More

    ಮೈಸೂರು ಮಾಗಿ ಉತ್ಸವಕ್ಕೆ ತೆರೆ

    ಮೈಸೂರು: ಹೊಸ ವರ್ಷಾಚರಣೆಯ ಸಂಭ್ರಮವನ್ನು ಇಮ್ಮಡಿಗೊಳಿಸಿ ರಸದೌತಣ ಉಣಬಡಿಸಿದ ‘ಮೈಸೂರು ಮಾಗಿ ಉತ್ಸವ’ ಗುರುವಾರ ಸಂಜೆ ಸಡಗರದೊಂದಿಗೆ ಸಂಪನ್ನಗೊಂಡಿತು.
    ಡಿ.24ರಂದು ಶುರುವಾಗಿದ್ದ ಉತ್ಸವವು 10 ದಿನಗಳ ಕಾಲ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಭರಪೂರ ಮನರಂಜನೆ ಒದಗಿಸಿತು. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಉತ್ಸವ ದಸರಾ ಹಬ್ಬದಂತೆ ಪ್ರವಾಸಿಗರನ್ನು ಆಕರ್ಷಿಸಲು ಯಶಸ್ಸಿಯಾಯಿತು.
    ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನದಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆದರೂ, ಪ್ರವಾಸಿಗರ ಮನರಂಜನೆಗೆ ಏನು ಭಂಗ ಬರಲಿಲ್ಲ. ಅರಮನೆಯ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
    ಮುಂದೂಡಿದ ಕಾರ್ಯಕ್ರಮವಾದ ಪೊಲೀಸ್ ವಾದ್ಯ ತಂಡದ ಸಂಗೀತ ಕಾರ್ಯಕ್ರಮ ಬುಧವಾರ ಅರಮನೆ ವೇದಿಕೆಯಲ್ಲಿ ಜರುಗಿತು. ಇದು ನೆರೆದಿದ್ದವರ ಮನಗೆದ್ದರೆ, ಬಳಿಕ ನಡೆದ ಶಬ್ದ ರಹಿತ ಪಟಾಕಿಗಳ ಪ್ರದರ್ಶನ ರಂಜಿಸಿತ್ತು.
    ಕೊನೆಯ ದಿನವಾದ ಗುರುವಾರ ಸಂಜೆ ಹರ್ಷಧ್ವನಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಗಾಯಕ ಹರ್ಷ, ಸರಿಗಮಪ ಮತ್ತು ಕನ್ನಡ ಕೋಗಿಲೆ ತಂಡದ ಸದಸ್ಯರು ವಿವಿಧ ಗೀತೆಗಳು ಹಾಡಿದರು. ಬಳಿಕ ಸ್ವಚ್ಛ ಭಾರತ ಸರ್ವೇಕ್ಷಣಾ ಕುರಿತು ಪಾಲಿಕೆಯ ವತಿಯಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಗೊಂಬೆ ಪ್ರದರ್ಶಿಸಿದ ಕಲಾವಿದರಿಗೆ ಸನ್ಮಾನಿಸಲಾಯಿತು. ಇದರೊಂದಿಗೆ ಮಾಗಿ ಉತ್ಸವ ತೆರೆಗೊಂಡಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts