ವ್ಯವಸ್ಥಿತವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮೈಸೂರು: ರಾಜ್ಯಾದ್ಯಂತ ಗುರುವಾರ ಆರಂಭಗೊಂಡ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯ 138 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನಡೆದಿದ್ದು, ಯಾವುದೇ ವಿದ್ಯಾರ್ಥಿ ಡಿಬಾರ್ ಆದ ಬಗ್ಗೆ ವರದಿಯಾಗಿಲ್ಲ.

ಮೊದಲದಿನ ನಡೆದ ಪ್ರಥಮ ಭಾಷೆ ಕನ್ನಡ/ಉರ್ದು/ ಇಂಗ್ಲಿಷ್ ವಿಷಯ ಪರೀಕ್ಷೆಯನ್ನು 39,903 ವಿದ್ಯಾರ್ಥಿಗಳ ಪೈಕಿ 36,582 ವಿದ್ಯಾರ್ಥಿಗಳು ಬರೆದಿದ್ದಾರೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದ್ದು, ಜಿಲ್ಲಾದ್ಯಂತ ಯಾವುದೇ ಅಕ್ರಮ ನಡೆದಿಲ್ಲ ಎಂದು ಡಿಡಿಪಿಐ ಪಾಂಡುರಂಗ ‘ವಿಜಯವಾಣಿ’ಗೆ ತಿಳಿಸಿದ್ದಾರೆ.