ಮೈಸೂರು: ಸಿದ್ಧಗಂಗಾ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಪ್ರಮುಖ ಪ್ರವಾಸಿ ತಾಣ ಅರಮನೆ ಬಂದ್ ಆಗಿತ್ತು.
ಹೊರ ರಾಜ್ಯ, ವಿದೇಶದಿಂದ ಸಾಕಷ್ಟು ಪ್ರವಾಸಿಗರು ಅರಮನೆಗೆ ಆಗಮಿಸಿದರು. ಆದರೆ, ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಅರಮನೆ ಬಂದ್ ಆಗಿರುವ ವಿಚಾರ ತಿಳಿದು ನಿರಾಶೆಯಿಂದ ತೆರಳಿದರು. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಅರಮನೆ ಆವರಣದಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು.