21 C
Bengaluru
Wednesday, January 22, 2020

ಕೈ ಓಟದಲ್ಲಿ ನಡೆಯದ ಕಮಲದ ಆಟ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮೈಸೂರು: ಕಮಲ ಒಮ್ಮೆಯೂ ಮುನ್ನಡೆಗೆ ಬರಲಿಲ್ಲ. ಕೈನ ನಾಗಾಲೋಟ ಕೊನೆಯವರೆಗೂ ನಿಲ್ಲಲಿಲ್ಲ….!

ಹುಣಸೂರು ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಹುಣಸೂರು ಉಪ ಚುನಾವಣೆ ಮತ ಎಣಿಕೆಯಲ್ಲಿ ಕಂಡು ಬಂದ ಸಾರಾಂಶ ಇದು.

ಜಿದ್ದಾಜಿದ್ದಿನ ಜಂಗೀಕುಸ್ತಿಗೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ನಡುವೆ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿತ್ತು. ಗೆಲುವಿಗಾಗಿ ಇಬ್ಬರೂ ಕೊನೆಯವರೆಗೆ ಹೋರಾಟ ನಡೆಸಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಇದೆಲ್ಲ ಹುಸಿಯಾಗಿದೆ. ಇಬ್ಬರ ನಡುವಿನ ವಿಜಯಲಕ್ಷ್ಮಿ ಜುಗಲ್‌ಬಂಧಿ ನಡೆಯಲೇ ಇಲ್ಲ. ಬದಲಿಗೆ ಇಲ್ಲಿ ನಡೆದಿದ್ದು ಬರೀ ಕೈನ ಏಕಮುಖ ಹೋರಾಟವೇ.

‘ಗೆದ್ದೇ ಗೆಲ್ಲುತ್ತೇನೆ’ ಎಂದೇ ಬಿಂಬಿಸಿಕೊಂಡಿದ್ದ ವಿಶ್ವನಾಥ್, ಕಾಂಗ್ರೆಸ್ ಅಭ್ಯರ್ಥಿಗೆ ಸರಿಯಾಗಿ ಪೈಪೋಟಿ ನೀಡದೆ ದಯನೀಯ ಸೋಲು ಒಪ್ಪಿಕೊಂಡರು. ಅವರು ಒಮ್ಮೆಯೂ ಮುನ್ನಡೆಯನ್ನು ಸಾಧಿಸಲಿಲ್ಲ, ಅದರ ಹತ್ತಿರವೂ ಸುಳಿಯಲಿಲ್ಲ.

ಆದರೆ, ಅನಿರೀಕ್ಷಿತವಾಗಿ ಮಂಜುನಾಥ್ ಅವರು ಆರಂಭದಿಂದ ಆಕ್ರಮಣಕಾರಿಯಾಗಿ ಮುನ್ನುಗ್ಗಿದ್ದರು. ಮೊದಲಿನಿಂದ ಕೊನೆಯವರೆಗೆ ಮೊದಲ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ವಿಶ್ವನಾಥ್‌ಗಿಂತ ಕನಿಷ್ಠ 3 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರ ಕಾಯ್ದುಕೊಂಡ ಅವರು, 10 ಸಾವಿರ ಸಂಖ್ಯೆ ದಾಟಿ, 15, 20 ಸಾವಿರ ಎಲ್ಲೆ ಮೀರಿ ಕೊನೆಗೆ 39 ಸಾವಿರ ಮತಗಳ ಗಡಿಯನ್ನೂ ಮೀರಿ ಮುಂದೆ ಸಾಗಿದರು. ಹೀಗಾಗಿ, 3-4ನೇ ರೌಂಡ್‌ನ ಹೊತ್ತಿಗೆ ‘ನಾನೇ ಗೆಲ್ಲುವೆ’ ಎಂಬ ಸೂಚನೆ ರವಾನಿಸಿದರು.

ಆರಂಭದಿಂದಲೇ ಮುನ್ನಡೆ: ಮೊದಲ ಸುತ್ತಿನಲ್ಲಿಯೇ ವಿಶ್ವನಾಥ್ ಅವರನ್ನು ಹಿಂದಿಕ್ಕಿ ಮಂಜುನಾಥ್ 852 ಮತಗಳ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದರು. ಇಲ್ಲಿಂದ ಪ್ರಾರಂಭವಾದ ಅವರ ನಾಗಾಲೋಟ ಹಿಗ್ಗುತ್ತಲೇ ಸಾಗಿತು.

2ನೇ ಸುತ್ತಿನಲ್ಲಿ 3007 ಮತಗಳ ಅಂತರ ಕಾಯ್ದುಕೊಂಡರು. ಅವರು 3ನೇ ಸುತ್ತಿನಲ್ಲಿ ಮತಗಳ ಅಂತರ 4008ಗೆ ಹೆಚ್ಚಿಸಿಕೊಂಡರು. ನಂತರದ 4ನೇ ಸುತ್ತಿನಲ್ಲಿ ಈ ಅಂತರ 5393ಕ್ಕೆ ಏರಿಸಿಕೊಂಡರು. 5ನೇ ಸುತ್ತಿನ ಅಂತರ 7633 ಮತ ಹೆಚ್ಚಿಸಿಕೊಂಡ ಅವರು, ಜಯದತ್ತ ಮುಖ ಮಾಡಿದರು.

6, 7 ಮತ್ತು 8ನೇ ಸುತ್ತಿನಲ್ಲಿ 11 ಸಾವಿರ ಮತಗಳ ಗಡಿ ದಾಟಿದ ಮಂಜುನಾಥ್ ಮತ ಗಳಿಕೆಯಲ್ಲಿ ಅಲ್ಪಸ್ವಲ್ಪ ಏರಿಳಿತ ಕಂಡಿತು. ಆದರೆ, ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. 10ನೇ ಸುತ್ತಿಗೆ ಈ ಅಂತರ 17,998 ಮತಗಳಿಗೆ ಹೆಚ್ಚಿಸಿಕೊಂಡರು. ಬಳಿಕ ವಿಶ್ವನಾಥ್ ಓಟ ನಿಧಾನವಾಯಿತು, ಮಂಜುನಾಥ್ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು.

11ನೇ ಸುತ್ತಿನಲ್ಲಿ 19,395 ಮತಗಳು, 12ನೇ ಸುತ್ತಿನಲ್ಲಿ ಮತಗಳ ಅಂತರ 20821ಗೆ ಹಿಗ್ಗಿಸಿಕೊಂಡರು. ಆಗ ಮಂಜುನಾಥ್ 55,217 ಮತ ಗಳಿಸಿದ್ದರೆ, ವಿಶ್ವನಾಥ್ ಕೇವಲ 34396 ಮತ ಗಳಿಸಲು ಪ್ರಯಾಸಪಟ್ಟರು.

ಮತಗಳ ಅಂತರ 13 ಮತ್ತು 14ನೇ ರೌಂಡ್‌ನಲ್ಲಿ ಕ್ರಮವಾಗಿ 23,615 ಮತ್ತು 25,147ಗೆ ಏರಿಕೆಯಾಯಿತು. ಆದರೆ, ಈ ವೇಳೆ, ವಿಶ್ವನಾಥ್ ಮುನ್ನುಗ್ಗುವಷ್ಟು ಮತ ಗಳಿಸಲು ಆಗಲಿಲ್ಲ. ಅಷ್ಟೊತ್ತಿಗೆ ಸೋಲಿನ ಸುಳಿಯಿಂದ ಹೊರಬರಲಾಗದ ಹಳ್ಳಿಹಕ್ಕಿ ಪರಾಜಯವನ್ನು ಒಪ್ಪಿಕೊಳ್ಳದೆ ವಿಧಿ ಇರಲಿಲ್ಲ.

15ನೇ ಸುತ್ತಿನಲ್ಲಿ 27,826 ಮತಗಳು, 16ನೇ ಸುತ್ತಿನಲ್ಲಿ 31 ಸಾವಿರ ಮತಗಳು ಮುನ್ನಡೆಯೊಂದಿಗೆ ವಿಜಯದತ್ತ ಸಾಗಿದ ಮಂಜುನಾಥ್, ಅಂತಿಮ ಸುತ್ತಾದ 20ನೇ ರೌಂಡ್‌ನಲ್ಲಿ ಬರೋಬ್ಬರಿ 39,727 ಮತಗಳ ಅಂತರದೊಂದಿಗೆ ಪ್ರಚಂಡ ಜಯ ದಾಖಲಿಸಿಕೊಂಡರು. ಕೊನೆಯಲ್ಲಿ ಅವರು 92,725 ಮತ ಪಡೆದ್ದರೆ, ವಿಶ್ವನಾಥ್ ಕೇವಲ 52998 ಮತ ಪಡೆದು ಸೋಲು ಸ್ವೀಕರಿಸಿದರು.


ಒಟ್ಟು 2,28,211 ಮತಗಳ ಪೈಕಿ 1,82,811 ಮತಗಳು ಚಲಾವಣೆಯಾಗಿದ್ದವು. 944 ನೋಟಾ ಮತಗಳು, 2 ಮತಗಳು ತಿರಸ್ಕೃತವಾಗಿವೆ.

ಅಂಚೆ ಮತಗಳಲ್ಲೂ ಮುನ್ನಡೆ: ಅಂಚೆ ಮತದಾನದಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಸರ್ಕಾರಿ ಸಿಬ್ಬಂದಿ ಕೂಡ ಮಂಜುನಾಥ್ ಪರ ಒಲವು ತೋರಿದ್ದಾರೆ. ಚಲಾವಣೆಯಾದ 77 ಬ್ಯಾಲೆಟ್ ಮತ ಪೈಕಿ ಕೈಗೆ 46 ಮತಗಳು ಬಿದ್ದಿವೆ. ಬಿಜೆಪಿಗೆ 28 ಮತಗಳು ಹೋಗಿವೆ. ಉಳಿದ ಮೂರು ಮತಗಳು ತಲಾ ಮೂವರು ಅಭ್ಯರ್ಥಿಗಳಿವೆ ಬಿದ್ದಿವೆ.


ನೋಟಾಗೆ 5ನೇ ಸ್ಥಾನ: 10 ಅಭ್ಯರ್ಥಿಗಳ ಪೈಕಿ ನೋಟಾವೇ 5ನೇ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ. ನೋಟಾ (ನನ್ ಆಫ್ ದಿ ಎಬೋವ್- ಮೇಲಿನ ಯಾರೂ ಬೇಡ) ಮತವನ್ನು 994 ಮತದಾರರು ಚಲಾಯಿಸಿದ್ದು, ಈ ಮೂಲಕ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ಇವರು ತಿರಸ್ಕರಿಸಿದ್ದಾರೆ.

ನಿಜವಾದ ಭವಿಷ್ಯ: ಹುಣಸೂರು ಉಪ ಚುನಾವಣೆ ಕುರಿತು ನುಡಿದಿದ್ದ ಭವಿಷ್ಯ ನಿಜವಾಗಿದೆ.
ಮೂರ‌್ನಾಲ್ಕು ತಿಂಗಳ ಹಿಂದೆ ಈ ಕುರಿತು ಶಾಸಕ ಜಿ.ಟಿ.ದೇವೇಗೌಡ ಬಿಜೆಪಿಯ ಸೋಲಿನ ಸುಳಿವು ನೀಡಿದ್ದರು. ಹುಣಸೂರಿನಲ್ಲಿ ಶೆಟ್ಟಿ ಗೆಲ್ಲುತ್ತಾರೆ ಎಂದು ಹೇಳಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಜೆಡಿಎಸ್‌ಗೆ ಮುಜುಗರ ಉಂಟು ಮಾಡಿತ್ತು.

ಭಾನುವಾರ ಸಂಸದ ಶ್ರೀನಿವಾಸಪ್ರಸಾದ್ ಅವರು ಫಲಿತಾಂಶಕ್ಕೂ ಮುನ್ನ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದರು. ‘ಎಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ? ಸೋತರೂ ಏನು ಪರಿಣಾಮ ಬೀರೋಲ್ಲ’ ಎಂಬ ಅವರ ಹೇಳಿಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಜತೆಗೆ, ಮತದಾನೋತ್ತರ ಸಮೀಕ್ಷೆಗಳಲ್ಲೂ ಈ ಸುಳಿವು ದೊರೆತಿತ್ತು. ಕಾಂಗ್ರೆಸ್‌ಗೆ ಮೊದಲ ಸ್ಥಾನ ಮತ್ತು ಜೆಡಿಎಸ್, ಬಿಜೆಪಿಗೆ ಸೋಲಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದೀಗ ಈ ಭವಿಷ್ಯಗಳು ನಿಜವಾಗಿವೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...