ಕಣ್ಮನ ಸೆಳೆದ ಸ್ತಬ್ಧಚಿತ್ರಗಳು

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸಿರಿವಂತಿಕೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಮೆರವಣಿಗೆ ಎಲ್ಲರ ಕಣ್ಮನ ತಣಿಸಿತು. ಈ ಬಾರಿ ಪ್ರಕೃತಿ, ದೇವಸ್ಥಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಹೆಚ್ಚಿನ ಸ್ತಬ್ಧಚಿತ್ರಗಳು ಗಮನಸೆಳೆದವು.
ಬಾಗಲಕೋಟೆ ಜಿಲ್ಲೆ- ‘ಪಟ್ಟದಕಲ್ಲು-ಕಾಯಕವೇ ಕೈಲಾಸ-ಕೂಡಲಸಂಗಮ’, ಬೆಂಗಳೂರು ಗ್ರಾಮಾಂತರ-‘ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಮತ್ತು ದೇವನಹಳ್ಳಿ ಕೋಟೆ’, ಬೆಂಗಳೂರು ನಗರ-‘ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ’, ಬೆಳಗಾವಿ- ‘ಕಿತ್ತೂರಿನ ವೈಭವ’, ಬೀದರ್-‘ಅನುಭವ ಮಂಟಪ ಬಸವಕಲ್ಯಾಣ’, ವಿಜಯಪುರ- ಗೋಲ್‌ಗುಂಬಜ್, ಚಿತ್ರದುರ್ಗ-‘ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ ಪುಣ್ಯಕ್ಷೇತ್ರ’, ಚಿಕ್ಕಬಳ್ಳಾಪುರ- ‘ವಿದುರಾಶ್ವತ್ಥ ಪುಣ್ಯಕ್ಷೇತ್ರ’ ಸ್ತಬ್ಧಚಿತ್ರ ಜನರನ್ನು ಆಕರ್ಷಿಸಿತು.
ದಾವಣಗೆರೆ- ‘ಸ್ಮಾರ್ಟ್ ಸಿಟಿಯತ್ತ ದಾವಣಗೆರೆ’, ದಕ್ಷಿಣ ಕನ್ನಡ ಜಿಲ್ಲೆ- ‘ಕೋಟಿ ಚೆನ್ನಯ ತುಳುನಾಡ ವೀರರು’, ಧಾರವಾಡ- ‘ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ’, ಕಲಬುರಗಿ- ‘ಕಲಬುರಗಿ ವಿಮಾನ ನಿಲ್ದಾಣ’, ಹಾಸನ-‘ಹೊಯ್ಸಳ ನಾಡಿನ ಬೇಲೂರು ಶಿಲ್ಪಿಗಳ 900ರ ಸಂಭ್ರಮ’, ಕೋಲಾರ- ‘ಜಿಲ್ಲಾ ಪಂಚಾಯಿತಿ ನಡೆ ಗ್ರಾಮದ ಅಭಿವೃದ್ಧಿ ಕಡೆ’, ಕೊಪ್ಪಳ- ಶ್ರೀಕನಕಾಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ’, ಮಂಡ್ಯ- ‘ಜಿಲ್ಲೆಯ ನಾಲ್ವಡಿಯವರ ಪ್ರಮುಖ ಕೊಡುಗೆ’, ಮೈಸೂರು- ‘ಗೋಲ್ಡನ್ ಟೆಂಪಲ್’, ರಾಯಚೂರು-‘ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ’, ಉತ್ತರ ಕನ್ನಡ ಜಿಲ್ಲೆ- ‘ಸಿದ್ಧಿ ಜನಾಂಗ ಹಾಗೂ ಪ್ರವಾಸಿ ತಾಣ ಯಾಣ’, ಯಾದಗಿರಿ- ‘ಬಂಜಾರ್ ಸಂಸ್ಕೃತಿ’, ಕೊಡಗು- ‘ಪ್ರವಾಸಿ ಜಿಲ್ಲೆ ಕೊಡಗು’ ಸ್ತಬ್ಧಚಿತ್ರಗಳು ಗಮನ ಸೆಳೆದವು.
ರಾಮನಗರ-‘ಭಕ್ತಿ-ನಂಬಿಕೆ ಕರುಕುಶಲ ಇತಿಹಾಸಗಳ ಸಂಗಮ’, ಚಾಮರಾಜನಗರ- ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು, ಚಿಕ್ಕಮಗಳೂರು-‘ಭೂತಾಯಿ ಕಾಫಿ ಕನ್ಯೆ’, ಗದಗ- ‘ಮರಗಳ ಮರುನೆಡುವಿಕೆ’, ಹಾವೇರಿ- ‘ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಮತ್ತು ಬಂಕಾಪುರ ನವಿಲು ಧಾಮ’, ಬಳ್ಳಾರಿ- ‘ತುಂಗಭದ್ರ ಜಲಾಶಯ’, ಶಿವಮೊಗ್ಗ- ‘ಬಿದನೂರು ಶಿವಪ್ಪನಾಯಕ ಸಾಧನೆ’, ತುಮಕೂರು- ‘ಶತಮಾನ ಕಂಡ ಮಹಾಸಂತ ಡಾ.ಶ್ರೀ ಶಿವಕುಮಾರ ಸ್ವಾಮೀಜಿ’, ಉಡುಪಿ- ‘ಪರಶುರಾಮ ಸೃಷ್ಟಿ ತುಳುನಾಡು’ ಸ್ತಬ್ಧಚಿತ್ರಗಳು ಜನಾಕರ್ಷಿದವು.
ಉನ್ನತ ಶಿಕ್ಷಣ ಇಲಾಖೆಯಿಂದ ‘ವಿದ್ಯಾಲಯಗಳು ನಡೆದುಬಂದ ದಾರಿ’, ಪ್ರವಾಸೋದ್ಯಮ ಇಲಾಖೆ- ‘ಒಂದು ರಾಜ್ಯ ಹಲವು ಜಗತ್ತು’, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಕರ್ನಾಟಕದ ನವರತ್ನಗಳು’, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ-‘ಕಾನೂನು ಸೇವೆಗಳು’, ವಾರ್ತಾ ಇಲಾಖೆ- ‘ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ’, ಜಿಲ್ಲಾ ಸ್ವೀಪ್ ಸಮಿತಿ- ‘ನಮ್ಮ ಮತ ನಮ್ಮ ಹಕ್ಕು’, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ‘ಆರೋಗ್ಯ ಇಲಾಖೆಯ ಸೇವೆಗಳು’, ಕಾವೇರಿ ನೀರಾವರಿ ನಿಗಮ-‘ನಾವು ಜಲವನ್ನು ಉಳಿಸಿದರೆ -ಜಲವು ನಮ್ಮನ್ನು ಉಳಿಸುವುದು’, ಸ್ತಬ್ಧಚಿತ್ರ ಉಪ ಸಮಿತಿ-‘ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಆಡಳಿತ ವಿಕೇಂದ್ರಿಕರಣ’, ಎನ್‌ಸಿಸಿಯಿಂದ ‘ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಕ್ರೀಡೆಗಳು’, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ- ‘ಇಲಾಖೆ ಕಾರ್ಯಕ್ರಮಗಳು’, ಶಿಕ್ಷಣ ಇಲಾಖೆ ‘ಇಲಾಖಾ ಕಾರ್ಯಕ್ರಮಗಳು’ ಸ್ತಬ್ಧಚಿತ್ರಗಳು ಗಮನ ಸೆಳೆಯಿತು.