ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಂಶೋಧನೆಗೆ ಮುಂದಾಗಬೇಕು ಎಂದು ದಕ್ಷಿಣ ಕೋರಿಯಾದ ಜೆಬಿಎನ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಪ್ರೊ.ಜೂಂಗ್ ಹೀ ಲೀ ಹೇಳಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಅಡ್ವಾನ್ಸ್ಡ್ ಮೆಟೀರಿಯಲ್ಸ್ ಆ್ಯಂಡ್ ಟೆಕ್ನಾಲಜಿ’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಬೆಲೆಯಿದ್ದು, ಅದನ್ನು ಅರಿತು ಕೆಲಸ ಮಾಡಬೇಕು. ಜತೆಗೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಕೂಡ ಪರಿಷ್ಕೃತಗೊಳ್ಳುತ್ತದೆ. ಅದಕ್ಕೆ ಹೊಂದಿಕೊಂಡು ಹೋದಾಗ ಮಾತ್ರ ನವ ವಿಷಯ ಕಲಿಯಲು ಸಾಧ್ಯ. ಇದರಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಕುಲಸಚಿವ ಡಾ.ಕೆ.ಎಸ್.ಲೋಕೇಶ್, ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ಡಾ.ಸುಮಂದ ಭಂಡೋಪಾಧ್ಯಾಯ, ಡಾ.ಸಿ.ಜಿ.ಬೆಟಸೂರಮಠ್, ಡಾ.ಸಿದ್ದರಾಮಯ್ಯ, ಡಾ.ಟಿ.ಎನ್.ನಾಗಭೂಷಣ್, ಡಾ.ಪ್ರಭುಸ್ವಾಮಿ, ಜಿ.ಕೆ.ಚಂದ್ರಶೇಖರಪ್ಪ ಇನ್ನಿತರರು ಪಾಲ್ಗೊಂಡಿದ್ದರು.