ಮುಡಾದಿಂದ 50 ಕೋಟಿ ರೂ. ಮೌಲ್ಯದ ಆಸ್ತಿ ವಶ

blank

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಒತ್ತುವರಿ, ಅನಧಿಕೃತ ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಶುಕ್ರವಾರ ದಟ್ಟಗಳ್ಳಿ ಗ್ರಾಮದ ಸರ್ವೇ ನಂ.26/1ಬಿ ರಲ್ಲಿ(ರಾಮಕೃಷ್ಣನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ) ಒತ್ತುವರಿಯನ್ನು ತೆರವುಗೊಳಿಸಿ ಸುಮಾರು 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ.


ದಟ್ಟಗಳ್ಳಿ ಸರ್ವೇ ನಂ.26/1ಬಿರಲ್ಲಿ 1.27 ಎಕರೆ ಮತ್ತು 22/3ರಲ್ಲಿ 23 ಗುಂಟೆ ಸೇರಿದಂತೆ ಒಟ್ಟು 2.07 ಎಕರೆ ಭೂಮಿಯನ್ನು ದಟ್ಟಗಳ್ಳಿ 1ನೇ ಹಂತ ಬಡಾವಣೆಗಾಗಿ 1983-85ನೇ ಸಾಲಿನಲ್ಲಿ ಅಧಿಸೂಚನೆ ಮಾಡಿ ಅವಾರ್ಡ್ ರಚಿಸಿ ಭೂ ಪರಿಹಾರ ವಿತರಿಸಲಾಗಿತ್ತು.


ಮೂಲ ಮಾಲೀಕರಾದ ನಾರಾಯಣ ಮತ್ತು ಇತರರು ಭೂ ಪರಿಹಾರ ಪಡೆದಿರುತ್ತಾರೆ. ಆದರೆ ಸದರಿ ಭೂ ಮಾಲೀಕರಿಂದ ನೋಂದಾಯಿಸುವ ಛಾಪಾ ಕಾಗದಲ್ಲಿ 20*30 ಅಡಿ ಅಳತೆಯ ನಿವಶೇನಗಳನ್ನು ಖರೀದಿಸಿರುವುದಾಗಿ ಸುಮಾರು 42 ಜನರು ಅನಧಿಕೃತವಾಗಿ ಸದರಿ ಭೂಮಿಯಲ್ಲಿ ತಾತ್ಕಾಲಿಕ ಶೆಡ್ಡುಗಳನ್ನು ರಚಿಸಿ ವಾಸದ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಿರುತ್ತಾರೆ. ಪ್ರಶ್ನಿತ ಸ್ವತ್ತನ್ನು ದಾಖಲೆಗಳ ಆಧಾರದ ಮೇಲೆ ಪ್ರಾಧಿಕಾರದ ಸ್ವತ್ತೆಂದು ಪರಿಗಣಿಸಿ ಆಯುಕ್ತರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿ ಶೆಡ್ಡುಗಳು ಮತ್ತು ಡೆಬ್ರಿಸ್ ತೆರವು ಮಾಡಲಾಗಿದೆ.


ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ತೆರವು ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಮುಡಾ ಅಧೀಕ್ಷಕ ಇಂಜಿನಿಯರ್, ಭೂ ಸ್ವಾಧೀನಾಧಿಕಾರಿ, ಕಾರ್ಯಪಾಲಕ ಇಂಜಿನಿಯರ್, ವಲಯಾಧಿಕಾರಿ ಸೇರಿದಂತೆ 35 ಸಿಬ್ಬಂದಿ ಹಾಜರಿದ್ದರು. ಕುವೆಂಪುನಗರ, ಸರಸ್ವತಿಪುರಂ ಹಾಗೂ ಲಕ್ಷ್ಮೀಪುರಂ ಠಾಣಾ ಪೊಲೀಸರ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.


ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರಿಗೆಲ್ಲ ಮುಡಾ ವತಿಯಿಂದ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಅಲ್ಲದೆ, ತೆರವು ಕಾರ್ಯಾಚರಣೆ ಸಂಬಂಧ ಗುರುವಾರ ರಾತ್ರಿಯೂ ಮಾಹಿತಿ ನೀಡಲಾಗಿತ್ತು.

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…