅರಣ್ಯ ಸಂಪತ್ತಿನೊಳಗೆ ಆಧ್ಯಾತ್ಮಿಕ ಕ್ಷೇತ್ರಗಳು
12. ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಕರ್ನಾಟಕದ ನವರತ್ನಗಳು
13. ಚಿತ್ರದುರ್ಗ-  ಶ್ರೀಗುರು ತಿಪ್ಪೇಸ್ವಾಮಿ ಅವರ ನಾಯಕಹಟ್ಟಿ ಪುಣ್ಯಕ್ಷೇತ್ರ
14. ಚಿಕ್ಕಮಗಳೂರು- ಭೂತಾಯಿ ಕಾಫಿಕನ್ಯೆ
15. – ವಿದುರಾಶ್ವತ್ಥ ಪುಣ್ಯಕ್ಷೇತ್ರ
16. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ- ಕಾನೂನು ಸೇವೆಗಳು
17. ದಾವಣಗೆರೆ- ಸ್ಮಾರ್ಟ್ ಸಿಟಿ
18. ದಕ್ಷಣ ಕನ್ನಡ- ಕೋಟೆ ಚನ್ನಯ್ಯ ತುಳುನಾಡ ವೀರರು
19. ಧಾರವಾಡ- ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ
20. ವಾರ್ತಾ ಇಲಾಖೆ- ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
21. ಗದಗ- ಮರಗಳ ಮರುನೆಡುವಿಕೆ
22. ಕಲಬುರ್ಗಿ- ಕಲಬುರ್ಗಿ ವಿಮಾನ ನಿಲ್ದಾಣ
23. ಹಾಸನ- ಹೊಯ್ಸಳ ನಾಡಿನ ಬೇಲೂರ ಶಿಲ್ಪಗಳು 900ರ ಸಂಭ್ರಮ
24. ಕಾವೇರಿ ನೀರಾವರಿ ನಿಗಮ- ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುತ್ತದೆ
25. ಹಾವೇರಿ- ರಾಣೆ ಬೆನ್ನೂರು ಕೃಷ್ಣಮೃಗ ಅಭಯಾರಣ್ಯ
26. ಕೋಲಾರ- ಜಿಲ್ಲಾ ಪಂಚಾಯಿತಿ ನಡೆ ಗ್ರಾಮದ ಅಭಿವೃದ್ಧಿ ಕಡೆ
27. ಕೊಪ್ಪಳ-  ಶ್ರೀ ಕನಕಾಚಲ ದೇವಾಲಯ
28. ಮೈಸೂರು ಜಿಲ್ಲಾ ಸ್ವೀಪ್ ಸಮಿತಿ- ನಮ್ಮ ಮತ ನಮ್ಮ ಹಕ್ಕು
29. ಮಂಡ್ಯ- ಮಂಡ್ಯ ಜಿಲ್ಲೆಗೆ ನಾಲ್ವಡಿ ಅವರ ಕೊಡುಗೆ
30. ಮೈಸೂರು- ಗೋಲ್ಡನ್ ಟೆಂಪಲ್
31. ರಾಯಚೂರು- ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ
32. ರಾಮನಗರ- ಕರಕುಶಲ ಇತಿಹಾಸಗಳ ಸಂಗಮ
33. ಶಿವಮೊಗ್ಗ- ಬಿದನೂರು ಶಿವಪ್ಪನಾಯಕ ಸಾಧನೆ
34. ತುಮಕೂರು- ಶತಮಾನದ ಸಂತ ಶ್ರೀ ಶಿವಕುಮಾರಸ್ವಾಮೀಜಿ
35. ಸ್ತಬ್ಧಚಿತ್ರ ಉಪಸಮಿತಿ- ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಿಕೇಂದ್ರೀಕರಣ
36. ಉಡುಪಿ- ಪರಶುರಾಮ ಸೃಷ್ಟಿಯ ತುಳುನಾಡು
37. ಉತ್ತರ ಕನ್ನಡ- ಸಿದ್ದಿ ಜನಾಂಗ ಮತ್ತು ಯಾಣ
38, ಯಾದಗಿರಿ- ಬಂಜಾರ ಸಂಸ್ಕೃತಿ
39. ಆರೋಗ್ಯ ಇಲಾಖೆ- ಆರೋಗ್ಯ ಸೇವೆಗಳು
40. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- ಇಲಾಖಾ ಕಾರ್ಯಕ್ರಮಗಳು
41. ಶಿಕ್ಷಣ ಇಲಾಖೆ- ಇಲಾಖಾ ಕಾರ್ಯಕ್ರಮಗಳು
42. ಕೊಡಗು- ಪ್ರವಾಸೋದ್ಯಮ