23.2 C
Bangalore
Saturday, December 14, 2019

ವೃತ್ತಿಪರ ಗ್ಯಾಂಗ್‌ನ ಕೈವಾಡ ಶಂಕೆ

Latest News

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಮೆಟ್ರೋಗೆ ಹಾರಿ ಗಂಡ ಮೃತಪಟ್ಟ ಒಂದು ಗಂಟೆಯಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡ ಹೆಂಡತಿ, ಮಗಳು!

ನವದೆಹಲಿ: ಗಂಡ ಮೆಟ್ರೋಗೆ ಹಾರಿ ಮೃತಪಟ್ಟ ಗಂಟೆಯೊಳಗೆ ಮನೆಯಲ್ಲಿ ಹೆಂಡತಿ ಮತ್ತು ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ದೆಹಲಿಯ ಜವಹರ ಲಾಲ್​ ನೆಹರು ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ...

ಮೈಸೂರು: ಬೆಚ್ಚಿಬೀಳಿಸಿರುವ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ಹಿಂದೆ ವೃತ್ತಿಪರ ಗ್ಯಾಂಗ್‌ನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಬನ್ನಿಮಂಟಪದ ಬಾಲಭವನದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಮದುವೆಯ ಆರತಕ್ಷತೆ(ವಲಿಮಾ) ಸಮಾರಂಭದಲ್ಲಿ ಶಾಸಕರನ್ನು ಕೊಲ್ಲಲು ಯತ್ನಿಸಿರುವುದು ಆಘಾತ ಉಂಟು ಮಾಡಿದೆ. ವೇದಿಕೆ ಮುಂಭಾಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದ ವೇಳೆಯೇ ಯುವಕನೊಬ್ಬ ನಿರ್ಭಯವಾಗಿ ಹರಿತವಾದ ಆಯುಧದಿಂದ ಕುತ್ತಿಗೆಯನ್ನು ಬಲವಾಗಿ ಕೊಚ್ಚಿದ್ದು, ಆತಂಕವನ್ನು ಸೃಷ್ಟಿಸಿದೆ.

ತನ್ವೀರ್ ಪ್ರತಿನಿಧಿಸುವ ಎನ್.ಆರ್.ಕ್ಷೇತ್ರದ ಗೌಸಿಯಾನಗರದ ನಿವಾಸಿ ಫರಾನ್(25) ಎಂಬಾತನೇ ರಾಜಾರೋಷವಾಗಿ ಈ ದುಷ್ಕೃತ ಎಸಗಿದ್ದಾನೆ. ತನ್ವೀರ್ ಅವರ ಎದುರು ಬಂದು ಅಂಗಿಯ ಒಳಗೆ ಇಟ್ಟುಕೊಂಡಿದ್ದ ಕತ್ತಿಯ ಮಾದರಿಯ ಆಯುಧವನ್ನು ಹೊರತೆಗೆದು ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ದೃಶ್ಯ ಇದೀಗ ವೈರಲ್ ಆಗಿದೆ.

ಸಾವಿರಾರು ಜನರ ಸಮ್ಮುಖದಲ್ಲೇ ಶಾಸಕರ ಮೇಲೆ ಕೊಲೆ ಯತ್ನ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಅದಕ್ಕೆ ಬಹಳಷ್ಟು ಧೈರ್ಯ ಇರಲೇ ಬೇಕು. ಅದರಲ್ಲೂ ಕ್ಷಣಮಾತ್ರದಲ್ಲಿ ಈ ಕೃತ್ಯ ಎಸಗಲು ನಿಪುಣತೆ ಬೇಕು. ಹೀಗಾಗಿ, ವೃತ್ತಿಪರ ಕ್ರಿಮಿನಲ್ ಗ್ಯಾಂಗ್ ಈ ಪ್ರಕರಣದ ಹಿಂದೆ ಕೆಲಸ ಮಾಡಿದೆ. ಯಾವ ಭಾಗಕ್ಕೆ ಒಡೆದರೆ ಜೀವ ಹೋಗಲಿದೆ ಎಂಬ ಮಾಹಿತಿ ಅರಿತುಕೊಂಡೆ ದಾಳಿ ಮಾಡಿದ್ದು, ಮೆದುಳು ಮತ್ತು ಹೃದಯಕ್ಕೆ ಸಂಪರ್ಕ ಕಲ್ಪಿಸುವ ಸೂಕ್ಷ್ಮವಾದ ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಕೊಚ್ಚಿದ್ದಾರೆ. ಇಂತಹ ಕೃತ್ಯವನ್ನು ತರಬೇತಿ ಪಡೆದವರೆ ಮಾಡಲು ಸಾಧ್ಯ ಎಂಬ ಶಂಕೆ ವ್ಯಕ್ತವಾಗಿದೆ.

2016ರ ಮಾರ್ಚ್‌ನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದ ಮಾದರಿಯಲ್ಲೇ ಇದು ನಡೆದಿದೆ. ಬೆಳಗ್ಗೆ ಟೀ ಅಂಗಡಿ ಎದುರು ಕುಳಿತಿದ್ದ ರಾಜುನನ್ನು ಹಿಂಬದಿಯಿಂದ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಮುಂಭಾಗದಿಂದ ಕುತ್ತಿಗೆಗೆ ತೆಂಗಿನ ಕಾಯಿಯನ್ನು ಕೊಚ್ಚಿದಂತೆ ಕೊಚ್ಚಲಾಗಿದೆ. ಹೀಗಾಗಿ, ಉಭಯ ಘಟನೆಗಳ ನಡುವೆ ಸಾಮ್ಯತೆ ಇದ್ದು, ವೃತ್ತಿಪರ ಗ್ಯಾಂಗ್ ಕೈವಾಡ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಪ್ರಕರಣದ ಹಿಂದೆ ಒಬ್ಬ ವ್ಯಕ್ತಿ ಇಲ್ಲ. ಸಂಘಟನೆ ಇದೆ ಎಂಬ ಶಂಕೆಯೂ ಇದೆ. ಘಟನಾ ಸ್ಥಳಕ್ಕೆ ಆರೋಪಿಯೊಂದಿಗೆ ಇನ್ನೊಬ್ಬ ಕೂಡ ಬಂದಿದ್ದ. ಸೂಕ್ತ ಸಮಯಕ್ಕಾಗಿ ಕಾದು ದಾಳಿ ಮಾಡಿ ತಪ್ಪಿಸಿಕೊಳ್ಳಲು ಹೊಂಚು ಹಾಕಿದ್ದರು. ಇದಕ್ಕೆ ಸಹಾಯ ಮಾಡಲು ಹೊರಗಡೆ ಕಾರಿನಲ್ಲಿ ಮೂವರು ಕಾಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ಸಂಘಟನೆಯೊಂದು ಶಾಮೀಲಾಗಿರುವ ಹಿನ್ನೆಲೆಯಲ್ಲಿ ರಹಸ್ಯ ಸ್ಥಳದಲ್ಲಿ ಆರೋಪಿಯನ್ನು ಇರಿಸಿರುವ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಫರಾನ್ ಸಂಘಟನೆಯೊಂದರ ಕಾರ್ಯಕರ್ತ. ರಾಜು ಕೊಲೆ ಆರೋಪಿಗಳ ಮನೆಯ ಆಸುಪಾಸಿನಲ್ಲೇ ಇವರ ಮನೆ ಇದೆ ಎಂಬ ಮಾಹಿತಿ ಇದ್ದು, ಇವರ ತಂದೆ ಕರಕುಶಲಕರ್ಮಿ. ನಾಲ್ವರು ಮಕ್ಕಳಲ್ಲಿ ಈತನೇ ಕೊನೆಯವನು. ತಂದೆಯೊಂದಿಗೆ ಇದೇ ಕೆಲಸ ಮಾಡಿಕೊಂಡಿದ್ದ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸ್ಥಳೀಯ ಮುಖಂಡರು ಇರುವ ಫ್ಲೆಕ್ಸ್‌ನಲ್ಲಿ ಈತನ ಭಾವಚಿತ್ರವೂ ಇದೆ ಎಂಬುದು ಅಚ್ಚರಿ…!

ನಿಖರ ಕಾರಣ ತಿಳಿದಿಲ್ಲ: ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಅನೇಕ ವದಂತಿಗಳು ಎದ್ದಿವೆ. ಇದನ್ನು ನಿವಾರಿಸಲು ಮುಂದಾಗದ ಪೊಲೀಸರು, ತನಿಖೆ ದೃಷ್ಟಿಯಿಂದ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ‘ಕೆಲಸ ಕೊಡಿಸಿಲ್ಲ. ಕ್ಷೇತ್ರಕ್ಕೂ ಮತ್ತು ಸಮುದಾಯಕ್ಕೆ ಏನೂಕೆಲಸ ಮಾಡಿಲ್ಲ. ಅದಕ್ಕೆ ಹೀಗೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಇದಕ್ಕೆ ಬೇರೆ ಬಲವಾದ ಕಾರಣವಿರುವ ಹಿನ್ನೆಲೆ ವಿವಿಧ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

3 ಬಾರಿ ಸಂಚು ವಿಫಲ: ಈ ಹಿಂದೆಯೂ ಮೂರು ಬಾರಿ ದಾಳಿ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ, ಅದರಲ್ಲಿ ಯಶಸ್ವಿಯಾಗಿರಲಿಲ್ಲ ಎನ್ನಲಾಗಿದೆ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮೂರು ದಿನಗಳ ಹಿಂದೆ ಸೈಯದ್ ಯೂನಸ್ ಅವರ ಮಗಳ ಮದುವೆಯಾಗಿತ್ತು. ಭಾನುವಾರ ರಾತ್ರಿ ಅವರ ಆರತಕ್ಷತೆ ನಿಗದಿಯಾಗಿತ್ತು. ಸೈಯದ್ ಯೂನಸ್ ಅವರೊಂದಿಗೆ ಬಹಳ ಆತ್ಮೀಯರಾಗಿರುವ ತನ್ವೀರ್ ಇಲ್ಲಿಗೆ ಬರುವುದನ್ನು ಅರಿತು ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಜತೆಗಿದ್ದ ಗನ್‌ಮ್ಯಾನ್: ಬೆದರಿಕೆ ಹಿನ್ನೆಲೆಯಲ್ಲಿ ಇವರಿಗೆ ಪೊಲೀಸ್ ಇಲಾಖೆಯಿಂದ ಗನ್‌ಮ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಈ ಘಟನೆ ವೇಳೆ ಶಾಸಕರ ಹಿಂಭಾಗದಲ್ಲೇ ಗನ್‌ಮ್ಯಾನ್ ಕುಳಿತಿದ್ದ. ಆದರೂ ದಾಳಿ ತಪ್ಪಿಸಲು ಆಗಿಲ್ಲ ಎಂಬುದು ಅಚ್ಚರಿ.

 

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...