ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ

ಮೈಸೂರು: ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಪ್ರಾರ್ಥಿಸಿ ಡಿಟಿಎಸ್ ಫೌಂಡೇಷನ್‌ನಿಂದ ನಗರದ ರಾಮಾನುಜ ರಸ್ತೆಯಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಫೌಂಡೇಶನ್ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ನರೇಂದ್ರಮೋದಿ ಅವರ 5 ವರ್ಷದ ಆಡಳಿತ ಜನ ಸಾಮಾನ್ಯರಿಗೆ ಅತ್ಯಂತ ತೃಪ್ತಿದಾಯಕವಾಗಿದೆ. ಮೋದಿ ಪ್ರಧಾನಮಂತ್ರಿಯಾಗಿ ಸುಭದ್ರ ಸರ್ಕಾರ ನೀಡಿ ದೇಶವನ್ನು ಮುನ್ನೆಡೆಸಿ ವಿಶ್ವದಲ್ಲೇ ನಂ.1 ಆಗಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಮುಂದಿನ ಅವಧಿಗೂ ಮೋದಿಯವರೇ ಪ್ರಧಾನಿಯಾಗಬೇಕು. ನಾವು ಅವರ ಮುಂದಾಳತ್ವವನ್ನು ಮೆಚ್ಚಿಕೊಂಡು ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ಈ ಪೂಜೆ ಮಾಡಿದ್ದೇವೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಪರಿಸರಕ್ಕೆ ಹಾನಿಕರವಾಗುವಂತೆ ಪಟಾಕಿ ಹಚ್ಚದೇ ಸಿಹಿ ವಿತರಣೆ ಮಾಡಿ ಸಂಭ್ರಮ ಆಚರಿಸಬೇಕು ಎಂದು ಎಲ್ಲ ಪಕ್ಷಗಳ ಕಾರ್ಯಕರ್ತರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಕಡಕೊಳ ಜಗದೀಶ್ ಮಾತನಾಡಿ, ನರೇಂದ್ರ ಮೋದಿ ಗೆಲುವು ಸಾಧಿಸುತ್ತಿರುವಂತೆಯೇ ವಿಜಯೋತ್ಸವಕ್ಕೆ ನಾವೆಲ್ಲಾ ಸಿದ್ಧರಾಗುತ್ತಿದ್ದು, ಗುರುವಾರ ಚಾಮುಂಡಿ ಬೆಟ್ಟದಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುವುದಾಗಿ ಹೇಳಿದರು.

ಮುಖಂಡರಾದ ಜಯಸಿಂಹ ಶ್ರೀಧರ್, ಆನಂದ್, ಲೋಹಿತ್, ಗೈಡ್ ಚಂದ್ರು, ಕನ್ನಡ ಚಂದ್ರು, ಮೈ.ಲಾ. ವಿಜಯಕುಮಾರ್, ಅಪೂರ್ವಸುರೇಶ್, ಪ್ರಶಾಂತ ಭಾರದ್ವಾಜ್, ಚಕ್ರಪಾಣಿ, ಸುಚೀಂದ್ರ, ಕೌಂಡಿಣ್ಯ ಇತರರು ಹಾಜರಿದ್ದರು.